ಬೆಂಗಳೂರು (ಮೇ.24): ಹೆಬ್ಬಾಳದ ಚೋಳನಗರದಲ್ಲಿ ಹೆಬ್ಬಾಳ ಶಾಸಕ ಭೈರತಿ ಸುರೇಶ್ ತೆರೆದಿರುವ ಕೋವಿಡ್ ಕೇರ್ ಸೆಂಟರ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ.
ಚೋಳನಗರದ ಕೋವಿಡ್ ಕೇರ್ ಸೆಂಟರಿಗೆ ಇಂದು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಹೆಬ್ಬಾಳ ಶಾಸಕ ಭೈರತಿ ಸುರೇಶ್ ಕೂಡ ಸಾಥ್ ನೀಡಿದರು.
undefined
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಶಾಸಕ ಭೈರತಿ ಸುರೇಶ್ ಡೆಂಟಲ್ ಕಾಲೇಜು ಬಾಡಿಗೆ ಪಡೆದು ಕೋವಿಡ್ ಕೇರ್ ಸೆಂಟರ್ ತೆರೆದಿದ್ದಾರೆ. 100ಬೆಡ್ ಇರುವ ಆಸ್ಪತ್ರೆ ಇದು. ವೆಂಟಿಲೇಟರ್, ಐಸಿಯು, ಹೆಚ್‌ಡಿಯು ಬೆಡ್ ಇದೆ. ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ. ಉಚಿತವಾಗಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಆಹಾರ ಕೂಡ ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಹಳ್ಳಿಗಳಿಗೆ ಹೊಕ್ಕಿರುವ ಕೊರೋನಾದಿಂದ ರಕ್ಷಣೆ ಹೇಗೆ? ವೈದ್ಯರ ವಿವರಣೆ ..
300 ದಾಟಿದ ಬ್ಲಾಕ್ ಪಂಗಸ್ ಸೋಂಕು : ಬ್ಲ್ಯಾಕ್ ಫಂಗಸ್ ರೋಗಿಗಳ ಸಂಖ್ಯೆ ಸದ್ಯ 300 ದಾಟಿದೆ. ಡಯಾಬಿಟಿಸ್ ಇರುವವರಿಗೆ ಹೆಚ್ಚಾಗಿ ಕಾಡುತ್ತದೆ. ಹೀಗೆಂದು ವೈದ್ಯರು ಈಗ ಹೇಳುತ್ತಿದ್ದಾರೆ. ರೋಗಿಗಳಿಗೆ ಬೇಕಾದ ಇಂಜೆಕ್ಷನ್ ಸಿಗುತ್ತಿಲ್ಲ. ಚಿಕಿತ್ಸೆ ಕೊಡಲು ಅಂಪೋಟೆರಿಸಿನ್ ಇಂಜೆಕ್ಷನ್ ಕೊರತೆಯಾಗಿದೆ. ದುಬಾರಿ ಮೊತ್ತದ ಇಂಜೆಕ್ಷನ್ ಅದು. ಒಬ್ಬ ರೋಗಿಗೆ 70-100 ಇಂಜೆಕ್ಷನ್ ಬೇಕು. ಈ ನಿಟ್ಟಿನಲ್ಲಿ ಸದಾನಂದ ಗೌಡ ಅವರು ರಾಜ್ಯಕ್ಕೆ ಕೂಡಲೇ ಇಂಜೆಕ್ಷನ್ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿಗೆ ಮತ್ತಷ್ಟು ಬಲಿ ...
ಮೂಡಿಗೆರೆ ಪ್ರಕರಣ ಪ್ರಸ್ತಾಪ : ಇನ್ನು ಇದೇ ವೇಳೆ ಮೂಡಿಗೆರೆ ತಾಲೂಕಿನಲ್ಲಿ ದಲಿತ ಯುವಕನಿಗೆ ಪೊಲೀಸ್ ಇನ್ಸ್ ಪೆಕ್ಟರ್ ಮೂತ್ರ ಕುಡಿಸಿದ ಪ್ರಕರಣ ಸಂಬಂಧ ಮಾತನಾಡಿದ ಸಿದ್ದರಾಮಯ್ಯ ಈ ಘಟನೆ ಅಮಾನವೀಯ.
ಸಬ್ ಇನ್ಸ್‌ಪೆಕ್ಟರ್ ದಲಿತನಿಗೆ ಮೂತ್ರ ಕುಡಿಸಿದ್ದಾರೆ. ಇದು ಅತ್ಯಂತ ಕೆಟ್ಟ ರೀತಿಯ ನಡವಳಿಕೆ. ಸಬ್ ಇನ್ಸ್‌ಪೆಕ್ಟರ್ ಅಮಾನತು ಮಾಡಿದರೆ ಸಾಲದು. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದರು.
ಸರ್ಕಾರಿ ವೈದ್ಯರ ಖಾಸಗಿ ಸೇವೆ : ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವಿಚಾರದ ಬಗ್ಗೆಯೂ ಮಾತನಾಡಿದ ಅವರು ಕೋವಿಡ್ ಕಾರ್ಯಕ್ಕೆ ಗೈರಾಗಿ ಖಾಸಗಿ ಕೆಲಸಕ್ಕೆ ಹಾಜರಾಗುವ ವಿಚಾರ ಬೆಳಕಿಗೆ ಬಂದಿದೆ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಇಂತಹವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.