13 ಸ್ಥಾನಗಳ ಪೈಕಿ 12 ಕಾಂಗ್ರೆಸ್‌ ಪಾಲು : ಅಧಿಕಾರ ಕೈ ತೆಕ್ಕೆಗೆ

By Kannadaprabha News  |  First Published Feb 5, 2021, 11:09 AM IST

ಒಟ್ಟು 13 ಸ್ಥಾನಗಳ ಪೈಕಿ 12 ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ. ಅಧಿಕಾರ ಕೈ ಮುಖಂಡರ ತೆಕ್ಕೆಗೆ ಒಲಿದಿದೆ. 


 ಮಧುಗಿರಿ (ಫೆ.05):  ತಾಲೂಕಿನ 13 ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ನÜಡೆದ ಚುನಾವಣೆಯಲ್ಲಿ 12 ಗ್ರಾಮ ಪಂಚಾಯಿತಿಗಳು ಕಾಂಗ್ರೆಸ್‌ ವಶವಾಗಿವೆ. ಕೇವಲ ಮಿಡಿಗೇಶಿ ಗ್ರಾಮ ಪಂಚಾಯಿತಿ ಮಾತ್ರ ಜೆಡಿಎಸ್‌ ಜಯಗಳಿಸಲು ಶಕ್ತವಾಗಿದೆ.

ಮಧುಗಿರಿ ಕಸಬಾ ದೊಡ್ಡವೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಗಂಗಮ್ಮ ಗೋಪಾಲಪ್ಪ ಮತ್ತು ಉಪಾಧ್ಯಕ್ಷರಾಗಿ ಶಿವಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ವಿಶ್ವನಾಥಗೌಡ, ಪಿಡಿಒ ಶಿವಕುಮಾರ್‌ ಹಾಜರಿದ್ದರು. ಮುಖಂಡರುಗಳಾದ ಎಸ್‌.ಬಿ.ಟಿ.ರಾಮು, ಅದ್ದೂರಿಗೌಡ, ಕಾಳೇಗೌಡ, ಎಸ್‌.ಆರ್‌.ಮಂಜುನಾಥ್‌, ಚಿಕ್ಕಣ್ಣ, ಬಾಣದ ರಂಗಪ್ಪ ಮತ್ತಿತರರಿದ್ದರು.

Tap to resize

Latest Videos

ಗಂಜಲಗುಂಟೆ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಸಾವಿತ್ರಮ್ಮ ನಾಗರಾಜು ಮತ್ತು ಉಪಾಧ್ಯಕ್ಷರಾಗಿ ಚೇತನಾ ಶಿವಕುಮಾರ್‌ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ಪೀಠ ಎಸ್‌.ಕುಂಬಾವತ್‌, ಪಿಡಿಒ ರವಿಚಂದ್ರ ಹಾಜರಿದ್ದರು. ಮುಖಂಡರುಗಳಾದ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ನಾಗೇಶ್‌ ಬಾಬು, ಎಂ.ಬಿ.ಮರಿಯಣ್ಣ, ಡಿ.ಎಚ್‌.ನಾಗರಾಜು, ಪಾಜಿಲ್‌ಖಾನ್‌, ಟಿ..ಎಸ್‌.ಮಂಜು, ಅಮರಾವತಿ ದಾಸೇಗೌಡ, ಮತ್ತಿತರರು ಇದ್ದರು.

ವಿಧಾನಪರಿಷತ್ ಸಭಾಪತಿ ರಾಜೀನಾಮೆ: ಬಿಜೆಪಿ ಬಯಸಿದ್ದು ಇದನ್ನೇ

ಐ.ಡಿಹಳ್ಳಿ ಹೋಬಳಿ ಚಿಕ್ಕದಾಳವಟ್ಟಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ವೆಂಕಟೇಶ್‌ರೆಡ್ಡಿ ಮತ್ತು ಉಪಾಧ್ಯಕ್ಷರಾಗಿ ತಾಯಮ್ಮ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ರಾಮ್‌ ಪ್ರಸಾದ್‌, ಪಿಡಿಒ ಮಂಜುನಾಥ್‌ ಹಾಜರಿದ್ದರು . ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಪ್ರೇಮಲತಾ ರವಿಕುಮಾರ್‌ ಮತ್ತು ಉಪಾಧ್ಯಕ್ಷರಾಗಿ ಸುರೇಶ್‌ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ಹರಿಕಿಶೋರ್‌, ಪಿಡಿಒ ಜುಂಜೇಗೌಡ ಹಾಜರಿದ್ದರು.

ಮಗ MLA, ತಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ: ಕರ್ನಾಟಕದಲ್ಲಿ ಅಪರೂಪದ ಬೆಳವಣಿಗೆ ...

ಹೊಸಕೆರೆ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಮಂಜುಳಾ ಮಧುಸೂಧನ್‌ ಆಯ್ಕೆಯಾಗಿದ್ದು ಮತ್ತು ಉಪಾಧ್ಯಕ್ಷರಾಗಿ ಡಿ.ರಂಗನಾಥ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ಸ್ವಾಮಿ , ಪಿಡಿಒ ಎಂ.ಎನ್‌.ಶಿವಕುಮಾರ್‌ ಹಾಜರಿದ್ದರು. ಮುಖಂಡರುಗಳಾದ ರಂಗಪ್ಪ, ಮೆಹಬೂಬ್‌ ಪಾಷ, ಗೋವಿಂದರಾಜು, ಚಿಕ್ಕರಂಗಪ್ಪ, ಎನ್‌.ರಂಗರಾಜು, ಮಂಜುನಾಥ್‌ ಹಾಜರಿದ್ದರು.

ಕೊಡಿಗೇನಹಳ್ಳಿ ಹೋಬಳಿ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ವೇಣುಗೋಪಾಲ್‌.ಟಿ.ಜೆ ಮತ್ತು ಉಪಾಧ್ಯಕ್ಷರಾಗಿ ರಾಮಾಂಜಿನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ಎನ್‌.ನಂಜುಂಡಯ್ಯ , ಪಿಡಿಒ ನವೀನ್‌ ಹಾಜರಿದ್ದರು.

ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಮಂಜುಳಾ.ಕೆ.ಜಿ ಮತ್ತು ಉಪಾಧ್ಯಕ್ಷರಾಗಿ ಕೆ.ಎಂ.ರಾಜೇಶ್‌ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ವಾಸುದೇವಮೂರ್ತಿ , ಪಿಡಿಒ ಸತ್ಯನಾರಾಯಣ್‌ ಹಾಜರಿದ್ದರು.

ಚಿಕ್ಕಮಾಲೂರು ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಪ್ರೇಮಲತಾ ಮತ್ತು ಉಪಾಧ್ಯಕ್ಷರಾಗಿ ಮಂಜುನಾಥರೆಡ್ಡಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ಸುರೇಶ್‌ ರೆಡ್ಡಿ , ಪಿಡಿಒ ಧನಂಜಯ್‌ ಹಾಜರಿದ್ದರು.

ಪುರವರ ಹೋಬಳಿ ಬ್ಯಾಲ್ಯಾ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಗಂಗರತ್ನಮ್ಮ ಮತ್ತು ಉಪಾಧ್ಯಕ್ಷರಾಗಿ ಅಮೃತ..ಆರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ಮುನೀಂದ್ರಕುಮಾರ್‌ ಹಾಜರಿದ್ದರು.

ಪುರವರ ಹೋಬಳಿ ಕೊಂಡವಾಡಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ನಾಗರಾಜು ಮತ್ತು ಉಪಾಧ್ಯಕ್ಷರಾಗಿ ಸಾಕಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ಸತೀಶ್‌ ಕುಮಾರ್‌ ಹಾಜರಿದ್ದರು.

ದೊಡ್ಡೇರಿ ಹೋಬಳಿ ಸಜ್ಜೇಹೊಸಹಳ್ಳಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಪುಟ್ಟಲಕ್ಷ್ಮಮ್ಮ ಮತ್ತು ಉಪಾಧ್ಯಕ್ಷರಾಗಿ ಹನುಮಂತರಾಯಪ್ಪ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ವೈ.ಎನ್‌ ರಾಮಕೃಷ್ಣಯ್ಯ, ಪಿಡಿಒ ಪ್ರಶಾಂತ್‌ ಹಾಜರಿದ್ದರು.

ದೊಡ್ಡೇರಿ ಹೋಬಳಿ ಚಂದ್ರಗಿರಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಸವಿತಾ ಕೆ.ಟಿ ಮತ್ತು ಉಪಾಧ್ಯಕ್ಷರಾಗಿ ಚಿಕ್ಕತಾಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ಗಿರೀಶ್‌ ಬಾಬು ರೆಡ್ಡಿ, ಪಿಡಿಒ ಸಂತೋಷ್‌ ಸಿಂಗ್‌ ಹಾಜರಿದ್ದರು. ಮುಖಂಡರುಗಳಾದ ಲಕ್ಷ್ಮೀನಾರಾಯಣ್‌, ಸಿ.ಆರ್‌.ರವಿ, ನಾಗಭೂಷಣ್‌, ಕೃಷ್ಣಯ್ಯ, ಅಂಗಡಿ ತಿಮ್ಮಣ್ಣ, ನರಸೇಗೌಡ, ಸಂಜೀವಣ್ಣ, ವಾಗೀಷಣ್ಣ ಮತ್ತಿತರಿದ್ದರು.

ದೊಡ್ಡೇರಿ ಹೋಬಳಿ ದಬ್ಬೇಗಟ್ಟಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಭಾರತಿ ಸಿದ್ದೇಶ್‌ ಅವಿರೋಧವಾಗಿ ಆಯ್ಕೆಯಾಗಿದ್ದರೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಮಂಜಮ್ಮ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ಹೊನ್ನೇಶಪ್ಪ, ಪಿಡಿಒ ಶಿವಣ್ಣ ಹಾಜರಿದ್ದರು.

click me!