77 ಸ್ವಾತಂತ್ರ್ಯ ದಿನಾಚರಣೆ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಹಲವು ಕಾರ್ಯಕ್ರಮ, ಸಾಂಸ್ಕೃತಿಕ ಸಂಭ್ರಮ ಸಾಧಕರಿಗೆ ಸನ್ಮಾನ, ಸಂಗೀತ ಸಂಜೆ ಫ್ಯಾಷನ್ ಶೋ.
ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಆ.30): 77 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಸೆಪ್ಟೆಂಬರ್ 3 ರಂದು ಸಂಜೆ 5 ಗಂಟೆಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂತೋಷ್ ಲಾಡ್ ಫೌಂಡೇಶನ್ ಅಧ್ಯಕ್ಷ ಆನಂದ ಕಲಾಲ್ ಅವರು, 60 ಸಾವಿರ ಕೋಟಿ ರೂಪಾಯಿಗಳನ್ನು ಕರ್ನಾಟಕದ ಬಡ ಕುಟುಂಬಗಳಿಗೆ 5 ಗ್ಯಾರಂಟಿ ಯೋಜನೆಗಳ ಮೂಲಕ ನೀಡಿ ಅವರ ಬಾಳಿಗೆ ಬೆಳಕಾದ ಸಿದ್ದರಾಮಯ್ಯನವರಿಗೆ ಅಭಿನಂದನಾ ಪೂರ್ವಕವಾಗಿ ವಿಶೇಷ ಲೇಸರ್ ಶೋ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಧಾರವಾಡ: ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹ ವಿಸರ್ಜನೆ ಅಪರಾಧ, ಡಿಸಿ ಹೆಗಡೆ
ಧಾರವಾಡದ ಕೆಸಿಡಿ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಧಕರಿಗೆ ಹಾಗೂ ಯೋಧರಿಗೆ ಸನ್ಮಾನ ಮತ್ತು ನಮ್ಮ ಭವ್ಯ ಪರಂಪರೆ ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಖ್ಯಾತ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಅವರಿಂದ ಕಿರು ನಾಟಕ ಹಾಗೂ ಗಾಯಕಿ ಎಂ ಡಿ ಪಲ್ಲವಿ ಮತ್ತು ಇಂಡಿಯನ್ ಐಡಲ್ 18 ರ ವಿಜೇತ ಗಾಯಕ ಸಲ್ಮಾನ್ ಅಲಿ ಅವರಿಂದ ಸಂಗೀತ ಸಂಜೆ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಫ್ಯಾಷನ್ ಷೋ ರಂಗು:
ದೇಶದ ಪ್ರಖ್ಯಾತ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ತಂಡದಿಂದ ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಬಿಂಬಿಸುವ ದೇಸಿ ಸೀರೆಗಳಾದ ಇಳಕಲ್, ಮೊಳಕಾಲ್ಮೂರು, ಮೈಸೂರು ಸೀರೆಗಳನ್ನು ತೊಟ್ಟು 15 ಕ್ಕೂ ಅಧಿಕ ಮಿಸ್ ಇಂಡಿಯಾ ಸ್ಪರ್ಧಿಗಳು ಹೆಜ್ಜೆ ಹಾಕಲಿದ್ದಾರೆ ಮದುವಣಗಿತ್ತಿಯಂತೆ ಸಿದ್ಧವಾದ ಕೆಸಿಡಿ ಕ್ರಿಡಾಂಗಣ ಸದ್ಯ ಜಗಜಮಿಸುತ್ತಿದೆ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ತಯಾರಿ ಭರ್ಜರಿಯಿಂದ ಸಾಗುತ್ತಿದ್ದು, ಎಲ್ಲ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಹೊಸತನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಸಂತೋಷ್ ಲಾಡ್ ಫೌಂಡೇಶನ್ ಅಧ್ಯಕ್ಷ ಆನಂದ ಕಲಾಲ್ ಹೇಳಿದರು.