ಕೊರೋನಾ ಭೀತಿ : ಭಾರತಕ್ಕೆ ಬಂದ ಕಾರವಾರದ ಯುವಕ

Kannadaprabha News   | Asianet News
Published : Feb 27, 2020, 01:51 PM IST
ಕೊರೋನಾ ಭೀತಿ : ಭಾರತಕ್ಕೆ ಬಂದ ಕಾರವಾರದ ಯುವಕ

ಸಾರಾಂಶ

ಕೊರೋನಾ ಭೀತಿಯಿದ್ದ ಡೈಮಂಡ್ ಪ್ರಿನ್ಸಸ್ ಹಡಗಿನಿಂದ ಕಾರವಾರದ ಯುವಕ ಅಭಿಷೇಕ್ ಮಗರ್ ಸುರಕ್ಷಿತವಾಗಿ ವಾಪಸಾಗಿದ್ದಾರೆ. 

ಕಾರವಾರ (ಫೆ.27): ಕರೋನಾ ವೈರಸ್ ಆತಂಕ ಹಿನ್ನೆಲೆ ಜಪಾನಿನ ಯುಕೋಮಾದಲ್ಲಿ ತಡೆಹಿಡಿದ ಕ್ರೂಸ್ ಹಡಗಿನಲ್ಲಿದ್ದ ಕಾರವಾರದ ಯುವಕ ಅಭಿಷೇಕ್ ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದಿದ್ದಾರೆ. 
 
 ಡೈಮಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಲ್ಲಿನ ಪದ್ಮನಾಭನಗರದ ಯುವಕ ಅಭಿಷೇಕ ಮಗರ್ ಭಾರತಕ್ಕೆ ಬಂದಿದ್ದು, ಇವರ ಜತೆಗೆ 127 ಕ್ಕೂ ಅಧಿಕ ಭಾರತಿಯರನ್ನು ಬಿಡಲಾಗಿದೆ . 

37 ದೇಶಗಳಿಗೆ ವ್ಯಾಪಿಸಿದ ಕೊರೋನಾ...

ಕಳೆದ ಮೂರುತಿಂಗಳಿನಿಂದ ಡೈಮಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಭಿಷೇಕ್ ಚೀನಾದಿಂದ ಜಪಾನ್ ಗೆ ತೆರಳುತ್ತಿದ್ದ ಕ್ರೂಸ್ ನಲ್ಲಿ ಸಿಬ್ಬಂದಿಯಾಗಿಕಾರ್ಯನಿರ್ವಹಿಸುತ್ತಿದ್ದರು. 

ಇರಾನ್‌ ಆರೋಗ್ಯ ಸಚಿವರಿಗೇ ಕೊರೋನಾ ವೈರಸ್!...

ಕರೋನ ವೈರಸ್ ಆತಂಕದಿಂದ ಯುಕೋಮದಲ್ಲಿ ಫೆ. 7 ರಂದು ಜಪಾನ್ ಸರ್ಕಾರ ಕ್ರೂಸ್‌ಗೆ ತಡೆ ಹಿಡಿತಿತ್ತು. 20 ಕ್ಕೂ ಹೆಚ್ಚಿನ ದಿನ ಜಪಾನ್ ಸರ್ಕಾರ ಈ ಹಡಗನ್ನು ತಡೆಹಿಡಿದು ಅಲ್ಲಿನ ಪ್ರಯಾಣಿಕರ, ಹಡಗಿನ ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಿತ್ತು. ಅಭಿಷೇಕ ತಂದೆ ಬಾಲಕೃಷ್ಣ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಪುತ್ರನನ್ನು ಕರೆತರಲು ಸಹಾಯ ಮಾಡುವಂತೆ ಮನವಿ ಕೂಡಾ ನೀಡಿದ್ದರು.

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ