'ಬಿಜೆಪಿಗೆ ಅತೀ ಹೆಚ್ಚು ಸ್ಥಾನದ ವಿಶ್ವಾಸ : ಮೋದಿ ಬೆಂಬಲಿಸಲು ಪೋಸ್ಟ್ ಕಾರ್ಡ್ ಅಭಿಯಾನ'

By Kannadaprabha NewsFirst Published Sep 23, 2021, 12:31 PM IST
Highlights
  • ಬರುವಂತ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅತೀ ಹೆಚ್ಚಿನ ಸ್ಥಾನ ಗೆಲ್ಲಲು ಪ್ಲಾನ್
  •   ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ  ಗೆಲ್ಲಿಸಿಕೊಂಡು ವಿಧಾನಸೌಧಕ್ಕೆ ಕರೆದುಕೊಂಡು ಹೋಗುವ ವಿಶ್ವಾಸ

ತುಮಕೂರು (ಸೆ.23): ಬರುವಂತ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಯಲ್ಲಿ (Election) ಪಾವಗಡದಲ್ಲಿ ಬಿಜೆಪಿ ಅತೀ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka assembly election) ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ವಿಧಾನಸೌಧಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ ಸುರೇಶ್ ಗೌಡ ತಿಳಿಸಿದರು. 

ಪಾವಗಡ ತಾಲುಕು ದೊಡ್ಡಹಳ್ಳಿ ಸೇವೆ ಹಾಗು ಸಮಪರ್ಣಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಹಿನ್ನೆಲೆಯಲ್ಲಿ  ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7ರವರೆಗೆ ಸೇವೆ ಹಾಗು ಸಮರ್ಪಣಾ  ಅಭಿಯಾನದ ಮೂಲಕ ಲಕ್ಷಾಂತರ ಜನರಿಗೆ ನೆರವು ನೀಡಲಾಗುವುದು ಎಂದರು. 

ಪ್ರಧಾನಿ ಮೋದಿ ಜನ್ಮ ದಿನ : ಬಿಜೆಪಿಯಿಂದ 20 ದಿನ ಉತ್ಸವ!

ಗ್ರಾಮಗಳಲ್ಲಿ ದಿವ್ಯಾಂಗರಿಗೆ ಸೈಕಲ್ ಬೈಕ್, ಶ್ರವಣ ಸಾದನ ಸೇರಿದಂತೆ ಅಗತ್ಯ ಉಪಕರಣ ನೀಡುವುದು ಸೇರಿದಂತೆ ಉಚಿತ ಆರೋಗ್ಯ ತಪಾಸನಾ  ಶಿಬಿರ ನಡೆಸುವುದು ಸೇರಿದಂತೆ ಆಸ್ಪತ್ರೆಗಳಲ್ಲಿ ಹಣ್ಣು ಹಂಪಲನ್ನು ವಿತರಿಸುವಂತೆ ಪಕ್ಷದ ಕಾರ್ಯಕರ್ತರಿಗೆ  ಸೂಚಿಸಿದರು. 

ಮೋದಿ ಬೆಂಬಲಿಸಲು ಪೋಸ್ಟ್ ಕಾರ್ಡ್ ಬರೆಯಲು ಪ್ರೇರೇಪಿಸಿ : ದೇಶದಲ್ಲಿ ಮೊದಿ ಅವರಿಗೆ ಧನ್ಯವಾದ ತಿಳಿಸುವ  ಪೋಸ್ಟ್ ಕಾರ್ಡ್ (Post Card) ಬರೆಯಲು ಪ್ರೇರೇಪಿಸಬೇಕು. ಪ್ರತೀ ಬೂತ್‌ನಿಂದ ಕನಿಷ್ಠ 100 ಪತ್ರಗಳು ದಿಲ್ಲಿ ತಲುಪಬೇಕು. ಈ ನಿಟ್ಟಿನಲ್ಲಿ ನಾವೆಲ್ಲಾ ಕೂಡಲೇ ಪತ್ರ ಬರೆದು ಮೋದಿ ಅವರಿಗೆ ಧನ್ಯವಾದ ಸಮರ್ಪಣೆ  ಮಾಡಬೇಕು ಎಂದರು. 

ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ (BJP) ಅಧ್ಯಕ್ಷ ರವಿ ಶಂಕರ್,  ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಪ್ರಭಾಕರ್. ತಾಲೂಕು ಪ್ರಧಾನ ಕಾರ್ಯದರ್ಶಿ ಅಶೋಕ್ ಸೇರಿದಂತೆ ವಿವಿಧ ಮುಖಂಡರು ಇದ್ದರು. 

ವಿವಿಧ ಕಾರ್ಯಕ್ರಮ

ಮೋದಿ ಅವರ 72ನೇ ಹುಟ್ಟುಹಬ್ಬವಾದ (Birthday) ಸೆ.17ರಿಂದ 20 ದಿನಗಳ ಕಾಲ ಬಿಜೆಪಿಯ ಮೆಗಾ ಅಭಿಯಾನ ದೇಶಾದ್ಯಂತ ನಡೆಯಲಿದೆ. ಕರ್ನಾಟಕದಲ್ಲಿಯೂ ಬಿಜೆಪಿಯ ವತಿಯಿಂದ ಸೆ.17ರಿಂದ ಅ.6ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸುವ ಪುಸ್ತಕವೊಂದನ್ನು ಬಿಡುಗಡೆ ಮಾಡಲಿದ್ದಾರೆ. ದೇಶದ ಉದ್ದಗಲಕ್ಕೂ ನಡೆಯುವ ಈ ಕಾರ್ಯಕ್ರಮಗಳಲ್ಲಿ ಅಸಂಖ್ಯಾತ ಸಚಿವರು, ಶಾಸಕರು, ಮುಖಂಡರು ಪಾಲ್ಗೊಂಡು ಯಶಸ್ಸಿಗೆ ಸಾಥ್‌ ನೀಡಲಿದ್ದಾರೆ.

ಭದ್ರ ಭಾರತಕ್ಕೆ ಬುನಾದಿ ಹಾಕಿದ ‘ಮೋದಿ ಸಿದ್ಧಾಂತ’

2001ರ ಅ.7ರಂದು ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಒಮ್ಮೆಯೂ ಶಾಸಕ ಕೂಡ ಆಗದೆ ನೇರವಾಗಿ ಮುಖ್ಯಮಂತ್ರಿ ಗದ್ದುಗೆಗೇರಿದ್ದರು. ಗುಜರಾತಿನ ಅಭಿವೃದ್ಧಿಗೆ ಹೊಸ ವೇಗ ನೀಡಿದರು. ಯಶಸ್ವಿಯಾಗಿ ಆಡಳಿತ ನಡೆಸುವ ಮೂಲಕ ಗುಜರಾತ್‌ ಮಾದರಿ ಎಂಬ ಹೊಸ ಪದವನ್ನೇ ಸೃಷ್ಟಿಸಿದ್ದರು. 2013ರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದ ಅವರು, ಐತಿಹಾಸಿಕ ಬಹುಮತದೊಂದಿಗೆ ಬಿಜೆಪಿಯನ್ನು ಗದ್ದುಗೆಗೇರಿಸಿದರು. 2014ರಲ್ಲಿ ಪ್ರಧಾನಿಯಾದರು. ಆನಂತರವು ಹಲವು ಯೋಜನೆ, ಸುಧಾರಣೆ, ದಿಟ್ಟನಿರ್ಧಾರಗಳ ಮೂಲಕ ಜನಸಾಮಾನ್ಯರ ಮನ ಗೆದ್ದರು. ಒಟ್ಟಾರೆ 2001ರಿಂದ 2021ರವರೆಗೂ ಮೋದಿ ಅವರು ಸತತ 20 ವರ್ಷಗಳ ಕಾಲ ಅಧಿಕಾರದಲ್ಲಿದ್ದಾರೆ. ಒಮ್ಮೆಯೂ ಮಾಜಿ ಆಗಿಲ್ಲ. ಬಿಜೆಪಿ ಎಂದಿಗೂ ಗೆಲ್ಲದ ರಾಜ್ಯಗಳಲ್ಲಿ ಪಕ್ಷವನ್ನು ಗೆಲ್ಲಿಸಿದ, ಬಿಜೆಪಿಯನ್ನು ವಿಶ್ವದ ಅತಿದೊಡ್ಡ ಪಕ್ಷವನ್ನಾಗಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ.

click me!