ತುಮಕೂರು ವಿಭಜಿಸಿ ಮತ್ತೊಂದು ಜಿಲ್ಲೆಗೆ ಹೆಚ್ಚಿದ ಆಗ್ರಹ

By Kannadaprabha NewsFirst Published Feb 5, 2021, 10:58 AM IST
Highlights

ತುಮಕೂರಿನಲ್ಲಿ ಪ್ರತ್ಯೇಕ ಜಿಲ್ಲೆಯೊಂದರ ನಿರ್ಮಾಣಕ್ಕೆ ಇದೀಗ ಆಗ್ರಹ ಕೇಳಿ ಬಂದಿದೆ. ನೂತನ ಜಿಲ್ಲೆಗೆ ಜನರು ಮನವಿ ಮಾಡಿದ್ದಾರೆ. 

ತುಮಕೂರು (ಫೆ.05): ದೊಡ್ಡ ಜಿಲ್ಲೆಯಾಗಿರುವ ತುಮಕೂರು ಜಿಲ್ಲೆಯನ್ನು ಇಬ್ಭಾಗ ಮಾಡಿ ತಿಪಟೂರನ್ನು ಪ್ರತ್ಯೇಕ ಜಿಲ್ಲೆಯಾಗಿಸುವಂತೆ ವಿವಿಧ ಸಂಘಟನೆಗಳು ಆಗ್ರಹಿಸಿವೆ.

ಸೋಮವಾರವಷ್ಟೇ ತುಮಕೂರು ಜಿಲ್ಲೆಯನ್ನು ಇಬ್ಭಾಗ ಮಾಡಿ ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂದು ಡಿಸಿಎಂ ಪರಮೇಶ್ವರ್‌ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದ ಹಿನ್ನಲ್ಲಿಯೇ ಇದೀಗ ತಿಪಟೂರನ್ನು ಪ್ರತ್ಯೇಕ ಜಿಲ್ಲೆಯಾಗಿಸುವ ಕೂಗು ಕೇಳಿಬರುತ್ತಿದೆ.

ವಿಜಯನಗರಕ್ಕೆ ಹೆಚ್ಚಿದ ಬಲ : ರಾಜ್ಯದಲ್ಲಿ ಮತ್ತೊಂದು ಹೊಸ ಜಿಲ್ಲೆ .

ವಿವಿಧ ಸಂಘಟನೆಗಳು ತಿಪಟೂರನ್ನು ಪ್ರತ್ಯೇಕ ಜಿಲ್ಲೆಯಾಗಿಸಬೇಕು ಎಂದು ಆಗ್ರಹಿಸಿವೆ. 

ರಾಜ್ಯದಲ್ಲಿ ಈಗಾಗಲೇ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ನೂತನ ಜಿಲ್ಲೆಯಾಗಿ ಘೋಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ವಿವಿಧ ಜಿಲ್ಲೆಗಳಲ್ಲಿ ಪ್ರತ್ಯೇಕ ಜಿಲ್ಲೆಗಳ ಬೇಡಿಕೆ ಹೆಚ್ಚಿದ್ದು, ತಿಪಟೂರು ಜಿಲ್ಲೆ ಮಾಡುವಂತೆಯೂ ಬೇಡಿಕೆ ಇಡಲಾಗಿದೆ. 

click me!