ಬೆಳಗಾವಿ: ಸಚಿವೆ ಶಶಿಕಲಾ ಜೊಲ್ಲೆಗೆ ಮಾತೃ ವಿಯೋಗ

By Suvarna NewsFirst Published Apr 14, 2021, 8:56 AM IST
Highlights

ಕಳೆದ ಕೆಲ‌ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶೇವಂತಾ ಹರದಾರೆ| ಮಹಾರಾಷ್ಟ್ರದ ಕೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ| ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಡಲಗಾ ಗ್ರಾಮದಲ್ಲಿ ಸಂಜೆ ನೆರವೇರಿದ ಅಂತ್ಯಕ್ರಿಯೆ| 

ಬೆಳಗಾವಿ(ಏ.14): ಸಚಿವೆ ಶಶಿಕಲಾ ಜೊಲ್ಲೆ ಅವರ ತಾಯಿ ಶೇವಂತಾ ಹರದಾರೆ(90) ನಿನ್ನೆ(ಮಂಗಳವಾರ) ಬೆಳಿಗ್ಗೆ ಮಹಾರಾಷ್ಟ್ರದ ಕೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶೇವಂತಾ ಹರದಾರೆ ಅವರು ಕಳೆದ ಕೆಲ‌ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಮೃತ ಶೇವಂತಾರ ಇಚ್ಛೆಯಂತೆ ಅಂತ್ಯ ಸಂಸ್ಕಾರವನ್ನು ಮಹಾರಾಷ್ಟ್ರದ ಗಡಹಿಂಗ್ಲಜ ಹತ್ತಿರದ ಕರ್ನಾಟಕದ ಗಡಿಭಾಗ ಹುಕ್ಕೇರಿ ತಾಲೂಕಿನ ಕಟ್ಟ ಕಡೆಯ ಗ್ರಾಮ ಹಡಲಗಾದಲ್ಲಿ ಮಂಗಳವಾರ ಸಂಜೆ ನೆರವೇರಿದೆ. ಮೃತರಿಗೆ ಸಚಿವೆ ಶಶಿಕಲಾ ಜೊಲ್ಲೆ ಸೇರಿ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಕಳೆದ ಕೆಲ ವರ್ಷಗಳಿಂದ ಹಡಲಗಾ ಗ್ರಾಮದ ಹಿರಿಯ ಮಗಳ ಮನೆಯಲ್ಲಿ ಶೇವಂತಾ ಹರದಾರೆ ವಾಸವಾಗಿದ್ದರು. 

ಸಿಡಿ ಲೇಡಿಗೆ ರಕ್ಷಣೆ ಕೊಡೋದು ನಮ್ಮ ಜವಾಬ್ದಾರಿ: ಸಚಿವೆ ಜೊಲ್ಲೆ

ಅಂತ್ಯ ಸಂಸ್ಕಾರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಪಾಲ್ಗೊಂಡಿದ್ದರು. ಕೋರೋನಾ ಮುನ್ನೆಚ್ಚರಿಕೆ ‌ಕ್ರಮವಾಗಿ ಅಂತ್ಯಸಂಸ್ಕಾರದಲ್ಲಿ ಸಾರ್ವಜನಿಕರಿಗೆ ಭಾಗವಹಿಸದಂತೆ ಮನವಿ ಮಾಡಲಾಗಿತ್ತು. ಬೆಳಗಾವಿ ಉಪಚುನಾವಣೆಯ ಪ್ರಚಾರ ಸಹಿತ ಸಚಿವೆ ಶಶಿಕಲಾ ಜೊಲ್ಲೆ ಅವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನ ರದ್ದು ಪಡಿಸಿದ್ದು ಇನ್ನೂ ಮೂರು ದಿನಗಳ‌ ಕಾಲ ಚಿಕ್ಕೋಡಿ ತಾಲೂಕಿನ ಭಿವಶಿ ಗ್ರಾಮದ ತಮ್ಮ ತೋಟದ  ಮನೆಯಲ್ಲೇ ಇರಲಿದ್ದಾರೆ. 
 

click me!