ದಾವಣಗೆರೆ: ಮಾಜಿ ಸಚಿವ ಯುಟಿ ಖಾದರ್ ಅವರಿದ್ದ ಕಾರು ಅಪಘಾತ

Suvarna News   | Asianet News
Published : Apr 14, 2021, 12:27 PM ISTUpdated : Apr 14, 2021, 03:38 PM IST
ದಾವಣಗೆರೆ: ಮಾಜಿ ಸಚಿವ ಯುಟಿ ಖಾದರ್ ಅವರಿದ್ದ ಕಾರು ಅಪಘಾತ

ಸಾರಾಂಶ

ಅಪಾಯದಿಂದ ಪಾರಾದ ಯುಟಿ ಖಾದರ್| ದಾವಣಗೆರೆ ಆನಗೋಡು ಮಧ್ಯೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದ ಅಪಘಾತ| ಮುಂದೆ ಹೋಗುತ್ತಿದ್ದ ಕಂಟೇನೈರ್‌ಗೆ ಡಿಕ್ಕಿ ಹೊಡೆದ ಕಾರು| ಘಟನಾ ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ| 

ದಾವಣಗೆರೆ(ಏ.14): ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಚಿವ ಯುಟಿ ಖಾದರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾದ ಘಟನೆ ದಾವಣಗೆರೆ ಆನಗೋಡು ಮಧ್ಯೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಇಂದು(ಬುಧವಾರ) ನಡೆದಿದೆ. ಯು.ಟಿ.ಖಾದರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

"

ಯುಟಿ ಖಾದರ್ ಅವರಿದ್ದ ಕಾರು ವೇಗವಾಗಿ ಚಲಿಸಿ ಮುಂದೆ ಹೋಗುತ್ತಿದ್ದ ಕಂಟೇನೈರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಡ್ರೈವರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. 

ಬಿಎಸ್‌ವೈ ನಾಯಕ ಸಮಾಜದ ಕಿವಿಗೆ ಹೂವು ಇಡ್ತಿದ್ದಾರೆ: ಸಿಎಂಗೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ

ಘಟನಾ ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಳಿಕ ಯುಟಿ ಖಾದರ್ ಬೇರೊಂದು ವಾಹನದ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ.
 

PREV
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು