ಪೊಲೀಸರಿಗೆ ಸಚಿವ ಹಾಲಪ್ಪ ಆಚಾರ್‌ ತಾಕೀತು ಸರಿಯಲ್ಲ: ಕಾಂಗ್ರೆಸ್‌

By Kannadaprabha News  |  First Published May 31, 2022, 6:47 AM IST

*  ತಮ್ಮ ಹಿಂಬಾಲಕರ ಮಾತು ಕೇಳುವಂತೆ ಹೇಳಿದ್ದ ಸಚಿವ ಆಚಾರ್‌
*  ಸಚಿವ ಆಚಾರ್‌ ಯಾವುದೇ ರೀತಿಯ ಕಾನೂನುಬಾಹಿರ ಕೆಲಸ ಮಾಡು ಎಂದು ಹೇಳಿಲ್ಲ
*  ಯಾರೇ ಇದ್ದರೂ ಕಾನೂನು ಚೌಕಟ್ಟು ಬಿಟ್ಟು ಯಾವುದೇ ಕೆಲಸ ಮಾಡುವುದಿಲ್ಲ: ಪಿಎಸ್‌ಐ ಯು. ಡಾಕೇಶ 


ಕುಕನೂರು(ಮೇ.31): ಸಚಿವ ಹಾಲಪ್ಪ ಆಚಾರ್‌ ಅವರು ಇತ್ತೀಚೆಗೆ ತಮ್ಮ ಹಿಂಬಾಲಕರು ಹೇಳಿದಂತೆ ಕೇಳುವಂತೆ ಪಿಎಸ್‌ಐಯೊಬ್ಬರಿಗೆ ತಾಕೀತು ಮಾಡಿರುವುದು ಸರಿಯಲ್ಲ. ಇದು ಸಂವಿಧಾನ ವಿರೋಧಿ ನಡೆ ಎಂದು ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಪಪಂ ಸದಸ್ಯ ಗುದ್ನೇಪ್ಪ ನೋಟಗಾರ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಹಾಲಪ್ಪ ಆಚಾರ್‌ ಅವರು ಭಾನುವಾರ ತಾಲೂಕಿನ ಬೆಣಕಲ್ಲ ಕೆರೆ ವೀಕ್ಷಣೆ ವೇಳೆ ಸ್ಥಳದಲ್ಲಿದ್ದ ಕುಕನೂರು ಠಾಣೆ ಪಿಎಸ್‌ಐಗೆ ತಮ್ಮ ಹಿಂಬಾಲಕರಾದ ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಬಸನಗೌಡ ತೊಂಡಿಹಾಳ, ಶಂಭು ಜೋಳದ ಅವರು ಏನಾದರೂ ಹೇಳಿದರೆ ತಾವೇ ಹೇಳಿದ್ದೇನೆ ಎಂದು ತಿಳಿದು ಕೆಲಸ ಮಾಡು ಎಂದಿದ್ದಾರೆ.

Tap to resize

Latest Videos

UPSC Result 2021; ಕೊನೆಗೂ ಈಡೇರಿದ Koppala ದಂತ ವೈದ್ಯೆಯ ಕನಸು

ಮುತ್ತಪ್ಪ ವಾಲ್ಮೀಕಿ, ವಕ್ತಾರ ಸಂಗಮೇಶ ಗುತ್ತಿ, ನಗರ ಘಟಕದ ಅಧ್ಯಕ್ಷ ರೆಹಮಾನಸಾಬ್‌ ಮಕ್ಕಪ್ಪನವರ್‌, ಗಾವರಾಳ ಗ್ರಾಪಂ ಸದಸ್ಯ ಮಹೇಶ, ಕಕ್ಕಿಹಳ್ಳಿ ಗ್ರಾಪಂ ಸದಸ್ಯ ಯಮನೂರಪ್ಪ ಕಟ್ಟಿಮನಿ, ಪ್ರಮುಖರಾದ ಭೀಮಣ್ಣ ಬೂದಗುಂಪಿ, ಅಮರೇಶ ತಲ್ಲೂರು, ಮಹಾಂತೇಶ ಜಂಗ್ಲಿ, ಮಂಜುನಾಥ ಯಡಿಯಾಪೂರ ಇತರರಿದ್ದರು.

ಸಚಿವ ಹಾಲಪ್ಪ ಆಚಾರ್‌ ಅವರು ಯಾವುದೇ ರೀತಿಯ ಕಾನೂನುಬಾಹಿರ ಕೆಲಸ ಮಾಡು ಎಂದು ಹೇಳಿಲ್ಲ. ಕಾನೂನಾತ್ಮಕ ಕೆಲಸಗಳಿಗೆ ತಕ್ಷಣ ಸ್ಪಂದಿಸಿ ಎಂದಿದ್ದಾರೆ. ಅಲ್ಲದೆ ಯಾರೇ ಇದ್ದರೂ ಕಾನೂನು ಚೌಕಟ್ಟು ಬಿಟ್ಟು ಯಾವುದೇ ಕೆಲಸ ಮಾಡುವುದಿಲ್ಲ ಅಂತ ಕುಕನೂರು ಪಿಎಸ್‌ಐ ಯು. ಡಾಕೇಶ ತಿಳಿಸಿದ್ದಾರೆ.  
 

click me!