Bidar Accident: ಮಗನ ಮದುವೆಯ ಕಾರ್ಡ್‌ ನೀಡಲು ಹೋದ ದಂಪತಿ ಅಪಘಾತದಲ್ಲಿ ದುರ್ಮರಣ

Suvarna News   | Asianet News
Published : Dec 02, 2021, 10:48 AM ISTUpdated : Dec 02, 2021, 11:05 AM IST
Bidar Accident: ಮಗನ ಮದುವೆಯ ಕಾರ್ಡ್‌ ನೀಡಲು ಹೋದ ದಂಪತಿ ಅಪಘಾತದಲ್ಲಿ ದುರ್ಮರಣ

ಸಾರಾಂಶ

*  ಬೀದರ್‌ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾಲಾಲ್ ಬಳಿ ನಡೆದ ಘಟನೆ *  ಸಂಬಂಧಿಕರಿಗೆ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ತೆರಳಿದ್ದ ದಂಪತಿ *  ಈ ಸಂಬಂಧ ಧನ್ನೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು    

ಬೀದರ್(ಡಿ.02):  ಪುತ್ರ‌ನ ಮದುವೆಯ(Marriage) ಆಮಂತ್ರಣ ಪತ್ರಿಕೆ ನೀಡಲು ಹೋದ ದಂಪತಿಗಳು ಅಪಘಾತದಲ್ಲಿ(Accident) ದುರ್ಮರಣಕ್ಕೀಡಾದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾಲಾಲ್ ನಿನ್ನೆ(ಬುಧವಾರ) ತಡರಾತ್ರಿ ನಡೆದಿದೆ. ಈ ಮೂಲಕ ಮದುವೆಯ ಸಂಭ್ರಮದ ಖುಷಿಯಲ್ಲಿದ್ದ ಕುಟುಂಬಸ್ಥರಿಗೆ ಅಪಘಾತದ ಸುದ್ದಿ ಆಘಾತದ ತಂದಿದೆ. 

ಭಾಲ್ಕಿಯ(Bhalki) ಕಾಂಗ್ರೆಸ್(Congress) ಪಕ್ಷದ ಮುಖಂಡ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಸೂರ್ಯಕಾಂತ ಪಾಟೀಲ್(50)(Suryakanth Patil) ಹಾಗೂ ಜಯಶ್ರೀ ಪಾಟೀಲ್ (45)(Jayashri Patil) ಮೃತ ದುರ್ದೈವಿಗಳಾಗಿದ್ದಾರೆ. ಬೀದರ್(Bidar) ನಗರದಲ್ಲಿ ಸಂಬಂಧಿಕರಿಗೆ ಮದುವೆಯ ಆಮಂತ್ರಣ ಪತ್ರಿಕೆ(Invitation Card) ನೀಡಿ ಭಾಲ್ಕಿಗೆ ವಾಪಸ್‌ ಆಗುವಾಗ ಈ ದುರ್ಘಟನೆ ಸಂಭವಿಸಿದೆ.

Vijayapura Accident: ಭೀಕರ ರಸ್ತೆ ಅಪಘಾತ, ಶಾಸಕ‌‌‌‌ ದೇವಾನಂದ‌ ಅಳಿಯ ವಿಜಯಕುಮಾರ್ ಸೇರಿ ನಾಲ್ವರು ಸಾವು!

ಬೀದರ್‌ನಿಂದ ಭಾಲ್ಕಿಗೆ ವಾಪಸ್‌ ಆಗುವಾಗ ತಡರಾತ್ರಿ ಕಾರು ಪಲ್ಟಿಯಾದ ಪರಿಣಾಮ ದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇದೇ ತಿಂಗಳ 26 ರಂದು ಪುತ್ರ ಸಾಯಿನಾಥ ಸೂರ್ಯಕಾಂತ ಪಾಟೀಲ್ ಮದುವೆ ನಡೆಯಬೇಕಿತ್ತು. ಮಗನ ಮದುವೆಯ ಖುಷಿಯಲ್ಲಿದ್ದ ಕುಟುಂಬಸ್ಥರಲ್ಲಿ ಇದೀಗ ಸೂತಕ ಛಾಯೆ ಆವರಿಸಿದೆ.  ಘಟನಾ ಸ್ಥಳಕ್ಕೆ ಶಾಸಕ ಈಶ್ವರ ಖಂಡ್ರೆ(Eshwar Khandre) ಹಾಗೂ ‌ಪೊಲೀಸರು(Police) ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಧನ್ನೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ. 

ಬೈಕ್‌ ಹಿಂಭಾಗಕ್ಕೆ ಬೈಕ್‌ ಡಿಕ್ಕಿ: ಸವಾರನಿಗೆ ಗಾಯ

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ಬಸ್‌ ನಿಲ್ದಾಣದ ಸಮೀಪ ಸರ್ವಿಸ್‌ ರಸ್ತೆಯಲ್ಲಿ ಬಸ್‌ನ ಹಿಂಭಾಗಕ್ಕೆ ಬೈಕ್‌ ಸವಾರ ಡಿಕ್ಕಿ ಹೊಡೆದಿದ್ದು ಸವಾರ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾದ ಘಟನೆ ಬುಧವಾರ ನಡೆದಿದೆ.

ಮೂಲ್ಕಿಯಿಂದ ಕಿನ್ನಿಗೋಳಿಗೆ ಹೋಗುತ್ತಿದ್ದ ಸರ್ವಿಸ್‌ ಬಸ್‌ ನಿಲ್ದಾಣದಿಂದ ಹೊರಟು ಜಂಕ್ಷನ್‌ ಬಳಿ ಯುಟರ್ನ್‌ ಹೊಡೆಯುತ್ತಿದ್ದಂತೆ ಸರ್ವಿಸ್‌ ರಸ್ತೆಯಲ್ಲಿ ಉಡುಪಿ ಕಡೆಯಿಂದ ಮಂಗಳೂರು(Mangaluru) ಕಡೆಗೆ ಹೋಗುತ್ತಿದ್ದ ಬೈಕ್‌ ಸವಾರ ಬಸ್‌ನ ಹಿಂಭಾಗಕ್ಕೆ ಡಿಕ್ಕಿ(Collision) ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಬೈಕ್‌ ಸವಾರ ಎಸೆಯಲ್ಪಟ್ಟು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾನೆ.

ಅಪಘಾತ: ಆರು ಜನರಿಗೆ ತೀವ್ರ ಗಾಯ

ಸಿರಿಗೆರೆ: ಕೆಟ್ಟು ನಿಂತಿದ್ದ ಗೂಡ್ಸ್‌ ಲಾರಿಗೆ ಹಿಂದಿನಿಂದ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-48ರ ಕಾತ್ರಾಳ್‌ ಕೆರೆ ಸೇತುವೆಯ ಮೇಲೆ ಮಂಗಳವಾರ ರಾತ್ರಿ ನಡೆದಿದೆ.

Road accident: ದಂಪತಿ ಇಬ್ಬರು ಮಕ್ಕಳ ದಾರುಣ ಸಾವು

ಸಂತೋಷ್‌, ಸಾಗರ್‌, ವರ್ಷ, ಸಚಿನ್‌, ವಿಜಯ ಮತ್ತು ಮಂಜುನಾಥ್‌ ಗಾಯಗಂಡವರು. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಭರಮಸಾಗರ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಟಿ.ರಾಜು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಭರಮಸಾಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು-ಬೈಕ್‌ ಡಿಕ್ಕಿ: ಓರ್ವಗೆ ಗಾಯ

ಭಟ್ಕಳ(Bhatkal): ತಾಲೂಕಿನ ಬೆಳಕೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಕಾರು ಹಾಗೂ ಬೈಕ್‌ ನಡುವಿನ ಅಪಘಾತದಲ್ಲಿ ಬೈಕ್‌ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಗಾಯಾಳು ಬೈಕ್‌ ಸವಾರ ತಾಲೂಕಿನ ಮುಟ್ಟಳ್ಳಿಯ ಯೋಗೇಶ ಮಾಸ್ತಪ್ಪ ನಾಯ್ಕ ಎಂದು ಗುರುತಿಸಲಾಗಿದೆ. ಕುಂದಾಪುರದ(Kundapur) ಕಡೆಯಿಂದ ಬರುತ್ತಿದ್ದ ಕಾರಿಗೆ ಬೈಕಿ ಡಿಕ್ಕಿ ಹೊಡೆದು ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಕುರಿತು ಕಾರಿನ ಚಾಲಕ ಗೋವಾದ ರಮೇಶ ಎನ್ನುವವರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಬ್‌ ಇನ್‌ಸ್ಪೆಕ್ಟರ್‌ ರತ್ನಾ ಎಸ್‌.ಕೆ. ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
 

PREV
Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ