ಲಾಡ್ಜ್‌ನಲ್ಲಿ ಹಾಡು ಹಗಲೇ ನಡೆಯುತ್ತಿದ್ದ ವೇಶ್ಯಾವಾಟಿಕೆ|ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣ| ಲಾಡ್ಜ್ ಮಾಲೀಕರ ಒಳಗೊಂಡು 10 ಜನರ ಬಂಧನ| ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಸೇಡಂ(ಏ.16): ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಬಯಲು ಮಾಡುವಲ್ಲಿ ಸೇಡಂ ಪೊಲೀಸರು ಯಶಸ್ವಿಯಾಗಿದ್ದು, ಪಟ್ಟಣದ ಬಸ್ ನಿಲ್ದಾಣದ ಎದುರಿನ ಎರಡು ಲಾಡ್ಜ್‌ನಲ್ಲಿ ಹಾಡು ಹಗಲೇ ನಡೆಯುತ್ತಿದ್ದ ವೇಶ್ಯಾವಾಟಿಕೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಹಲವರನ್ನು ಬಂಧಿಸಿದ್ದಾರೆ.
ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್‌ಗಳ ಮೇಲೆ ಸಿಪಿಐ ರಾಜಶೇಖರ ಹಳಗೋದಿ, ಪಿಎಸ್‌ಐ ನಾನಾಗೌಡ ಮತ್ತು ಅಪರಾಧ ವಿಭಾಗದ ಪಿಎಸ್‌ಐ ಅಯ್ಯಪ್ಪ ಭೀಮವರಂ ತಂಡ ದಾಳಿ ನಡೆಸಿದೆ.
ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ : ಇಬ್ಬರ ಮಹಿಳೆಯರ ರಕ್ಷಣೆ
ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಎರಡೂ ಲಾಡ್ಜ್ ಮಾಲೀಕರ ಒಳಗೊಂಡು 10 ಜನ ಪುರುಷರನ್ನು ಪೊಲೀಸರು ಬಂಧಿಸಿದ್ದು, 8 ಜನ ಮಹಿಳೆಯರನ್ನು ರಕ್ಷಿಸಿದ್ದಾರೆ. ವಿಚಾರಣೆ ವೇಳೆ ಬಂಧಿತರು ಕಲಬುರಗಿ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಸೇರಿದವರು ಎಂದು ತಿಳಿದು ಬಂದಿದೆ. ದಾಳಿ ವೇಳೆ ಎರಡೂ ಲಾಡ್ಜ್‌ಗಳಲ್ಲಿನ ಡಿವಿಆರ್ ವಶಕ್ಕೆ ಪಡೆಯಲಾಗಿದ್ದು, ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.