ವಿಜಯನಗರ: ಹಂಪಿಯಲ್ಲಿ ಅಪರೂಪದ ಬಿಳಿ ಬಣ್ಣದ ಮಣ್ಣುಮುಕ್ಕ ಹಾವು ಪತ್ತೆ..!

Published : Aug 30, 2023, 09:42 AM IST
ವಿಜಯನಗರ: ಹಂಪಿಯಲ್ಲಿ ಅಪರೂಪದ ಬಿಳಿ ಬಣ್ಣದ ಮಣ್ಣುಮುಕ್ಕ ಹಾವು ಪತ್ತೆ..!

ಸಾರಾಂಶ

ಇದು ಆನುವಂಶಿಕ ಅಸಹಜತೆಯಾಗಿದೆ. ಇವುಗಳ ಅಸಹಜತೆ, ವರ್ಣದ್ರವ್ಯ ಮತ್ತು ಬಣ್ಣದಿಂದಾಗಿ ಈ ಹಾವುಗಳನ್ನು ‘ಅಪರೂಪ’ ಎಂದು ಕರೆಯುತ್ತಾರೆ. ಬಹುಶಃ ಕರ್ನಾಟಕದಲ್ಲಿ ಮೊದಲನೇ ಬಾರಿಗೆ ಇಂತಹ ಅಪರೂಪದ ಸಾಮಾನ್ಯ ಬಿಳಿ ಮಣ್ಣು ಮುಕ್ಕ ಹಾವು ಕಂಡುಬಂದಿದೆ.

ಹೊಸಪೇಟೆ(ಆ.30): ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಆವರಣದಲ್ಲಿ ಅಪರೂಪದ ಸಾಮಾನ್ಯ ಬಿಳಿ ಬಣ್ಣದ ಮಣ್ಣು ಮುಕ್ಕ ಹಾವು ಪತ್ತೆಯಾಗಿದೆ. ಉರಗ ಹಾಗೂ ವನ್ಯಜೀವಿ ರಕ್ಷಕ ಮಲ್ಲಿಕಾರ್ಜುನ ಜಿ.ಬಿ. ಈ ಹಾವು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಈ ಹಾವು ಯಾವ ಪ್ರಭೇದದ್ದು ಎಂದು ಗುರುತಿಸಲಾಗದೆ ಅಲ್ಲಿನ ಭದ್ರತಾ ಸಿಬ್ಬಂದಿ ಹಾಗೂ ಪ್ರವಾಸಿಗರು ಗೊಂದಲಕ್ಕೀಡಾಗಿದ್ದರು. ಈ ವೇಳೆ ಮಲ್ಲಿಕಾರ್ಜುನ ಜಿ.ಬಿ. ಆಗಮಿಸಿ ಹಾವು ರಕ್ಷಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅನಿಮಲ್‌ ಕನ್ಸರ್ವೇಷನ್‌ ಸಂಸ್ಥೆಯ ಮುಖ್ಯಸ್ಥ ಹಾಗೂ ಹಾವು (ಉರಗ) ಮತ್ತು ವನ್ಯಜೀವಿ ರಕ್ಷಕ ವೇಣುಗೋಪಾಲ್‌ ನಾಯ್ಡು, ಇದು ಬೇರೆಯ ಜಾತಿ ಹಾವಲ್ಲ. ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್‌ ಅಥವಾ ಪಿಗ್ಮೆಂಟ್‌ ಕೊರತೆಯಿಂದ ಚರ್ಮಕ್ಕೆ ಬಣ್ಣ ಬರದೇ ಈ ರೀತಿ ಬಿಳಿ ಬಣ್ಣಕ್ಕೆ ಕಾರಣವಾಗುತ್ತದೆ. ಇದನ್ನು ಅಲ್ಬಿನೋ ಸ್ನೇಕ್ಸ್‌ ಎಂದು ಕೂಡಾ ಕರೆಯುತ್ತಾರೆ ಎಂದರು.

ಧಾರವಾಡ: ಕಟ್ಟಡ ಕುಸಿತದ ಜಾಗದಲ್ಲಿ ಹಾವುಗಳ ಸಾಮ್ರಾಜ್ಯ..!

ಇದು ಆನುವಂಶಿಕ ಅಸಹಜತೆಯಾಗಿದೆ. ಇವುಗಳ ಅಸಹಜತೆ, ವರ್ಣದ್ರವ್ಯ ಮತ್ತು ಬಣ್ಣದಿಂದಾಗಿ ಈ ಹಾವುಗಳನ್ನು ‘ಅಪರೂಪ’ ಎಂದು ಕರೆಯುತ್ತಾರೆ. ಬಹುಶಃ ಕರ್ನಾಟಕದಲ್ಲಿ ಮೊದಲನೇ ಬಾರಿಗೆ ಇಂತಹ ಅಪರೂಪದ ಸಾಮಾನ್ಯ ಬಿಳಿ ಮಣ್ಣು ಮುಕ್ಕ ಹಾವು ಕಂಡುಬಂದಿದೆ ಮತ್ತು ಈ ಹಾವುಗಳು ವಿಷಕಾರಿಯಲ್ಲದ ಹಾವಾಗಿದ್ದು, ಈ ಮಣ್ಣು ಮುಕ್ಕ ಹಾವುಗಳಲ್ಲಿ ಮೂರು ಜಾತಿಯ ಹಾವುಗಳಿದ್ದು, ಸಾಮಾನ್ಯ ಮಣ್ಣು ಮುಕ್ಕ ಹಾವು, ಕೆಂಪು ಮಣ್ಣು ಮುಕ್ಕ ಹಾವು ಹಾಗೂ ವೇಟೆಕಾರ ಮಣ್ಣು ಮುಕ್ಕ ಹಾವುಗಳಿವೆ ಎಂದು ಉರಗ ರಕ್ಷಕ ಮಲ್ಲಿಕಾರ್ಜುನ ತಿಳಿಸಿದ್ದಾರೆ.

PREV
Read more Articles on
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು