Ballari: ಎಪಿಎಂಸಿಯಲ್ಲಿ ರೈತರ ಮೆಕ್ಕೆಜೋಳ ಖರೀದಿಸದೇ ದಲ್ಲಾಳಿಗಳ ಕಿರುಕುಳ

By Sathish Kumar KHFirst Published Nov 28, 2022, 5:13 PM IST
Highlights

ಬಳ್ಳಾರಿಯ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳ ಕೈಯಲ್ಲಿದೆಯೋ ಅಥವಾ ದಲ್ಲಾಳಿಗಳ ಕೈಯಲ್ಲಿದೆಯೋ ಒಂದು ಗೊತ್ತಾಗುತ್ತಿಲ್ಲ. ಕಾರಣ ದಲ್ಲಾಳಿಗಳು ಮಾರುಕಟ್ಟೆಗೆ ಬಂದಿರೋ ಮೆಕ್ಕೆಜೋಳ ಖರೀಧಿ ಮಾಡದಂತೆ ದಲ್ಲಾಳಿಗಳು ಅಲಿಖಿತ ಫಾರ್ಮಾನು ಹೊರಡಿಸಿದ್ದು, ಈಗ ಮೆಕ್ಕೆಜೋಳ ಖರೀದಿ ಮಾಡುತ್ತಿಲ್ಲ.

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ನ.28) : ರೈತರು ಸಾಲಸೋಲ ಮಾಡಿ ಕಷ್ಟಪಟ್ಟು ಮೆಕ್ಕೆಜೋಳವನ್ನು ಬೆಳೆದಿದ್ದಾರೆ. ಒಳ್ಳೆಯ ಫಸಲು ಬಂದ ಹಿನ್ನೆಲೆ ಈ ಬಾರಿ ಒಂದಷ್ಟು ಹಣ ಕೈಸೆರಬಹುದೆನ್ನುವ ನಿರೀಕ್ಷೆಯೂ ಇತ್ತು. ಆದರೆ ಬಳ್ಳಾರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆಡಳಿತ ಮಂಡಳಿಯ ಅಧಿಕಾರಿಗಳು, ಖರೀದಿದಾರರು ಹಾಗೂ ದಲ್ಲಾಲಿಗಳ ಆಟಕ್ಕೆ ಅನ್ನದಾತ ಸೋತು ಹೋಗಿದ್ದಾರೆ. ಹಸಿ ಮೆಕ್ಕೆಜೋಳವನ್ನು ತಂದೆ ಖರೀದಿ ಮಾಡುವುದಿಲ್ಲ ಎನ್ನುವ ನೀತಿ ಮತ್ತು ಎಪಿಎಂಸಿ ಆವರಣದಲ್ಲಿ ಮೆಕ್ಕೆಜೋಳ ಒಣಗಿಸಲು ಸ್ಥಳ ನೀಡದೆ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಬಳ್ಳಾರಿ ಎಪಿಎಂಸಿಯಲ್ಲಿ ನಡೆಯುತ್ತಿರೋ ಗೋಲ್ ಮಾಲ್ ವರದಿ ಇಲ್ಲಿದೆ ನೋಡಿ.

ಬಳ್ಳಾರಿಯ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳ ಕೈಯಲ್ಲಿದೆಯೋ ಅಥವಾ ದಲ್ಲಾಳಿಗಳ ಕೈಯಲ್ಲಿದೆಯೋ ಒಂದು ಗೊತ್ತಾಗುತ್ತಿಲ್ಲ. ಕಾರಣ ದಲ್ಲಾಳಿಗಳು ಮಾರುಕಟ್ಟೆಗೆ ಬಂದಿರೋ ಮೆಕ್ಕೆಜೋಳ ಖರೀಧಿ ಮಾಡದಂತೆ ದಲ್ಲಾಳಿಗಳು ಅಲಿಖಿತ ಫಾರ್ಮಾನು ಹೊರಡಿಸಿದ್ದು, ಈಗ ಮೆಕ್ಕೆಜೋಳ ಖರೀದಿ ಮಾಡುತ್ತಿಲ್ಲ. ಇದರ ಪರಿಣಾಮ ಅನ್ನದಾತರು ಕಣ್ಣೀರು ಹಾಕುತ್ತಿದ್ದಾರೆ. ಈ ಮೊದಲು ಹಸಿ ಮೆಕ್ಕೆಜೋಳ ತಂದರೂ ಎಪಿಎಂಸಿಯಲ್ಲಿ ಒಣಗಿಸಿ ಅದನ್ನು ಮಾರಾಟ ಮಾಡಲು ಅವಕಾಶ  ನೀಡಲಾಗುತ್ತಿತ್ತು. ಆದರೆ, ಇದೀಗ ಕೆಲ ದಲ್ಲಾಳಿಗಳು ಹಸಿ ಮೆಕ್ಕೆಜೋಳ ತಂದರೆ ಒಣಗಿಸಲು ಎಪಿಎಂಸಿಯಲ್ಲಿ ಸ್ಥಳ ನೀಡುತ್ತಿಲ್ಲ. ಒಂದು ವೇಳೆ ಒತ್ತಾಯ ಪೂರ್ವಕವಾಗಿ ತಂದು ರಸ್ತೆ ಮೇಲೆ ಒಣಗಿಸಲು ಹಾಕಿ ಒಣಗಿಸಿದರೂ ಅದನ್ನು ಖರೀದಿ ಮಾಡಬಾರದೆಂದು ದಲ್ಲಾಳಿಗಳು ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ತಂದಿರುವ ರಾಶಿಗಟ್ಟಲೆ ಮೆಕ್ಕೆಜೋಳ ಮಾರಾಟವಾಗದೇ ಹಲವು ರೈತರು ಪರದಾಡುತ್ತಿದ್ದಾರೆ. 

ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿದೆ ಹೊಸಪೇಟೆ ಎಪಿಎಂಸಿ ಆವರಣ!

ದಲ್ಲಾಳಿ, ಎಪಿಎಂಸಿ ಸಿಬ್ಬಂದಿಯೊಂದಿಗೆ ರೈತರ ವಾಗ್ವಾದ : ರೈತರು, ಎಪಿಎಂಸಿ ಕಾರ್ಯದರ್ಶಿ ಮತ್ತು ದಲ್ಲಾಳಿಗಳು ಹಾಗೂ ಖರೀದಿದಾರರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಎಲ್ಲ ಗೊಂದಲದ ಮಧ್ಯೆ ಎಪಿಎಂಸಿಗೆ ತಂದಿರುವ ಕೆಲವು ಮೆಕ್ಕೆಜೋಳ ಖರೀದಿಯಾಗದೇ ಉಳಿದಿದೆ. ಹೀಗಾಗಿ, ಮತ್ತಷ್ಟು ರೈತರು ಮೆಕ್ಕೆಜೋಳ ಎಪಿಎಂಸಿಗೆ ತರಲು ಕೂಡ ಹೆದರುತ್ತಿದ್ದಾರೆ.  ಆದರೆ, ಸರ್ಕಾರಿ ನಿಯಮಗಳ ‌ಪ್ರಕಾರ ರೈತರ‌‌ ಬೆಳೆ ಒದಗಿಸಲು ಮಾರುಕಟ್ಟೆಯಲ್ಲಿ ಕಟ್ಟೆಯೊಂದನ್ನು ನಿರ್ಮಿಸಬೇಕು. ಕಟ್ಟೆ ಇಲ್ಲವಾದರೆ ಬೇರೆ ರೀತಿಯ ವ್ಯವಸ್ಥೆಯಾದರೂ ಮಾಡಬೇಕು. ಮಾರುಕಟ್ಟೆಗೆ ತಂದ ಬೆಳೆ ಮಾರಾಟವಾಗೋವರೆಗೂ ಎಪಿಎಂಸಿ ಅಧಿಕಾರಿಗಳು ಜವಾಬ್ದಾರಿಯನ್ನು ತೆಗೆದು ಕೊಳ್ಳಬೇಕು. ಬಳ್ಳಾರಿಯಲ್ಲಿ ಎಪಿಎಂಸಿ ಸಿಬ್ಬಂದಿ ಯಾವುದೇ ನಿಯಮ ಪಾಲಿಸುತ್ತಿಲ್ಲ. ಈ ಬಗ್ಗೆ ಕೇಳಿದರೆ ಇನ್ನುಮುಂದೆ ಹೀಗಾಗೋದಿಲ್ಲ. ಈಗ ರೈತರ ಬೆಳೆ ಖರೀದಿ ಮಾಡಿಸುತ್ತೇವೆ ಎಂದು ಎಪಿಎಂಸಿ ಕಾರ್ಯದರ್ಶಿ‌ನಂಜುಂಡೇಗೌಡ ಹೇಳುತ್ತಾರೆ.

 

3 ದಿನದ ಹಸುಳೆ ಗದಗ ಎಪಿಎಂಸಿ ಆವರಣದಲ್ಲಿ ಪತ್ತೆ; ಮನುಷ್ಯತ್ವ ಮರೆತ ಪಾಪಿಗಳು!

ಜನಪ್ರತಿನಿಧಿಗಳ ಮಧ್ಯೆ ‌ಪ್ರವೇಶವಾಗಬೇಕು: ಎಪಿಎಂಸಿ ಮಾರುಕಟ್ಟೆಗೆ ಒಣ ಮೆಕ್ಕೆಜೋಳವನ್ನೆ ತರಬೇಕು. ಹಸಿ ಜೋಳ ತಂದರೆ ಒಣಗಿಸಲು ಸ್ಥಳ ನೀಡೋದಿಲ್ಲ. ಇಂತವರ ದಲ್ಲಾಳಿಗಳ ಬಳಿಯೇ ಮಾರಾಟ ಮಾಡಬೇಕು ಜೊತೆಗೆ ಇಂತಿಷ್ಟೇ ಹಣಕ್ಕೆ ಮಾರಾಟ ಮಾಡಬೇಕು ಎನ್ನುವುದನ್ನು ದಲ್ಲಾಳಿಗಳು ಅಲಿಖಿತ ನಿಯಮ ರೂಪಿಸಿಕೊಂಡಿದ್ದಾರೆ. ಇಂತಹ ಹತ್ತು ಹಲವು ಅಲಿಖಿತ ‌ನಿಯಮಗಳನ್ನು ಎಪಿಎಂಸಿ ಸಿಬ್ಬಂದಿ ಕೂಡ ಪ್ರಶ್ನೆ ಮಾಡುತ್ತಿಲ್ಲ. ಇಂತಹ ದಲ್ಲಾಳಿಗಳ ನಿಯಮದಿಂದ ಬಳ್ಳಾರಿಯ ಅನ್ನದಾತರು ನಲುಗಿ ಹೋಗಿದ್ದಾರೆ. ಕೂಡಲೇ ಜನಪ್ರತಿನಿಧಿಗಳು ಮಧ್ಯಸ್ಥಿಕೆ ವಹಿಸಿಕೊಳ್ಳುವ ಮೂಲಕ ರೈತರಿಗೆ ನ್ಯಾಯ ಒದಗಿಸಿಕೊಡಬೇಕಿದೆ. 

click me!