ಮಸ್ಕಿ ಬೈಎಲೆಕ್ಷನ್‌ನಲ್ಲಿ ಮಂಗ್ಲಿ ಹವಾ: ಬಿಜೆಪಿ ಪರ ಸ್ಟಾರ್‌ ಸಿಂಗರ್‌ ಪ್ರಚಾರ

Suvarna News   | Asianet News
Published : Apr 14, 2021, 11:02 AM IST
ಮಸ್ಕಿ ಬೈಎಲೆಕ್ಷನ್‌ನಲ್ಲಿ ಮಂಗ್ಲಿ ಹವಾ: ಬಿಜೆಪಿ ಪರ ಸ್ಟಾರ್‌ ಸಿಂಗರ್‌ ಪ್ರಚಾರ

ಸಾರಾಂಶ

ನನಗೆ ಇಲ್ಲಿಗೆ ಬಂದಿದ್ದು ತುಂಬಾ ಖುಷಿಯಾಗಿದೆ, ಕಣ್ಣೆ ಅದರಿಂದಿ ಹಾಡು ನನ್ನನ್ನ ಇಲ್ಲಿಗೆ ತಂದು ನಿಲ್ಲಿಸಿದೆ| ಎಲ್ಲಿಯೋ ಹುಟ್ಟಿದ ನನಗೆ ನೀವೂ ಗೌರವಿಸಿದ್ದೀರಿ| ಇದು ನನ್ನ ಯಾವುದೋ ಪುನಾಜ್ಮದ ಪುಣ್ಯ ಎಂದು ಕನ್ನಡಿಗರನ್ನ ಮುಕ್ತಕಂಠದಿಂದ ಶ್ಲಾಘಿಸಿದ ಮಂಗ್ಲಿ| 

ರಾಯಚೂರು(ಏ.14): ರಾಬರ್ಟ್‌ ಚಿತ್ರದ ಕಣ್ಣೇ ಅದರಿಂದಿ ಸಾಂಗ್‌ ಮೂಲಕ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ತೆಲುಗು ಗಾಯಕಿ ಮಂಗ್ಲಿಬಾಯಿ ಮಸ್ಕಿ ಉಪಚುನಾವಣೆಯಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಹೌದು, ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ಪರ ಮಂಗ್ಲಿ ಪ್ರಚಾರವನ್ನ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಮಂಗ್ಲಿ, ನನಗೆ ಇಲ್ಲಿಗೆ ಬಂದಿದ್ದು ತುಂಬಾ ಖುಷಿಯಾಗಿದೆ.  ಕಣ್ಣೆ ಅದರಿಂದಿ ಹಾಡು ನನ್ನನ್ನ ಇಲ್ಲಿಗೆ ತಂದು ನಿಲ್ಲಿಸಿದೆ.  ಎಲ್ಲಿಯೋ ಹುಟ್ಟಿದ ನನಗೆ ನೀವೂ ಗೌರವಿಸಿದ್ದೀರಿ, ಇದು ನನ್ನ ಯಾವುದೋ ಪುನಜ್ಮದ ಪುಣ್ಯ ಎಂದು ಕನ್ನಡಿಗರನ್ನ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಮಸ್ಕಿ ಬೈ ಎಲೆಕ್ಷನ್‌ ಅಖಾಡಕ್ಕೆ ಕಣ್ಣೇ ಅದಿರಿಂದಿ...ಗಾಯಕಿ ಮಂಗ್ಲಿ

ರಾಬರ್ಟ್‌ ಚಿತ್ರದ ಹಾಡು ಯಶಸ್ವಿ ಆಗಿದಕ್ಕೆ ಡಿ ಬಾಸ್ (ದರ್ಶನ್) ಎಲ್ಲರಿಗೂ ನನ್ನ ನಮಸ್ಕಾರ. ಯಶ್ ಅಂದ್ರೆ ಕೆಜಿಎಫ್ ಅವರ ಸಂದರ್ಶನ ಮಾಡಿದ್ದೇನೆ ನೋಡಿದ್ರಾ?, ಗೊತ್ತಿಲ್ಲದೆ ಮಾಡಿದ್ದೇನೆ ಗೊತ್ತು ಆಗಿದ್ದ ಮೇಲೆ ಮಿಸ್ ಆಗಿದ್ದೇನೆ ಎಂದು ಹೇಳಿದ್ದಾರೆ.

ನೀವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ. ನಾನು ಮೋಡಿ(ಮೋದಿ) ಅಭಿಮಾನಿಯಾಗಿದ್ದೇನೆ. ಎಲ್ಲರೂ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ಪ್ರಚಾರ ಮಾಡಿದ್ದಾರೆ. ಯಡಿಯೂರಪ್ಪ ಎಂಬ ಹೆಸರು ಮೊದಲ ಬಾರಿಗೆ ಕೇಳುತ್ತಿದ್ದೇನೆ. ನಮ್ಮ ಕಡೆ ಒಡೂರಪ್ಪ, ಕೃಷ್ಣಪ್ಪ ಇರುತ್ತದೆ. ಪ್ರೇಕ್ಷಕರು ಹೇಳಿದ ಮೇಲೆಯೇ ಸಿಎಂ ಯಡಿಯೂರಪ್ಪ ಎಂದ ಮಂಗ್ಲಿ ಹೇಳಿದ್ದಾರೆ. ಯಡಿಯೂರಪ್ಪ ಮಗ ವಿಜಯೇಂದ್ರ ಅಣ್ಣನಿಗೂ ನಮಸ್ಕಾರ, ಯಾರು ಕೂಡ ಮರೆಯದೇ ಬಿಜೆಪಿಗೆ ಓಟು ಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
 

PREV
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು