ಲಂಚ ಸ್ವೀಕರಿಸುವ ವೇಳೆ ಹರಿಹರ ನಗರ ಸಭೆ ಕಾಂಗ್ರೆಸ್ ಸದಸ್ಯೆ ಹಾಗು ನಗರಸಭಾ ಸಹಾಯಕ ಇಂಜಿನಿಯರ್ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಜೂನ್ 16): ಲಂಚ ಸ್ವೀಕರಿಸುವ ವೇಳೆ ಹರಿಹರ ನಗರ ಸಭೆ ಕಾಂಗ್ರೆಸ್ ಸದಸ್ಯೆ ಹಾಗು ನಗರಸಭಾ ಸಹಾಯಕ ಇಂಜಿನಿಯರ್ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ನಗರ ಸಭೆ 5 ನೇಯ ವಾರ್ಡಿನ ನಾಗರತ್ನಾ ಎನ್.ಕೆ ನಗರಸಭಾ ಸದಸ್ಯೆ ಹಾಗು ಎಂ ಅಬ್ದುಲ್ ಹಮೀದ್ ಇಬ್ಬರನ್ನು ಅಧಿಕಾರಿಗಳು ಟ್ರಾಪ್ ಮಾಡಿ ಖೆಡ್ಡಕ್ಕೆ ಬೀಳಿಸಿದ್ದಾರೆ. ಇದಲ್ಲದೆ ನಗರಸಭೆ ಸದಸ್ಯೆ ನಾಗರತ್ನಾ ರವರ ಪತಿ ಮಂಜುನಾಥ ಕಾಂಡಿಕೆ ಹಾಗೂ ಅವರ ಪುತ್ರ ರೇವಂತ ಕಾಂಡಿಕೆ ಹರಿಹರ ನಗರಸಭಾ ಸಹಾಯಕ ಇಂಜಿನಿಯರ್ ಎಂ.ಅಬ್ದುಲ್ ಹಮೀದ್ ಈ ನಾಲ್ವರು ಸೇರಿ ನಗರಸಭೆಯ ಕ್ಲಾಸ 1 ಗುತ್ತಿಗೆದಾರರು ಮಹಮದ್ ಮಜರ್ ಇವರಿಗೆ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಹರಿಹರ ನಗರಸಭಾ ವ್ಯಾಪ್ತಿಯಲ್ಲಿ ಮಾಡಿದ ಗುತ್ತಿಗೆ ಕೆಲಸಗಳಿಗೆ ಬಿಲ್ ಮಾಡಲು ಹಾಗೂ ನಗರಸಭಾ ಸದಸ್ಯರಿಗೆ ತಮ್ಮ ವಾರ್ಡನಲ್ಲಿ ಮಾಡಿದ ಕೆಲಸಗಳಿಗೆ 10% ಕಮಿಶನ್ ನೀಡುವಂತೆ ಒತ್ತಾಯ ಮಾಡುತ್ತಿದ್ದರು ಎಂದು ಲೋಕಾಯುಕ್ತ ಅಧಿಕಾರಿಗಳು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಲಂಚಕ್ಕೆ ನಾಗರತ್ನರವರ ಪತಿ ಮಂಜುನಾಥ್, ಹಾಗು ಪುತ್ರ ರೇವಂತ ಇಬ್ಬರು ಸಹಕರಿಸಿದ್ದಾರೆ. ಇವರು ಕ್ಲಾಸ 1 ಗುತ್ತಿಗೆದಾರರು ಮಹಮದ್ ಮಜರ್ ರವರ ಬಳಿ 10 % ಕಮಿಷನ್ ಹಣ ನೀಡುವಂತೆ ಸದಸ್ಯರ ಪರವಾಗಿ ಒತ್ತಾಯ ಮಾಡಿದ್ದಾರೆ. ಇನ್ನು ಹರಿಹರ ನಗರಸಭಾ ಸಹಾಯಕ ಇಂಜಿನಿಯರ್ ಎಂ.ಅಬ್ದುಲ್ ಹಮೀದ್ ಸಹ 5 % ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಟೆಸ್ಟ್ ನಲ್ಲಿ ಹೆಚ್ಚು ಮಾರ್ಕ್ಸ್ ಪಡೆಯದ್ದಕ್ಕೆ ಬಾಲಕಿಗೆ ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕಿ!
ಹಣ ಕೊಡದೆ ಲೋಕಾಯುಕ್ತಕ್ಕೆ ದೂರು ನೀಡಿದ ಗುತ್ತಿಗೆದಾರ:
ಗುತ್ತಿಗೆದಾದ ಮಹಮದ್ ಮಜರ್ ರವರು ಲಂಚದ ಹಣ ನೀಡಲಾಗದೆ ದಾವಣಗೆರೆ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ಲಂಚದ ಹಣವನ್ನು ನೀಡಲು ಇಷ್ಟ ಇಲ್ಲದೆ ಇದ್ದುದರಿಂದ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು, ಪ್ರಕರಣ ದಾಖಲಿಸಿಕೊಂಡ ಸಿಬ್ಬಂದಿ ಖೆಡ್ಡಕ್ಕೆ ಬೀಳಿಸಿದ್ದಾರೆ. ಗುತ್ತಿಗೆದಾರ ಮಹಮದ್ ಮಜರ್ ರವರು ನಗರಸಭಾ ಸಹಾಯಕ ಇಂಜಿನಿಯರ್ ಗೆ ಮುಂಗಡವಾಗಿ ಎಂ.ಅಬ್ದುಲ್ ಹಮೀದ್ ರವರಿಗೆ 30,000 ಹಣ ನೀಡಿದ್ದು, ಇನ್ನು 20,000/- ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅದೇ ರೀತಿ ನಗರಸಭಾ ಸದಸ್ಯರಾದ ಶ್ರೀಮತಿ ನಾಗರತ್ನಾ, ಎನ್.ಕೆ ಇವರು ಸಹ ಈಗಾಗಲೇ 40,000 ರೂ ಪಡೆದುಕೊಂಡಿದ್ದು 20,000 ಗಳನ್ನು ಅವರ ನಿವಾಸದಲ್ಲಿ ಪಡೆಯುವಾಗ ರೆಡ್ ಹ್ಯಾಂಡ ಆಗಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ.
ಕಾಂಗ್ರೆಸ್‌ನ ಯಾವುದೇ ಭಾಗ್ಯದ ಬಗ್ಗೆ ಬೇಸರವಿಲ್ಲ: ಸಂಸದ ಬಿ.ವೈ.ರಾಘವೇಂದ್ರ
ನಾಲ್ವರನ್ನು ವಶಕ್ಕೆ ಪಡೆದ ಲೋಕಾಯುಕ್ತರು:
ದೂರು ದಾಖಲಾದ ಕೆಲವೆ ಕ್ಷಣದಲ್ಲಿ ಕಾರ್ಯಪ್ರವೃತ್ತರಾದ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡ ಸಿಬ್ಬಂದಿ ಸಾಯಂಕಾಲ ತಮ್ಮ ಹರಿಹರ ನಗರದ ತಮ್ಮ ನಿವಾಸಗಳಲ್ಲಿ ಲಂಚದ ಹಣ ಪಡೆಯುವಾಗ ಸಿಕ್ಕಿ ಬಿದ್ದಿದ್ದು, ಅವರಿಂದ ಲಂಚದ ಹಣ ವಶಪಡಿಸಿಕೊಂಡು 04 ಜನರಿಗೆ ವಶಕ್ಕೆ ತೆಗೆದುಕೊಂಡಿದ್ದು ತನಿಖೆ ಮುಂದುವರೆದಿದೆ. ಈ ಪ್ರಕರಣದಲ್ಲಿ ನಗರಸಭಾ ಸದಸ್ಯರಾದ ನಾಗರತ್ನಾ.ಎನ್.ಕೆ ಅವರ ಪತಿ ಮಂಜುನಾಥ್ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದು ಪುತ್ರ, ರೇವಂತ ಕಾಂಡಿಕೆ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಗರಸಭಾ ಸಹಾಯಕ ಇಂಜಿನಿಯರ್ ಎಂ.ಅಬ್ದುಲ್ ಹಮೀದ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಮುಂದುವರೆಸಲಾಗಿದೆ. ಇನ್ನು ಈ ದಾಳಿ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದ್ದು, ಲಂಚಾಬಾಕರನ್ನು ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.