ವಿಶ್ವ ಪರಿಸರ ದಿನದಂದೇ ಬೃಹತ್ ಗಾತ್ರದ ಮರಗಳ ಮಾರಣಹೋಮ

By Suvarna News  |  First Published Jun 5, 2022, 5:46 PM IST

* ವಿಶ್ವ ಪರಿಸರ ದಿನದಂದೇ ಬೃಹತ್ ಗಾತ್ರದ ಮರಗಳ ಮಾರಣಹೋಮ
* ರಸ್ತೆ ಅಗಲೀಕರಣ ನೆಪದಲ್ಲಿ ಮರಗಳ‌ ಮಾರಣಹೋಮ
* * ಜಿಲ್ಲಾಡಳಿತದ ವಿರುದ್ದ ಪರಿಸರ ಪ್ರೇಮಿಗಳ ಹಿಡಿಶಾಪ


ಚಿತ್ರದುರ್ಗ, (ಜೂನ್.05): ಪ್ರತಿ ವರ್ಷ ಜೂನ್  5ರಂದು  ವಿಶ್ವ ಪರಿಸರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಅದರಂತೆ ಇಂದು(ಭಾನುವಾರ) ಎಲ್ಲೆಡೆ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕೆಲವರು ಹಸಿರೇ-ಉಸಿರು ಎನ್ನುತ್ತ ಗಿಡ ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಿದ್ದಾರೆ. ಇತ್ತ ವಿಶ್ವ ಪರಿಸರ ದಿನವೇ  ಮರಗಳ‌ ಮಾರಣಹೋಮ ಮಾಡಲಾಗಿದೆ.

ಹೌದು...ಚಿತ್ರದುರ್ಗ ಜಿಲ್ಲೆಯನ್ನು ಎಲ್ಲರೂ ಐತಿಹಾಸಿಕ ಪ್ರವಾಸಿತಾಣಗಳ ಊರು ಎಂದು ಕರೆಯುತ್ತಾರೆ. ಆದ್ರೆ ಸದ್ಯದ ಅಲ್ಲಿನ ರಸ್ತೆಗಳ ಪರಿಸ್ಥಿತಿ ನೋಡಿ ಪ್ರವಾಸಿಗರೇ ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕ್ತಿದ್ರು. ಹೀಗಾಗಿ ಎಚ್ಚೆತ್ತ ಜಿಲ್ಲಾಡಳಿತ ಅಲ್ಲಿನ ರಸ್ತೆಗಳ ಅಭಿವೃದ್ಧಿ ನೆಪದಲ್ಲಿ ಬೃಹತ್ ಮರಗಳ ಮಾರಣ ಹೋಮ ನಡೆಸ್ತಿದೆ. ಆದ್ರೆ ಇದರ ಮಧ್ಯೆ ರಸ್ತೆ ಅಗಲಿಕರಣ‌ ಮಾತ್ರ ಮರಿಚಿಕೆಯಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

Latest Videos

undefined

, ಹಲವು ವರ್ಷಗಳ ಹಿಂದೆ ಚಿತ್ರದುರ್ಗದ‌ ಮಾಜಿ ಶಾಸಕ ಭೀಮಪ್ಪನಾಯಕ ಅವರು ಮುಂದಾಲೋಚನೆಯಿಂದ ರಸ್ತೆಬದಿಯ ಎರಡು ಕಡೆಗಳಲ್ಲಿ ಪೂಜ್ಯ ಭಾವನೆಯ ಅರಳಿ, ಬೇವು ಹಾಗೂ ಆಲದ ಮರಗಳನ್ನು ನೆಡಿಸಿ, ಬೆಳೆಸಿದ್ರು. ಆ ಮರಗಳು ಸಹ ಹೆಮ್ಮರವಾಗಿ ಬೆಳೆದು ನಾಗರೀಕರಿಗೆ ನೆರಳಿನ ಆಶ್ರಯ ತಾಣವಾಗಿದ್ವು. ಆದ್ರೆ‌ ರಸ್ತೆ ಅಗಲಿಕರಣದ ನೆಪದಲ್ಲಿ ಜೋಗಿಮಟ್ಟಿ ರಸ್ತೆ, ಕಾರ್ ನಿಲ್ದಾಣ ಹಾಗೂ ಸರ್ಕಾರಿ  ಬಸ್ ನಿಲ್ದಾಣದ ಸಮೀಪದಲ್ಲಿನ ಮರಗಳನ್ನು ಬುಡುಸಮೇತ ತುಂಡರಿಸಲಾಗಿದೆ. 

World Environment Day: ಎಲ್ಲರಿಗೂ 'ಒಂದೇ ಒಂದು ಭೂಮಿ', ಪರಿಸರ ಉಳಿಸಿ, ಬೆಳೆಸಿ

ಈ ಮರಗಳ ತೆರವಿಗಾಗಿಯೇ ಲಕ್ಷಾಂತರ ರೂಪಾಯಿ ಹಣ ಸಹ ಸರ್ಕಾರ ಖರ್ಚು ಮಾಡಿದೆ. ಆದ್ರೆ ರಸ್ತೆ ಅಗಲಿಕರಣ ಮಾತ್ರ ಆಗುತ್ತಿಲ್ಲ. ಅಲ್ಲದೇ ಅಧಿಕಾರಿಗಳು ಹಾಗು ಗುತ್ತಿಗೆದಾರರು ಶಾಮೀಲಾಗಿ ಕಿಷ್ಕಿಂದೆಯಂತಹ ರಸ್ತೆಗಳನ್ನೇ  ಮತ್ತೆ ನಿರ್ಮಾಣ ಮಾಡಿದ್ದಾರೆ. ಹಾಗೆಯೇ ಚಿಕ್ಕ ರಸ್ತೆಯ ಮದ್ಯೆ ಡಿವೈಡರ್ ಒಂದನ್ನು ಸಹ ನಿರ್ಮಿಸಿ, ವಾಹನಗಳು ಸರಾಗವಾಗಿ ಓಡಾಡಲು ಪರದಾಡುವಂತಾಗಿದೆ‌. ಹೀಗಾಗಿ  ವಾಹನ ಸವಾರರು ಪ್ರಾಣಭಯದಿಂದ ರಸ್ತೆ ದಾಟುವಂತಾಗಿದ್ದೂ, ಸರ್ಕಾರಿ ಬಸ್ ನಿಲ್ದಾಣದ ಬಳಿ  ಬಸ್  ತಿರುಗಿಸಲುಚಾಲಕರು  ಹರಸಾಹಸ ಪಡುವಂತಾಗಿದೆ. ಇಷ್ಟೆಲ್ಲಾ ಸಮಸ್ಯೆ ಆದರೂ ಕೂಡ ಅನಗತ್ಯವಾಗಿ ಮರಗಳನ್ನು ಕಡಿಯುವಲ್ಲಿ ಇರುವ ಆಸಕ್ತಿ ರಸ್ತೆ ಅಗಲಿಕರಣ ಮಾಡುವಲ್ಲಿ ತೋರುತ್ತಿಲ್ಲ ಎಂದು ಇಲ್ಲಿನ ಸ್ಥಳಿಯರು ಅಧಿಕಾರಿಗಳ  ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ‌.

ಇನ್ನು ಈ ಬಗ್ಗೆ ನಗರಸಭೆ ಅಧಿಕಾರಿಗಳನ್ನು ಕೇಳಿದ್ರೆ, ಎಸ್ ಇಪಿ‌ಟಿಎಸ್ ಪಿ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಕೋಟೆನಾಡಲ್ಲಿ ರಸ್ತೆ ಅಗಲಿಕರಣ ನಡೆಸಲಾಗ್ತಿದೆ. ಹೀಗಾಗಿ, ರಸ್ತೆ ಬದಿಯ ಮರಗಳನ್ನು ಮಾತ್ರ ತೆರವುಗೊಳಿಸಲಾಗಿದ್ದೂ, ರಸ್ತೆ ಕಾಮಗಾರಿ ಮುಕ್ತಾಯದ ಬಳಿಕ ಯಥಾಸ್ಥಿತಿಯಲ್ಲಿ ಗಿಡಗಳನ್ನು ಹಾಕುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಅಂತಾರೆ.ಈ ವೇಳೆ ರಸ್ತೆ ಅಗಲಿಕರಣ ಕಾಮಗಾರಿ ಕಳಪೆಯಾಗಿದ್ದೂ, ಯೋಜನೆಯನ್ವಯ ರಸ್ತೆ ಅಗಲಿಕರಣ  ಆಗ್ತಿದ್ಯ ಅಂತ  ಕೇಳಿದ್ರೆ ಹಾರಿಕೆ ಉತ್ತರ ಕೊಟ್ಟು ಜಾರ್ಕೊತಾರೆ..

ಒಟ್ಟಾರೆ ಕೋಟೆನಾಡಲ್ಲಿ ರಸ್ತೆ ಅಗಲಿಕರಣದ ನೆಪದಲ್ಲಿ ಮರಗಳ ಮಾರಣ‌ ಹೋಮ ನಡೆಯುತ್ತಿದೆ‌.‌ ಆದ್ರೆ ರಸ್ತೆ ಅಗಲಿಕರಣ ಮಾತ್ರ ಆಗ್ತಿಲ್ಲ. ಬದಲಾಗಿ ಮತ್ತೆ ವಾಹನಸವಾರರು ಹಾಗು ಪ್ರವಾಸಿಗರು ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ. ಇನ್ನಾದ್ರು ಸಂಬಂಧಪಟ್ಟ ಶಾಸಕರು ಮತ್ತು  ಜಿಲ್ಲಾಡಳಿತ ಈ ಕಳಪೆ ಕಾಮಗಾರಿಯತ್ತ ಕಾಳಜಿವಹಿಸಿ, ಯೋಜನಬದ್ದವಾಗಿ  ರಸ್ತೆ ಅಗಲೀಕರಣ ಮಾಡಲು ಮುಂದಾಗಬೇಕಿದೆ‌.
 

click me!