ಕೋಲಾರ -ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ಟೊಮೆಟೋ ಈಗ ಯಾರಿಗೂ ಬೇಡವಾಗಿವೆ. ಕಾರಣ ಟೊಮೆಟೋ ತೋಟಗಳಿಗೆ ಇದ್ದಕ್ಕಿದ್ದಂತೆ ಬಿಳಿ ನೊಣವೆಂಬ ವೈರಸ್ ಹಾವಳಿ ಹೆಚ್ಚಾಗಿದ್ದು, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ತೋಟಗಳು ಒಣಗಿದಂತೆ ಆಗಿ ಗಿಡದಲ್ಲಿಯೇ ಟೊಮೆಟೋ ಕಾಯಿಗಳು ಕಮರುತ್ತಿವೆ.
ಚಿಕ್ಕಬಳ್ಳಾಪುರ (ಜೂ.16) ಕೋಲಾರ -ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ಟೊಮೆಟೋ ಈಗ ಯಾರಿಗೂ ಬೇಡವಾಗಿವೆ. ಕಾರಣ ಟೊಮೆಟೋ ತೋಟಗಳಿಗೆ ಇದ್ದಕ್ಕಿದ್ದಂತೆ ಬಿಳಿ ನೊಣವೆಂಬ ವೈರಸ್ ಹಾವಳಿ ಹೆಚ್ಚಾಗಿದ್ದು, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ತೋಟಗಳು ಒಣಗಿದಂತೆ ಆಗಿ ಗಿಡದಲ್ಲಿಯೇ ಟೊಮೆಟೋ ಕಾಯಿಗಳು ಕಮರುತ್ತಿವೆ.
ಈ ವೈರಸ್‌ನಿಂದಾಗಿ ಗಿಡದಲ್ಲಿದ್ದ ಹಣ್ಣುಗಳು ಉದುರುತ್ತಿವೆ. ಎಲೆಗಳು ಮುದುಡಿ ಒಣಗುತ್ತಿವೆ. ಇದರಿಂದ ಗುಣಮಟ್ಟದ ಟೊಮೆಟೋ ಹಣ್ಣುಗಳು ಕೈ ಗೆ ಸಿಗದೆ ತೋಟದಲ್ಲೇ ನಾಶವಾಗುತ್ತಿವೆ. ಇದರಿಂದ ೕ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಏರಿಕೆ ಕಂಡಿದ್ದ ಟೊಮೇಟೋ ಬೆಲೆ ದಿಢೀರ್ ಕುಸಿತ
ವೈರಸ್‌ಗೆ ತೋಟವೇ ನಾಶ
ಬಿಳಿ ನೊಣ ವೈರಸ್ ಕಾಟದಿಂದ ಬೇಸತ್ತ ರೈತರು ಈಗಾಗಲೇ ಟೊಮೆಟೋಗಳನ್ನು ಕಿತ್ತು ಹಾಕುತ್ತಿದ್ದಾರೆ. ಔಷಧಿಗಳನ್ನು ಹೊಡೆದರು ಏನು ಪ್ರಯೋಜನ ಆಗಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಹಿರಿಯ ಉಪ ನಿರ್ದೇಶಕರು, ಸಹಾಯಕ ತೋಟಗಾರಿಕೆ ಅಧಿಕಾರಿ ಕಮಲಾರವರು ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಟೊಮೆಟೋಗೆ ತಗುಲಿರುವ ವೈರಸ್‌ನಿಂದ ಕೆಲವೆ ಗಂಟೆಗಳಲ್ಲಿ ತೋಟವನ್ನೆ ನಾಶ ವಾಗುತ್ತಿವೆ. ಗಾಳಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಈ ವೈರಸ್ ಹರಡಿ ಜಿಲ್ಲೆಯ ಟೊಮೊಟೊ ತೋಟಗವನ್ನೇ ನುಂಗಿಹಾಕುತ್ತದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮೆಟೋ ಒಂದು ಪ್ರಮುಖ ವಾಣಿಜ್ಯ ತರಕಾರಿ ಬೆಳೆಯಾಗಿದ್ದು, ಪ್ರಸ್ತುತ ಮಾಚ್‌ರ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅತಿಯಾದ ಉಷ್ಣಾಂಶ ಹಾಗೂ ಆದ್ರತೆಯಿಂದ ಬಿಳಿ ನೊಣದ ಹಾವಳಿ ಹೆಚ್ಚಾಗಿ ಟಮೋಟೊ ಇಳುವರಿ ಕುಂಠಿತವಾಗಿದೆæ. ಟೊಮೆಟೋ ಬೆಳೆಯಲ್ಲಿ ಬಿಳಿ ನೊಣದ ಹಾವಳಿಯಿಂದ ಎಲೆ ಮುದುಡುವ ರೋಗವನ್ನು ನಿಯಂತ್ರಿಸಲು ಇಲಾಖೆ ಸೂಚಿಸುವ ಕ್ರ ಪಾಲಿಸುವಂತೆ ತೋಟಗಾರಿಕೆ ಉಪ ನಿರ್ದೇಶಕಿ ಗ್ರಾಯತ್ರಿ ತಿಳಿಸಿದ್ದಾರೆ.
ರೋಗದ ಲಕ್ಷಣಗಳು:
ಬಿಳಿ ನೊಣವು ಅಲೈರಾಡಿಡೈ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿದ್ದು ಹೆಮಿಪಿಪೆಟ್ರಾ ಎಂಬ ಕುಟುಂಬಕ್ಕೆ ಸೇರಿರುವ ಅತ್ಯಂತ ಚಿಕ್ಕ ಚಿಟ್ಟೆಯ ರೂಪದಲ್ಲಿರುವ ಕೀಟವಾಗಿದ್ದು ಗಿಡಗಳ ಎಲೆಗಳ ಕೆಳಭಾಗದಲ್ಲಿ ರಸವನ್ನು ಹೀರಿ ತಿನ್ನುತ್ತದೆ ಹಾಗೂ ಮೊಟ್ಟೆಗಳನ್ನು ಎಲೆಗಳ ಕೆಳಭಾಗದಲ್ಲಿ ಇಡುವದರಿಂದ ಎಲೆ, ಗಿಡದ ನೀರಿನ ಅಂಶವನ್ನು ಹೀರಿಕೊಳ್ಳುವದರಿಂದ ಎಲೆಗಳು ಮೇಲ್ಮುಕವಾಗಿ ಮುದುಡುತ್ತವೆ ಹಾಗೂ ಎಲೆಗಳಲ್ಲಿ ಹಸಿರು ಮತ್ತು ಹಳದಿ ಬಣ್ಣದಿಂದ ಕೂಡಿದ ಮಚ್ಚೆಗಳು ಮತ್ತು ಬೊಬ್ಬೆಗಳು ಕಂಡುಬರುತ್ತವೆ. ವೈರಸ್ ನಿಯಂತ್ರಣಕ್ಕಾಗಿ ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕು ತೋಟಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ತಿಳಿಸಿದರು.
Kitchen Hacks: ಈ ಟ್ರಿಕ್ಸ್ ಟ್ರೈ ಮಾಡಿ ಹಸಿರು ಟೋಮ್ಯಾಟೋವನ್ನು ಹಣ್ಣಾಗಿಸಿ
ಸಿಕೆಬಿ-2 ಮತ್ತು 3 ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಳಿ ನೊಣ ಹಾವಳಿಯಿಂದಾಗಿ ರೈತರೊಬ್ಬರ ಟೊಮೆಟೋ ತೋಟ ಒಣಗಿರುವುದು.