ಕೆ.ಆರ್.ನಗರ ಕ್ಷೇತ್ರದಲ್ಲಿ ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಅಧಿಕ ಮತಗಳಿಂದ ಗೆಲುವು ಸಾಧಿಸಲಿದ್ದೇನೆ ಎಂಬುದನ್ನು ಮನಗಂಡ ಈ ಕ್ಷೇತ್ರದ ಶಾಸಕರು ಹತಾಶೆಯಿಂದ ಸಭೆ ಸಮಾರಂಭಗಳಲ್ಲಿ ನನ್ನ ಹಾಗೂ ನಮ್ಮ ತಂದೆ ಬಗ್ಗೆ ಹಗುರವಾದ ಟೀಕೆಗಳನ್ನು ನೀಡುತ್ತಿದ್ದಾರೆ.
ಭೇರ್ಯ (ನ.28): ಕೆ.ಆರ್.ನಗರ ಕ್ಷೇತ್ರದಲ್ಲಿ ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಅಧಿಕ ಮತಗಳಿಂದ ಗೆಲುವು ಸಾಧಿಸಲಿದ್ದೇನೆ ಎಂಬುದನ್ನು ಮನಗಂಡ ಈ ಕ್ಷೇತ್ರದ ಶಾಸಕರು ಹತಾಶೆಯಿಂದ ಸಭೆ ಸಮಾರಂಭಗಳಲ್ಲಿ ನನ್ನ ಹಾಗೂ ನಮ್ಮ ತಂದೆ ಬಗ್ಗೆ ಹಗುರವಾದ ಟೀಕೆಗಳನ್ನು ನೀಡುತ್ತಿದ್ದಾರೆ. ಯಾವುದಕ್ಕೂ ನಾವು ಜಗ್ಗುವುದಿಲ ಎಂದು ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್ ಶಾಸಕ ಸಾ.ರಾ.ಮಹೇಶ್ ಅವರಿಗೆ ತಿರುಗೇಟು ನೀಡಿದರು.
ಭೇರ್ಯ ಗ್ರಾಮದಲ್ಲಿ ಕನ್ನಡ ಯುವಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 67ನೇ ವರ್ಷದ ಕನ್ನಡ ರಾಜ್ಯೋತ್ಸವ ಸಂಜೆಯ ಸಾಂಸ್ಕೃತಿಕ ಹಾಗೂ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 2018ರಲ್ಲಿ ನಾನು ಅಭ್ಯರ್ಥಿಯಾಗಿ ಅಲ್ಪ ಮತಗಳಿಂದ ಸೋತೆ, ಆದರೂ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರ ಪರವಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಎರಡು ಬಾರಿ ಸೋತರೂ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಲಾಗಿದೆ. ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ವಿವಿಧ ಸಮುದಾಯ ಭವನಗಳಿಗೆ ಅನುದಾನ, ರಸ್ತೆ ಡಾಂಬರೀಕರಣಕ್ಕೆ ಅನುದಾನ ತರಲಾಯಿತು ಎಂದರು.
undefined
Gommatagiri: ವೈರಾಗ್ಯಮೂರ್ತಿಗೆ ಬಣ್ಣಬಣ್ಣದ ಮಹಾಮಸ್ತಕಾಭಿಷೇಕ
ನಾನಾಗಲಿ ಅಥವಾ ಶ್ರೀಮತಿ ಅವರಾಗಲಿ ತಾಳಿ ಉಳಿಸಿ, ಇಲ್ಲ ಎಂದರೆ ವಿಷ ಕುಡಿಯುತ್ತೇವೆ ಎಂದೆಲ್ಲ ಅಪಪ್ರಚಾರ ಜೊತೆಗೆ ಹೋದ ಕಡೆಗಳಲ್ಲಿ ಶಾಸಕರು ಹಗುರುವಾಗಿ ಹೇಳಿಕೆ ನೀಡುತ್ತಿರುವುದು ಶೋಭೆ ತರುವುದಿಲ್ಲ. ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರವನ್ನು ಕ್ಷೇತ್ರದ ಮತದಾರರು ನೀಡಲಿದ್ದಾರೆ ಎಂದರು. ನಾಡು, ನುಡಿ, ಜಲ, ಭಾಷೆ ಬಗ್ಗೆ ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿದ್ದಾರೆ. ಕಳೆದ 15 ವರ್ಷಗಳಿಂದ ಭೇರ್ಯ ಗ್ರಾಮದ ಕನ್ನಡ ಯುವಕರ ಸಂಘ ವಿಶೇಷವಾಗಿ ಬಹಳ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
Mysuru: ನಿರ್ಲಕ್ಷ್ಯ ತೋರದೇ ಸಮಸ್ಯೆ ಪರಿಹರಿಸಿ: ಶಾಸಕ ಮಹದೇವ್
ಕಾರ್ಯಕ್ರಮದಲ್ಲಿ ತಾಲೂಕು ಶರಣು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಪಿ. ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಚ್. ಮಹದೇವ್, ಮುಶೀರ್ ಅಹಮದ್ ಖಾನ್, ಗ್ರಾಪಂ ಸದಸ್ಯರಾದ ಬಿ.ಎಲ್. ರಾಜಶೇಖರ, ಕೃಷ್ಣೇಗೌಡ, ಮಂಜಪ್ಪ, ಮಾಜಿ ಸದಸ್ಯ ಕೆ.ಎನ್. ಸತೀಶ್, ಸುದರ್ಶನ್, ಮನ್ಸೂರ್, ಕಾಂಗ್ರೆಸ್ ಮುಖಂಡರಾದ ಬಿ.ಟಿ. ಮೋಹನ್, ಖಾಲಿದ್ ಪಾಷ, ನಾಗೇಶ್, ಮಂಜುನಾಥ್, ಗ್ರಾಮಸ್ಥರಾದ ಪ್ರಕಾಶ್, ರಶೀದ್, ಸಂಘದ ಪದಾಧಿಕಾರಿಗಳಾದ ರಾಘವೇಂದ್ರ, ಕೃಷ್ಣೇಗೌಡ, ಖಲಿಫತ್, ಪ್ರಕಾಶ್ ನಾಯಕ, ಸೋನಾಮಂಜು, ಅಶೋಕ, ಲಾಂಡ್ರಿಶಿವ, ಎಕಬಲ್ ಪಾಷ, ಕೆ. ದಿನೇಶ್, ಏರಟೆಲ್ ಚಂದು ಮೊದಲಾದವರು ಇದ್ದರು.