ಇನ್ನೂ ಬಾಳಿ ಬದುಕಬೇಕಿದ್ದ ಏಳು ವರ್ಷದ ಬಾಲಕ, ಕೇವಲ ಟೈಲರಿಂಗ್ ಮಿಷನ್ ಗಾಲಿಗೆ ತಗುಲಿ ಆದ ಕೈ ನೋವಿಗೆ ಆಸ್ಪತ್ರೆಗೆ ತೆರಳಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ಘಟನೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.30): ಇನ್ನೂ ಬಾಳಿ ಬದುಕಬೇಕಿದ್ದ ಏಳು ವರ್ಷದ ಬಾಲಕ, ಕೇವಲ ಟೈಲರಿಂಗ್ ಮಿಷನ್ ಗಾಲಿಗೆ ತಗುಲಿ ಆದ ಕೈ ನೋವಿಗೆ ಆಸ್ಪತ್ರೆಗೆ ತೆರಳಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ಘಟನೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಹೌದು, ಬಾಲಕನ ಸಾವಿಗೆ ಕಂಬನಿ ಮಿಡಿದು ಮೌನಕ್ಕೆ ಶರಣಾಗಿರುವ ಸಂಬಂಧಿಗಳು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆ(Chitradurga district hospital)ಯಲ್ಲಿ, ಹೌದು ಹೀಗೆ ಶವವಾಗಿ ಮಲಗಿರುವ ಬಾಲಕ ಚಿರಾಯು ಹೆಸರಿಗೆ ಮಾತ್ರ ಚಿರಾಯು ಎಂದಾಗಿದ್ದಾನೆ. ಇನ್ನೂ ಏಳು ವರ್ಷದ ಜಗತ್ತಿಗೆ ಹೊಂದಿಕೊಳ್ಳಬೇಕಾದವ ಹೆಣವಾಗಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊಸಳ್ಳಿ ಗ್ರಾಮದ ಸುನಿತಾ ಮಾಲತೇಶ್ ದಂಪತಿಗಳ ಮಗ ಚಿರಾಯು, ಗಂಡನನ್ನು ಕಳೆದುಕೊಂಡು ಒಬ್ಬಂಟಿಯಾಗಿ ಟೈಲರಿಂಗ್ ಉದ್ಯೋಗ ಮಾಡಿಕೊಂಡು ಮಗನನ್ನು ಬೆಳೆಸುತ್ತಾ ಬದುಕು ಸಾಗಿಸುವ ಹೊತ್ತಿನಲ್ಲಿ ನಿನ್ನೆ ತಾಯಿ ಸುನೀತಾಗೆ ಜವರಾಯ ಶಾಕ್ ನೀಡಿದ್ದಾನೆ.
ಯುವಕ ಸಾವು: ಜ್ವರಕ್ಕೆ ಇಂಜೆಕ್ಷನ್ ನೀಡಿದ ವೈದ್ಯರ ವಿರುದ್ಧ ಆಕ್ರೋಶ
ತಾಯಿಯ ಬದುಕಿಗೆ ಆಸರೆಯಾಗಿದ್ದ ಟೈಲರಿಂಗ್ ಮಿಷನ್ ಕೈ ತಾಕಿ ಅದರಿಂದ ಕೈ ಊದಿಕೊಂಡಿದ್ದಕ್ಕೆ ತಾಯಿ ಮಗನನ್ನು ಚಿಕ್ಕಜಾಜೂರು ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆಂದು ಹೋಗಿದ್ದಾರೆ. ಅಲ್ಲಿ ವೈದ್ಯರಿಲ್ಲದ ಕಾರಣ ಸಿಸ್ಟರ್ ಇಂಜೆಕ್ಷನ್ ನೀಡಿದ್ದಾರೆ. ಇಂಜೆಕ್ಷನ್ ರಿಯಾಕ್ಷನ್ ಆಗಿ ಬಾಲಕ ವಾಂತಿ ಮಾಡಿಕೊಂಡಿದ್ದಾನೆ. ಇದರಿಂದ ಗಾಬರಿಯಾದ ತಾಯಿ ಮಗನನ್ನು ಹೊಳಲ್ಕೆರೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾಳೆ. ಆದರೆ ಅಲ್ಲಿಯೂ ಸಹ ವೈದ್ಯರು ನಿರ್ಲಕ್ಷ್ಯ ವಹಿಸಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಹೀಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿಸಿದ ವೈದ್ಯರು ಸಮಯ ಹಾಳು ಮಾಡಿದ್ದಾರೆ. ಚಿತ್ರದುರ್ಗ ಆಸ್ಪತ್ರೆಗೆ ತೆರಳುವ ಮಾರ್ಗ ಮದ್ಯದಲ್ಲೇ ಚಿರಾಯು ಇಹಲೋಕ ತ್ಯಜಿಸಿದ್ದಾನೆ. ಮಗನ ಸಾವಿಗೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಬಾಲಕನ ತಾಯಿ ಆರೋಪ ಮಾಡಿದ್ದಾರೆ.
ಇನ್ನು ಈ ಘಟನೆಯಿಂದ ವೈದ್ಯರ ನಡೆಯನ್ನು ಖಂಡಿಸಿ ಸಂಬಂಧಿಕರು ವೈದ್ಯರು ನೀಡಿದ ಇಂಜೆಕ್ಷನ್ ರಿಯಾಕ್ಷನ್ ಆಗಿ ಚಿರಾಯು ಸಾವನಪ್ಪಿದ್ದು, ಒಂದು ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಮಹಿಳೆಗೆ ಇದೀಗ ಮಗು ಸಾವನಪ್ಪಿದೆ. ಈ ಘಟನೆಗೆ ಸಂಬಂಧಿಸಿದಂತೆ ವೈದ್ಯರ ವಿಚಾರಣೆ ನಡೆಸಬೇಕು. ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಮಂಗಳೂರು ಪ್ರತಿಷ್ಠಿತ ಎ.ಜೆ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಗರ್ಭಿಣಿ ಸಾವು, ರಣರಂಗವಾದ ಆಸ್ಪತ್ರೆ ಆವರಣ
ಒಟ್ಟಾರೆಯಾಗಿ ಚಿಕ್ಕ ಕೈ ಬಾಹು ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಿದ್ದ ಬಾಲಕ ಇಂದು ಹೆಣವಾಗಿದ್ದಾನೆ. ಗಂಡನನ್ನು ಕಳೆದುಕೊಂಡ ಸುನೀತಾ ಇಂದು ತನ್ನ ಮಗನ್ನು ಕಳೆದುಕೊಂಡಿದ್ದಾಳೆ. ಜೀವ ಉಳಿಸಬೇಕಾದ ವೈದ್ಯರು ತಮ್ಮ ನಿರ್ಲಕ್ಷ್ಯದಿಂದ ಮಗುವಿನ ಪ್ರಾಣ ಹೋಗಿದೆ. ಈ ಘಟನೆಗೆ ನರ್ಸ್ ನೀಡಿದ ಇಂಜೆಕ್ಷನ್ ರಿಯಾಕ್ಷನ್ ಕಾರಣವೇ ಎಂಬುದು ತನಿಖೆ ಮೂಲಕ ಬಯಲಾಗಬೇಕಿದೆ