ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಮರಳು ದಂಧೆಕೋರರಿಗೆ ಗ್ರಾಮಲೆಕ್ಕ ಬಳಿಯಾಗಿದ್ದು, ಈ ಬಗ್ಗೆ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ.
ಕೊಪ್ಪಳ, (ಡಿ.24): ರಾಯಚೂರು ಜಿಲ್ಲೆಯಲ್ಲಿ ನಡೆದ ಗ್ರಾಮಲೆಕ್ಕಿಗನ ಕೊಲೆ ವಿಚಾರವಾಗಿ ಸರಕಾರ ಕೈ ಕಟ್ಟಿ ಕೂಡಲ್ಲ. ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಸೋಮವಾರ ಬಾಗಲಕೋಟೆಗೆ ತೆರಳುವ ಮಾರ್ಗದಲ್ಲಿ ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್ಡಿಕೆ, ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಮೈತ್ರಿ ಸರಕಾರ ಕಾರಣ ಅಲ್ಲ. ಕಳೆದ ಹತ್ತು ವರ್ಷಗಳಿಂದ ಅಕ್ರಮ ನಡೆಯುತ್ತಿದೆ ಎಂಬುದನ್ನು ಕೆ.ಎಸ್.ಈಶ್ವರಪ್ಪ ಮಾತನಾಡಬೇಕು ಎಂದು ತಿರುಗೇಟು ನೀಡಿದರು.
ಸ್ಯಾಂಡ್ ಮಾಫಿಯಾ ಅಟ್ಟಹಾಸ: ಸರ್ಕಾರಕ್ಕೆ 5 ಸವಾಲ್!
ರಾಯಚೂರಿನಲ್ಲಿ ನಡೆದ ಗ್ರಾಮಲೆಕ್ಕಿಗನ ಕೊಲೆ ವಿಚಾರವಾಗಿ ಸರಕಾರ ಕೈ ಕಟ್ಟಿ ಕೂಡಲ್ಲ. ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಬ್ಬರನ್ನ ಬಂಧಿಸಿದೆ.
ರಾಜ್ಯದಲ್ಲಿ ನಡಿಯುತ್ತಿರೊ ಅಕ್ರಮ ಮರಳು ದಂಧೆಯನ್ನ ರಾತ್ರೋರಾತ್ರಿ ನಿಲ್ಲಿಸಲು ಕಷ್ಟಸಾಧ್ಯ. ಇದರಲ್ಲಿ ಅಧಿಕಾರಿಗಳ ಕುಮ್ಮಕ್ಕೂ, ರಾಜಕಾರಣಿಗಳ ಒತ್ತಡವೂ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ರಾಯಚೂರು: ಅಕ್ರಮ ತಡೆಯಲು ಹೋದ ಅಧಿಕಾರಿಗೆ ಸಿಕ್ಕಿದ್ದು ಸಾವು
ರಾಜ್ಯದಲ್ಲಿ ಅಕ್ರಮ ಮರಳು ದಂಧೆ ನಿಲ್ಲಿಸಲು ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.