Udupi ; ಉಚಿತ ಪುಸ್ತಕ ಹಂಚುವ ಅಸಾಮಾನ್ಯ ಕನ್ನಡಿಗ ಕೂ.ಗೋ ಅಜ್ಜ!

By Suvarna News  |  First Published Jun 5, 2022, 5:40 PM IST

 ಅಕ್ಷರಸ್ಥರೆಲ್ಲಾ ಸಾಹಿತ್ಯ ಪ್ರೇಮಿಗಳಾಗಬೇಕೆಂಬ ಕನಸು ಕಂಡ ಉಡುಪಿಯ ಸಾಹಿತಿ ಕು.ಗೋ ನಿಜಕ್ಕೂ ಒಬ್ಬ ಅಸಾಮಾನ್ಯ ಕನ್ನಡಿಗ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಇವರನ್ನು ಅಸಾಮಾನ್ಯ ಕನ್ನಡಿಗನೆಂದು ಗುರುತಿಸಿ ಗೌರವಿಸಿತ್ತು.  ಅವರೀಗ 85 ನೇ ವಸಂತಕ್ಕೆ ಕಾಲಿರಿಸಿದ್ದಾರೆ.


ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಜೂ.5): ಜೋಳಿಗೆ ತುಂಬಾ ಪುಸ್ತಕ, ಎದುರು ಸಿಕ್ಕವರಿಗೆ ಉಚಿತವಾಗಿ ಪುಸ್ತಕ ಕೊಟ್ಟು ಪುಸ್ತಕದ ಲೇಖಕನಿಗೆ ಪತ್ರ ಬರೆದು ಅಭಿಪ್ರಾಯ ತಿಳಿಸಿ ಎಂದು ಹೇಳುವ ಉದಾರರ ಗುಣ. ಕೊಟ್ಟ ಪುಸ್ತಕಕ್ಕೆ ಎಂದು ಹಣ ಕೇಳಿದವರಲ್ಲ, ಪುಸ್ತಕ ಪಡೆದವರು ಹಣ ಕೊಡಲಿಲ್ಲವೆಂದು ಬೇಸರಿಸಿಕೊಂಡವರೂ ಅಲ್ಲ.  ಅಕ್ಷರಸ್ಥರೆಲ್ಲಾ ಸಾಹಿತ್ಯ ಪ್ರೇಮಿಗಳಾಗಬೇಕೆಂಬ ಕನಸು ಕಂಡ ಉಡುಪಿಯ ಸಾಹಿತಿ ಕು.ಗೋ ನಿಜಕ್ಕೂ ಒಬ್ಬ ಅಸಾಮಾನ್ಯ ಕನ್ನಡಿಗ!

Latest Videos

undefined

ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಇವರನ್ನು ಅಸಾಮಾನ್ಯ ಕನ್ನಡಿಗನೆಂದು ಗುರುತಿಸಿ ಗೌರವಿಸಿತ್ತು. ಈ ಕನ್ನಡ ಸೇವಕ ಇಂದು ನೂರಾರು ಸಾಹಿತ್ಯಾಭಿಮಾನಿಗಳ ನಡುವೆ 85 ನೇ ವಸಂತಕ್ಕೆ ಕಾಲಿರಿಸಿದರು. ಎಚ್ ಗೋಪಾಲ ಭಟ್, ಕುಗೋ ಎಂಬ ಕಾವ್ಯನಾಮದಿಂದಲೇ ಕನ್ನಡ   ನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ . ಸಾರಸ್ವತಲೋಕದಲ್ಲಿ ಎಲ್ಲರೂ ತಮ್ಮ ಬರವಣಿಗೆಗಳ ಮೂಲಕ ಹೊಸ ಹೊಸ ಸಾಹಿತ್ಯ ಸೃಷ್ಟಿಸುತ್ತಿದ್ದರೆ, ಸ್ವತಹ ಸಾಹಿತಿ ಯಾಗಿರುವ ಕೂ.ಗೋ ಮಾತ್ರ ಹೊಸ ಓದುಗರನ್ನು ಸೃಷ್ಟಿಸುವ ಸಾಹಸಕ್ಕೆ ಕೈಹಾಕಿ ಗೆದ್ದವರು.

ಸ್ವಯಂ ಸಾಹಿತ್ಯ ರಚಿಸಿ ತನ್ನ ಹೆಸರನ್ನು ಸಾರಸ್ವರ ಲೋಕದಲ್ಲಿ ಸ್ಥಾಪಿಸುವುದಕ್ಕೆ ಬದಲಾಗಿ, ಮತ್ತೊಬ್ಬರನ್ನು ಅಕ್ಷರ ಪೀಠದಲ್ಲಿ ಕುಳ್ಳಿರಿಸಿ ಸಂಭ್ರಮ ಪಟ್ಟವರು. ಇವರ ಸಾಹಸಗಳನ್ನು ಕೇಳಿದರೆ ನೀವು ಅಚ್ಚರಿ ಪಡುತ್ತೀರಾ!

ಪಠ್ಯ ಪರಿಷ್ಕರಣೆ ವಿವಾದ: ಸಚಿವ ಬಿಸಿ ನಾಗೇಶ್​ಗೆ ಸಿದ್ದರಾಮಯ್ಯ ಸಾಲು-ಸಾಲು ಪ್ರಶ್ನೆ 

ಓದುಗರು ಬೇಕೆಂದು ಪ್ರಕಟಣೆ ಕೊಟ್ಟರು: ಸುಮಾರು ಎರಡು ದಶಕಗಳ ಹಿಂದಿನ ಮಾತು, ತಾನು ಬರೆದ 500 ಪುಸ್ತಕಗಳು ಬಿಕರಿಯಾಗದೆ ಉಳಿದಾಗ, ಓದುಗರು ಬೇಕಾಗಿದ್ದಾರೆ ಎಂದು ಪತ್ರಿಕಾ ಜಾಹೀರಾತು ಕೊಟ್ಟು. ಓದುವ ಆಸಕ್ತಿ ಇದ್ದವರಿಗೆಲ್ಲಾ ಉಚಿತವಾಗಿ ಪುಸ್ತಕ ಹಂಚಿದ್ದರು ಕು.ಗೋ. ಅಂದು ಆರಂಭವಾದ ಇವರ ಪುಸ್ತಕ ವಿತರಣೆ ಇಂದಿಗೂ ನಿಂತಿಲ್ಲ! ತಾನು ಓದಿ ಇಷ್ಟಪಟ್ಟ ಪುಸ್ತಕಗಳನ್ನು ತನ್ನ ಒಡನಾಟದಲ್ಲಿರುವ ನೂರಾರು ಮಂದಿಗೆ ಹಂಚುತ್ತಾ ಸಾಗುವುದು ಇವರ ಅಪರೂಪದ ಹವ್ಯಾಸ.

ಐವತ್ತು ಸಾವಿರ ಪುಸ್ತಕ ವಿತರಣೆ: ನಾಡಿನ ನಾನಾ ಭಾಗಗಳ ನೂರಾರು ಲೇಖಕರಿಗೆ ಓದುಗರನ್ನು ಒದಗಿಸಿಕೊಟ್ಟ ಕೀರ್ತಿ ಕು.ಗೋ ಅವರಿಗೆ ಸಲ್ಲುತ್ತದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಈವರೆಗೆ ಸುಮಾರು ಐವತ್ತು ಸಾವಿರ ಪುಸ್ತಕಗಳನ್ನು ವಿತರಿಸಿದ್ದಾರೆ.‌ ಬಹುತೇಕ ಉಚಿತವಾಗಿಯೇ ಈ ಪುಸ್ತಕಗಳನ್ನು ವಿತರಿಸಿ ಕೇವಲ ಹಣ ಕೊಟ್ಟವರಿಂದ ಮಾತ್ರ ಪಡೆದು ಉದಾರತೆ ಮೆರೆದಿದ್ದಾರೆ. 

ಸುಮಾರು 300 ರಿಂದ 400 ಲೇಖಕರ ಅಂದಾಜು 15 ಲಕ್ಷ ಮೌಲ್ಯದ ಪುಸ್ತಕವನ್ನು ಆಸಕ್ತರ ಕೈಸೇರುವಂತೆ ಮಾಡಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ನಯಾಪೈಸೆ ಪಡೆಯದೆ ಪುಸ್ತಕ ನೀಡಿದ್ದಾರೆ. ಈವರೆಗಿನ ಇವರ ಪುಸ್ತಕ ವ್ಯವಹಾರದಲ್ಲಿ ಹಣ ಪಡೆದ ಬಾಬ್ತು ಕೇವಲ ಶೇ.10 ಮಾತ್ರ! ಉಳಿದದ್ದೆಲ್ಲವೂ ಉಚಿತ. ತಾನು ಓದಿ ನನಗೆ ಇಷ್ಟವಾದ ಪುಸ್ತಕವನ್ನು ಮಾತ್ರ ಇತರರಿಗೆ ಹಂಚುವುದು ಇವರ ಮತ್ತೊಂದು ಮಹತ್ವದ ಗುಣ. ಇವರು ಉಚಿತವಾಗಿ ಹೆಚ್ಚಿರುವ ಪುಸ್ತಕಗಳ ಮೌಲ್ಯ ಅದೆಷ್ಟು ಲಕ್ಷವೋ  ಲೆಕ್ಕ ಇಟ್ಟವರಿಲ್ಲ! 

ಸುಹಾಸಂ ಎಂಬ ಸಮಾನಮನಸ್ಕ ಸಾಹಿತ್ಯಾಸಕ್ತರ ಸಂಘಟನೆ ಕಟ್ಟಿಕೊಂಡು ಕಳೆದ 25 ವರ್ಷಗಳಲ್ಲಿ ನೂರಾರು ಲೇಖಕರ ಪುಸ್ತಕ ಪ್ರಕಟಿಸಿದ್ದಾರೆ. ಸಾವಿರಾರು ಸಾಹಿತ್ಯ ಪ್ರೇಮಿಗಳಿಗೆ ಅವಕಾಶ ಕೊಟ್ಟಿದ್ದಾರೆ.

ನಾಡಿನ ಜನರ ಚಡ್ಡಿ ಬಿಚ್ಚಿಸೋ ಕೆಲಸ ಮಾಡ್ಬೇಡಿ, ವಿಪಕ್ಷಕ್ಕೆ KUMARASWAMY ಎಚ್ಚರಿಕೆ

ಪುಸ್ತಕ ಸಂಸ್ಕೃತಿಯ ಸಂತನಿಗೆ ಅಭಿನಂದನೆ: ಪುಸ್ತಕ ಸಂಸ್ಕೃತಿಯ ಸಂತ ಎಂದೇ ಕರೆಯಲ್ಪಡುವ ಕು ಗೋ ಇಂದು ಸಾಹಿತ್ಯ ಅಭಿಮಾನಿಗಳ ನಡುವೆ 85ನೇ ವಸಂತಕ್ಕೆ ಕಾಲಿರಿಸಿದರು. ಇವರಿಂದ ಪುಸ್ತಕ ಪಡೆದು ಖುಷಿಪಟ್ಟ ಓದುಗರೆಲ್ಲಾ ಸೇರಿ ಅಭಿನಂದನಾ ಸಮಾರಂಭ ನಡೆಸಿದರು. ನಾಡಿನ ಖ್ಯಾತ ಸಾಹಿತಿಗಳು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಭಿಮಾನಿಗಳ ಜೊತೆ ಕು.ಗೋ ಸಂವಾದ ನಡೆಸಿದರು.‌ ಕು.ಗೋ ಅಜ್ಜನ ಬಗ್ಗೆ, ಅವರಿಂದಲೇ ಪ್ರೇರಣೆ ಪಡೆದು ಓದುವ ಸಂಸ್ಕೃತಿಯನ್ನು ಆರಂಭಿಸಿರುವ ಯುವ ಓದುಗರು ಮಾತನಾಡಿದರು. 

ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ, ಗಣ್ಯ ಅತಿಥಿಗಳಾದ ಶಿಕ್ಷಣತಜ್ಞ ಡಾ.ಮಹಾಬಲೇಶ್ವರ ರಾವ್, ಖ್ಯಾತ ಹಾಸ್ಯ ಸಾಹಿತಿ ಎಸ್. ನರಸಿಂಹಮೂರ್ತಿ, ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಸಂಘಟಕ ಮುರಳಿ ಕಡೆಕಾರ್, ಸಾಹಿತಿ ಶಾಂತರಾಜ್ ಐತಾಳ್, ಇಂದ್ರಾಳಿ ಜಯಕರ ಶೆಟ್ಟಿ, ಗಣನಾಥ ಎಕ್ಕಾರು ಸೇರಿದಂತೆ ಕರಾವಳಿ ಭಾಗದ ಅನೇಕ ಗಣ್ಯರು ಹಾಜರಿದ್ದರು.

click me!