'2023ಕ್ಕೆ ಕಾಂಗ್ರೆಸ್‌ಗೆ ಅಧಿಕಾರ : ಸಿದ್ದರಾಮಯ್ಯಗೆ ಸಿಎಂ ಪಟ್ಟ'

By Kannadaprabha NewsFirst Published Sep 23, 2021, 1:29 PM IST
Highlights
  • ಕುರುಬ ಸಮುದಾಯ ಸಾಮಾಜಿಕ ಶೈಕ್ಷಣಿಕ  ಹಾಗು ರಾಜಕೀಯವಾಗಿ ಪ್ರಗತಿ ಸಾಧಿಸಬೇಕು
  • ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆಂದ ಮುಖಂಡ

ಮದ್ದೂರು (ಸೆ.23): ಕುರುಬ ಸಮುದಾಯ ಸಾಮಾಜಿಕ ಶೈಕ್ಷಣಿಕ  ಹಾಗು ರಾಜಕೀಯವಾಗಿ (Politics) ಪ್ರಗತಿ ಸಾಧಿಸಬೇಕು ಎಂದು ಪ್ರದೇಶ  ಕುರುಬ ಸಂಘದ ರಾಜ್ಯಾಧ್ಯಕ್ಷ  ಸುಬ್ರಹ್ಮಣ್ಯ  ಹೇಳಿದರು. 

ಪಟ್ಟಣದ ಮಳವಳ್ಳಿ ರಸ್ತೆಯ ಶ್ರೀ ಕನಕ ಭವನದಲ್ಲಿ ತಾಲೂಕು ಕುರುಬರ ಸಂಘದ ಮಹಿಳಾ  ಯುವ ಘಟಕಗಳ ರಚನೆ ಸಮಾಜದ ಸಂಘಟನೆಯ ಮುಖಂಡರು ಹಾಗು ಜನಪ್ರತಿನಿಧಿಗಳ  ಪೂರ್ವಸಭೆ  ಉದ್ಘಾಟಿಸಿ ಮಾತನಾಡಿ ಕುರುಬರ ಸಮುದಾಯ  ಸಮಾಜದ ಮುಖ್ಯವಾಹಿನಿಗೆ ಬರಲು ಒಗ್ಗಟ್ಟು ಪ್ರದರ್ಶನ ಅತ್ಯಗತ್ಯ ಎಂದರು. 

ಸಮುದಾಯ ಸಂಘಗಳು ಇದರ ಅವಶ್ಯಕತೆ  ಅರಿತು ಮೊದಲು ಸಂಘಗಳ  ಸ್ಥಾಪನೆಗೆ ಮೊದಲ ಆದ್ಯತೆ ನೀಡಬೇಕು. ಆನಂತರ ಸಂಘಟನೆಗಳ ಬಗ್ಗೆ  ಚರ್ಚೆ ನಡೆಸಿ ಸಮುದಾಯ ರಾಜ್ಯದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು. 

ಸಿದ್ರಾಮಣ್ಣ ಸಿಎಂ ಆಗಿದ್ರಿಂದಾನೆ ನಾನ್ ಮತ್ತೆರಡು ಸರಿ ಶಾಸಕನಾಗಿದ್ದು ಎಂದ ಜೆಡಿಎಸ್ MLA

ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಮೀಸಲಾತಿ (reservation) ದೊರಕಿಸಿರುವ ಕೀರ್ತಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಮೀಸಲಾತಿ ಜಾರಿಗೊಳಿಸಲು ಹೋರಾಟ ನಡೆಸದಿದ್ದಲ್ಲಿ  ಕುರುಬರ ಸಮುದಾಯದ ಯಾರೊಬ್ಬರು ನಾಯಕರಾಗಿ ಹೊರಹೊಮ್ಮಲು ಸಾಧ್ಯವಾಗುತ್ತಿರಲಿಲ್ಲ ಎಂದರು. 

ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ ಎಂದು ಪ್ರದೇಶ ಕುರುಬರ  ಸಂಘದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ  ಹೇಳಿದರು. 

'ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅಭಿವೃದ್ಧಿ ಕ್ರಾಂತಿ'

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿಎಂ ಆಗಿ ಆಡಳಿತ ನಡೆಸಿರುವ ಡಿ. ದೇವರಾಜ ಅರಸ್ 5 ವರ್ಷಗಳ ಕಾಲ ಉತ್ತಮ ಆಡಳಿತ ನಡೆಸುವ ಮೂಲಕ ಸಿದ್ದರಾಮಯ್ಯರ ಆಡಳಿತವನ್ನು ಕೇವಲ  ಕುರುಬರ  ಸಮುದಾಯ ಮಾತ್ರವಲ್ಲದೇ ಇಡೀ ರಾಜ್ಯದ ಜನತೆ ಮೆಚ್ಚಿಕೊಂಡಿದ್ದಾರೆ ಎಂದರು. 

ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ (assembly Election) ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅಧಿಕಾರದ ಚುಕ್ಕಾಣಿ  ಹಿಡಿಯಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು. 

ಈ ಹಿಂದೆಯೂ ಬೇರೆ ಪಕ್ಷದ ಮುಖಂಡರು ಸಿದ್ದರಾಮಯ್ಯ ಅಡಳಿತದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು. ಇದೀಗ ಕುರುಬ ಮುಖಂಡರು ಸಿದ್ದರಾಮಯ್ಯ ರಾಜ್ಯದಲ್ಲಿ ಮುಂಬರುವ ವಿಧಾನಸಣಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

click me!