'ಸ್ವಾರ್ಥಕ್ಕೆ ಬಿಜೆಪಿ ಸೇರಿದರೆಂದಿದ್ದ ಸಿದ್ದರಾಮಯ್ಯ : ಬಿಜೆಪಿಯಿಂದ ದಿಕ್ಕು ತಪ್ಪಿಸುವ ಹುನ್ನಾರ'

By Suvarna News  |  First Published Nov 6, 2021, 1:19 PM IST
  •  ದುರುದ್ದೇಶದಿಂದ  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೇಳಿಕೆ 
  • ದಲಿತರ ವಿರುದ್ಧ ಮಾತನಾಡಿದ್ದಾರೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಕಾಂಗ್ರೆಸ್ ಮುಖಂಡ ಧೃವನಾರಾಯಣ್ ಪ್ರತಿಕ್ರಿಯೆ

ಮೈಸೂರು (ನ.06): ದುರುದ್ದೇಶದಿಂದ  ಮಾಜಿ ಸಿಎಂ ಸಿದ್ದರಾಮಯ್ಯ  (Siddaramaiah) ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ದಲಿತರ ವಿರುದ್ಧ ಮಾತನಾಡಿದ್ದಾರೆ ಎಂಬ ಬಿಜೆಪಿ (BJP) ಆರೋಪ ವಿಚಾರಕ್ಕೆ ಕಾಂಗ್ರೆಸ್ (Congress) ಮುಖಂಡ ಧೃವನಾರಾಯಣ್ (Druvanarayan) ಪ್ರತಿಕ್ರಿಯಿಸಿದ್ದಾರೆ. 

ಮೈಸೂರಿನಲ್ಲಿಂದು (Mysuru) ಮಾತನಾಡಿದ ಧೃವನಾರಾಯಣ್ ಕೆಲವರು ಅವರ ಸ್ವಾರ್ಥಕ್ಕೆ ಬಿಜೆಪಿ ಸೇರಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿದ್ದರು. ಸಿಂದಗಿ ಚುನಾವಣೆಯಲ್ಲಿ (sindagi By Election) ಮಾದೀಗ ಜನಾಂಗದ ಸಮ್ಮೇಳನದಲ್ಲಿ ಈ ಹೇಳಿಕೆ ನೀಡಿದ್ದರು. ಆದರೆ ಇದನ್ನ ತಿರುಚಿ ಬಿಜೆಪಿಯವರು ದಲಿತರನ್ನು (Dalits) ದಿಕ್ಕು ತಪ್ಪಿಸುವ ಹುನ್ನಾರ ಮಾಡಿದ್ದಾರೆ. ಅವರು ದುದ್ದೇಶದಿಂದ ಈ ರೀತಿ ತಿರುಚಿದ್ದಾರೆ ಎಂದರು.

Latest Videos

undefined

ಕೆಲವು ನಾಯಕರು ಅವರು ಸ್ವಾರ್ಥಕ್ಕೆ ಬಿಜೆಪಿ ಸೇರಿದ್ದಾರೆ. ಭಾಗವತ್ ,ಅನಂತ್ ಕುಮಾರ್ ಹೆಗ್ಡೆ (Ananth Kumar Hegde) ತೇಜಸ್ವಿ ಸೂರ್ಯ (Tejasvi Surya) ಸೇರಿ ಅನೇಕರು ಸಂವಿಧಾನದ ತಿದ್ದಪಡಿ ಮಾಡಬೇಕು ಎಂದು ಮಾತನಾಡಿದ್ದರು. ಈ ವೇಳೆ ಬಿಜೆಪಿಯಲ್ಲಿರುವವರು ಮಾತನಾಡಲಿಲ್ಲ. ಇದರಿಂದ ಬಿಜೆಪಿಯಲ್ಲಿರುವ ದಲಿತ ನಾಯಕರು ಎಲ್ಲಿ ಹೊಗಿದ್ದರೆಂದು ಕೇಳಿದ್ದರು. ಆದರೆ ಇದನ್ನ ಇಟ್ಟುಕೊಂಡು ದಲಿತರನ್ನ ದಿಕ್ಕುತಪ್ಪಿಸುವ ಹುನ್ನಾರ‌ ನಡೆಯುತ್ತಿದೆ ಎಂದರು.

ದಲಿತರು ಪ್ರಜ್ಞಾವಂತರಿದ್ದಾರೆ. ಧರ್ಮ ಧರ್ಮದಲ್ಲಿ ಕಂದಕ‌ ನಿರ್ಮಾಣ ಮಾಡುತ್ತಾರೆ. ಯಾವ ಜಾತಿಯವರು ಕಾಂಗ್ರೆಸ್ (Congress) ಪಕ್ಷದವರ ಜೊತೆ ಇದ್ದಾರೆ ಅವರನ್ನ ಒಡೆದು ಹಾಕಲು ಮುಂದಾಗಿದ್ದಾರೆ. ವ್ಯಕ್ತಿಗೆ ಹೇಳಿದ ಹೇಳಿಕೆಯನ್ನ ಈ ರೀತಿ ಮಾಡಿದ್ದಾರೆ ಎಂದು ಮೈಸೂರಿನಲ್ಲಿ (Mysuru) ಮಾಜಿ ಸಂಸದ ದೃವನಾರಾಯಣ್ ಹೇಳಿದರು. 

ಸಿದ್ದರಾಮಯ್ಯರವರು ಸಿಎಂ ಆಗಿದ್ದಾಗ ದಲಿತರಿಗೆ ಕೊಟ್ಟ ಕಾರ್ಯಕ್ರಮ ಸ್ಥಾನಮಾನ ಇತಿಹಾಸ ಪುಟದಲ್ಲಿ ಇಡಬಹುದು. ಅಂತವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ.  ಅಂಬೇಡ್ಕರ್ (Ambedkar) ಹೆಸರನ್ನು  ಬಿಜೆಪಿಯವರು  ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇವರು ಆರ್.ಎಸ್.ಎಸ್ (RSS) ಗುಲಾಮಗಿರಿ ಮಾಡುತ್ತಿದ್ದಾರೆ‌. ದಲಿತರ ಮೇಲೆ ಕಾಳಜಿ ಇದ್ದರೆ ದಲಿತರ ಪರವಾದ ಕಾನೂನು ತನ್ನಿ. ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಮಾತನಾಡಿದ್ದರು. ಆದರೆ ಚುನಾವಣೆ ಮುಗಿದ ನಂತರ ಈ ವಿಚಾರವಾಗಿ ಪ್ರತಿಭಟನೆ ಮಾಡಿದ್ದಾರೆ. ಇದರ ಅರ್ಥ ಇವರು ದಲಿತರನ್ನ ಎತ್ತಿಕಟ್ಟುವ ಹುನ್ನಾರ ಇದೆ ಎಂಬುದು ಸ್ಪಷ್ಟವಾಗಿದೆ ಎಂದರು. 

ಸಿದ್ದರಾಮಯ್ಯ ಮಾಸ್ ಲೀಡರ್. ಜನಪರ‌ ಕಾಳಜಿ ಇರುವ ನಾಯಕ ಇದಕ್ಕಾಗಿ ಸಿದ್ದರಾಮಯ್ಯ ವಿರದ್ಧ ಹುನ್ನಾರ ಮಾಡಲು ಚುನಾವಣೆ (Election) ಸೋತ ನಂತರ ಈ ವಿಚಾರವನ್ನ ತೆಗೆದಿದ್ದಾರೆ. ಬಿಟ್ ಕಾಯಿನ್ ವಿಚಾರ ಮರೆಮಾಚಿದ್ದಾರೆ. ಇದನ್ನ ಹೊರತೆಗೆದರೆ ದೊಡ್ಡ ನಾಯಕರ ಹೆಸರು ಹೊರಬರುತ್ತದೆ ಎಂದು ಮೈಸೂರಿನಲ್ಲಿ ಮಾಜಿ ಸಂಸದ ದೃವನಾರಾಯಣ್ ಹೇಳಿಕೆದರು.

ಹಸಿವಿನ ಪ್ರಮಾಣ ಹೆಚ್ಚು

ಭಾರತಕ್ಕಿಂತ ಪಾಕಿಸ್ತಾನ (Pakistan) ಹಸಿವು ನೀಗಿಸುವಲ್ಲಿ ಮುಂಚೂಣಿಯಲ್ಲಿದೆ.  ಹಸುವಿನ ಪ್ರಮಾಣದಲ್ಲಿ ಭಾರತದ ರ‍್ಯಾಂಕಿಂಗ್ (Ranking) 101 ಇದೆ. ಭಾರತಕ್ಕಿಂತಲೂ ಬಾಂಗ್ಲಾದೇಶದ ಹಸಿವಿನ ಪ್ರಮಾಣ ಕಡಿಮೆ ಇದೆ.  ಶ್ರೀಲಂಕಾ ಹಾಗೂ ಪಾಕಿಸ್ತಾನದಲ್ಲೂ ಕಡಿಮೆ ಇದೆ. ವರ್ಲ್ಡ್ ಹಂಗರ್ ಇಂಡೆಕ್ಸ್ ಸಮೀಕ್ಷೆ ಪ್ರಕಾರ ನಮ್ಮ ದೇಶ 101ನೇ ಸ್ಥಾನದಲ್ಲಿದೆ. ನಿಮ್ಮ ಗಮನ ಹಸಿವು ಮುಕ್ತ ಭಾರತ ಮಾಡುವತ್ತ ಇರಲಿ. ಹಸಿವು ಮುಕ್ತ ಕರ್ನಾಟಕ ಮಾಡಲು ಸಿದ್ದರಾಮಯ್ಯ ಕಾರ್ಯಕ್ರಮ ನೆರವಾಗಿದ್ದವು  ಎಂದರು. 

  • ದುರುದ್ದೇಶದಿಂದ  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೇಳಿಕೆ 
  • ದಲಿತರ ವಿರುದ್ಧ ಮಾತನಾಡಿದ್ದಾರೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಕಾಂಗ್ರೆಸ್ ಮುಖಂಡ ಧೃವನಾರಾಯಣ್ ಪ್ರತಿಕ್ರಿಯೆ
  • ಕೆಲವರು ಅವರ ಸ್ವಾರ್ಥಕ್ಕೆ ಬಿಜೆಪಿ ಸೇರಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿದ್ದರು
  • ಸಿಂದಗಿ ಚುನಾವಣೆಯಲ್ಲಿ ಮಾದೀಗ ಜನಾಂಗದ ಸಮ್ಮೇಳನದಲ್ಲಿ ಈ ಹೇಳಿಕೆ
  • ತಿರುಚಿ ಬಿಜೆಪಿಯವರು ದಲಿತರನ್ನು ದಿಕ್ಕು ತಪ್ಪಿಸುವ ಹುನ್ನಾರ ಮಾಡಿದ್ದಾರೆ
click me!