ಕಟ್‌ ಆದ ಬೆರಳುಗಳ ಸಮೇತ ಕಿಮ್ಸ್‌ಗೆ ಬಂದ ಗಾಯಾಳು..!

Kannadaprabha News   | Asianet News
Published : Feb 05, 2021, 11:07 AM IST
ಕಟ್‌ ಆದ ಬೆರಳುಗಳ ಸಮೇತ ಕಿಮ್ಸ್‌ಗೆ ಬಂದ ಗಾಯಾಳು..!

ಸಾರಾಂಶ

ಕಟ್‌ ಆದ ಬೆರಳುಗಳನ್ನು ಡಬ್ಬಿಯಲ್ಲಿ ಹಾಕಿಕೊಂಡು ಬಂದು ಜೋಡಿಸಿ ಎಂದು ಗೋಗರೆದ ಕಾರ್ಮಿಕ| ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹಾಲಗಿ ಮರೋಳ ಗ್ರಾಮದ ನಾಗಪ್ಪ ಎಂಬ ಕಾರ್ಮಿಕ| ಕೆಲಸ ಮಾಡುವಾಗ ಯಂತ್ರದಲ್ಲಿ ಕೈ ಸಿಲುಕಿ ಮೂರು ಬೆರಳುಗಳು ಕಟ್‌| 

ಹುಬ್ಬಳ್ಳಿ(ಫೆ.05): ಕೆಲಸ ಮಾಡುತ್ತಿದ್ದಾಗ ಕಟ್‌ ಆದ ಬೆರಳುಗಳನ್ನು ಡಬ್ಬಿಯಲ್ಲಿ ಹಾಕಿಕೊಂಡು ಬಂದು ಜೋಡಿಸಿ ಎಂದು ಕಾರ್ಮಿಕನೊಬ್ಬ ಗೋಗರೆದ ಘಟನೆ ಇಲ್ಲಿನ ಕಿಮ್ಸ್‌ನಲ್ಲಿ ನಡೆದಿದೆ. ಸದ್ಯ ವೈದ್ಯರು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹಾಲಗಿ ಮರೋಳ ಗ್ರಾಮದ ನಾಗಪ್ಪ ಎಂಬ ಕಾರ್ಮಿಕ ಬೆರಳುಗಳನ್ನು ತೆಗೆದುಕೊಂಡು ಬಂದಿದ್ದ. ಈತ ಕಾಂಕ್ರೀಟ್‌ ಮಿಕ್ಸರ್‌ ಯಂತ್ರದಲ್ಲಿ ಕೆಲಸ ಮಾಡುವ ಕಾರ್ಮಿಕ. ಗುರುವಾರ ಮಧ್ಯಾಹ್ನ ಕೆಲಸ ಮಾಡುವಾಗ ಯಂತ್ರದಲ್ಲಿ ಕೈ ಸಿಲುಕಿ ಮೂರು ಬೆರಳುಗಳು ಕಟ್‌ ಆಗಿವೆ. ಕೂಡಲೇ ಕಟ್‌ ಆದ ಬೆರಳುಗಳನ್ನು ಡಬ್ಬಿಯಲ್ಲಿ ಹಾಕಿಕೊಂಡು ಕಿಮ್ಸ್‌ಗೆ ಬಂದಿದ್ದಾನೆ.

ಹುಬ್ಬಳ್ಳಿ: ಕೊರೋನಾ ಇರದಿದ್ರೂ ಕೋವಿಡ್ ವಾರ್ಡ್‌ಗೆ ಶಿಫ್ಟ್‌, ಹೃದಯಾಘಾತದಿಂದ ವೃದ್ಧ‌ ಸಾವು

ಕೆಲಸ ಮಾಡುವಾಗ ಬೆರಳುಗಳು ಕಟ್‌ ಆಗಿವೆ. ಇವುಗಳನ್ನು ಜೋಡಿಸಿ ಎಂದು ವೈದ್ಯರಲ್ಲಿ ಮನವಿ ಮಾಡಿದ್ದಾನೆ. ವೈದ್ಯರು ಬೆರಳುಗಳನ್ನು ಜೋಡಿಸಲು ಆಗುವುದಿಲ್ಲವೆಂದು ತಿಳಿಸಿ ಕೈಗೆ ಚಿಕಿತ್ಸೆ ನೀಡಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ.
 

PREV
click me!

Recommended Stories

ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!