Yoga Day in Mysuru: ಜೂ.21ಕ್ಕೆ ಮೈಸೂರು ಅರಮನೆ ಮುಂದೆ ಮೋದಿ ಯೋಗ

By Kannadaprabha NewsFirst Published May 31, 2022, 5:16 AM IST
Highlights

*  ಮೈಸೂರಲ್ಲಿ ವಿವಿಧೆಡೆ 75 ಸಾವಿರ ಜನರಿಂದ ಯೋಗ
*  ಈ ಬಾರಿ ಅರಮನೆ ಆವರಣದಲ್ಲಿ ಯೋಗ ಪ್ರದರ್ಶಿಸುವುದು ಸೂಕ್ತ 
* ಯೋಗ ದಿನಕ್ಕೆ ಬೊಮ್ಮಾಯಿ ಜತೆ ಮೋದಿ ಸಭೆ

ಮೈಸೂರು(ಮೇ.31): ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜೂ.21ರಂದು ಅರಮನೆ ಆವರಣದಲ್ಲಿ ನಡೆಯುವ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವರು. ಈ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಸುಮಾರು 75 ಸಾವಿರ ಮಂದಿಯನ್ನು ಸೇರಿಸುವ ಉದ್ದೇಶವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.

ಯೋಗ ದಿನ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿ, ಯೋಗ ಪ್ರಮುಖರೊಡನೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ನಗರದ ಹೆಗ್ಗುರುತಾದ ಅರಮನೆಯ ಮುಂದೆ ಯೋಗ ಪ್ರದರ್ಶನ ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ. ಈವರೆಗಿನ ಯೋಗ ಪ್ರದರ್ಶನಗಳಲ್ಲಿ ಆಯಾ ನಗರದ ಹೆಗ್ಗುರುತಿನ ಬಳಿಯೇ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂತೆಯೇ ಈ ಬಾರಿ ಅರಮನೆ ಆವರಣದಲ್ಲಿ ಯೋಗ ಪ್ರದರ್ಶಿಸುವುದು ಸೂಕ್ತ ಎಂದರು.

Latest Videos

ದೃಷ್ಟಿ ವಿಶೇಷ ಚೇತನೆ UPSC ಟಾಪರ್, Mysuru ಯುವತಿ ಸಾಧನೆ

ಅರಮನೆ ಆವರಣದಲ್ಲಿ ಅಷ್ಟುಪ್ರಮಾಣದ ಜನರನ್ನು ಸೇರಿಸುವುದು ಕಷ್ಟವಾದ ಹಿನ್ನೆಲೆಯಲ್ಲಿ ಎಲ್‌ಇಡಿ ಪರದೆಯ ಮೂಲಕ ನೇರ ಪ್ರಸಾರ ಆಯೋಜಿಸಿ ಬೇರೆ ಕಡೆಯಲ್ಲಿ ಯೋಗ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಸುಮಾರು 3 ತಿಂಗಳಿಂದಲೂ ಇದಕ್ಕೆ ಪೂರ್ವ ತಯಾರಿ ನಡೆದಿದೆ.

ಯೋಗ ದಿನಕ್ಕೆ ಬೊಮ್ಮಾಯಿ ಜತೆ ಮೋದಿ ಸಭೆ

ಬೆಂಗಳೂರು: ಜೂ.21ರಂದು ಆಯೋಜನೆಯಾಗಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಅವರು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಿ ಪೂರ್ವಭಾವಿ ಸಿದ್ಧತೆಗಳ ಕುರಿತು ಮಾಹಿತಿ ಪಡೆದರು.

ಯೋಗ ದಿನಾಚರಣೆ ಮೈಸೂರಿನ ಅರಮನೆ ಆವರಣದಲ್ಲಿ ಆಯೋಜಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದ್ದು, ತಮ್ಮ ಆಗಮನವನ್ನು ಎದುರು ನೋಡುತ್ತಿದ್ದೇವೆ ಎಂದು ಈ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಜಿಲ್ಲಾಡಳಿತ ಜತೆ ಮಾತುಕತೆ ನಡೆಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಹ ಮತ್ತು ಶಾಸಕರು ಸೇರಿಂತೆ ಇತರರು ಸಿದ್ಧತೆಗಳನ್ನು ನಡೆಸುವಲ್ಲಿ ತೊಡಗಿದ್ದಾರೆ. ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲಿಯೂ ಸಿದ್ಧತೆಯನ್ನು ಪೂರ್ಣಗೊಳಿಸಿದೆ. ಕಾರ್ಯಕ್ರಮಕ್ಕೆ ಯಾರೆಲ್ಲಾ ಭಾಗವಹಿಸಬೇಕು ಸೇರಿದಂತೆ ಇತರೆ ಹಲವು ವಿಷಯಗಳ ಮಾಹಿತಿಯನ್ನು ವಿನಿಯಮ ಮಾಡಿಕೊಳ್ಳಲಾಯಿತು ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಮುಂತಾದವರು ಉಪಸ್ಥಿತರಿದ್ದರು.
 

click me!