ಮುಖ್ಯಮಂತ್ರಿಗಳು ಬಂದು ಹೋದರೂ ಇನ್ನೂ ಪರಿಹಾರ ವ್ಯವಸ್ಥೆ ಆಗಿಲ್ಲ: ಹರಿಪ್ರಸಾದ್‌ ಟೀಕೆ

By Kannadaprabha NewsFirst Published Jul 20, 2022, 11:05 AM IST
Highlights

ರಾಜ್ಯದ ಎಲ್ಲೆಡೆ ಭಾರಿ ಮಳೆ ಸುರಿದಿದೆ. ದಕ್ಷಿಣ ಕನ್ನಡದಲ್ಲೂ ವಿಪರೀತ ಮಳೆಯಾಗಿ ಪ್ರವಾಹ ಸೃಷ್ಟಿಸಿದೆ. ಸರ್ಕಾರ ಇದುವರೆಗೆ ಯಾವುದೇ ಪರಿಹಾರ ಕಾರ್ಯ ಕೈಗೊಂಡಂತೆ ಕಾಣುತ್ತಿಲ್ಲ

ಉಳ್ಳಾಲ (ಜು.20): ಮುಖ್ಯಮಂತ್ರಿಗಳು ಕರಾವಳಿಗೆ ಭೇಟಿ ನೀಡಿದರೂ ನೆರೆ ಪ್ರವಾಹ ಪರಿಸ್ಥಿತಿಗೆ ಇನ್ನೂ ಪರಿಹಾರ ವ್ಯವಸ್ಥೆಗೆ ಕ್ರಮ ಕೈಗೊಂಡಿಲ್ಲ. ಕರಾವಳಿಯಲ್ಲಿ ಜನರು ಪ್ರವಾಹಕ್ಕೆ ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಶೀಘ್ರ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸುಮ್ಮನೆ ಕಾಟಾಚಾರಕ್ಕೆ ಬಂದು ಹೋಗಿದ್ದಾರೆ. ಪರಿಹಾರ ವಿಚಾರದಲ್ಲಿ ಸರ್ಕಾರಕ್ಕೆ ಪುರುಸೊತ್ತಿಲ್ಲದಂತೆ ಕಾಣುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಸರ್ಕಾರವನ್ನು ಟೀಕಿಸಿದ್ದಾರೆ.

ಉಳ್ಳಾಲ(Ullala) ಮತ್ತು ಸೋಮೇಶ್ವರ(Someswar) ಕಡಲ್ಕೊರೆತ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಈ ಬಾರಿಯೂ ಕರಾವಳಿಯಲ್ಲಿ ನೆರೆ, ಕಡಲ್ಕೊರೆತದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಕಷ್ಟುಜನ ಮನೆ ಕಳೆದುಕೊಂಡಿದ್ದು ಅವರಿಗೆ ತಕ್ಷಣ ಪರಿಹಾರ, ಮನೆ, ಆಸ್ತಿ ಕಳೆದುಕೊಂಡವರಿಗೆ ಪುನರ್ವಸತಿ ವ್ಯವಸ್ಥೆ ಮಾಡಬೇಕು.

ಏರ್‌ಪೋರ್ಟ್‌ನಲ್ಲಿ ಮಂಕಿ ಪಾಕ್ಸ್‌ ಕಟ್ಟೆಚ್ಚರ: ಡಿಸಿ ಸೂಚನೆ

ಸಮುದ್ರದಲ್ಲಿ ಸಿಲುಕಿರುವ ಹಡಗು ಮುಳುಗಡೆಯಾದರೆ ತೈಲ ಸೋರಿಕೆಯಾಗಿ ಪರಿಸರಕ್ಕೆ ಹಾನಿಯಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹರಿಪ್ರಸಾದ್‌ ಆಗ್ರಹಿಸಿದರು.

ಈ ಸಂದರ್ಭ ಶಾಸಕ ಯು.ಟಿ. ಖಾದರ್‌(U.T.Khadar), ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸದಾಶಿವ ಉಳ್ಳಾಲ್‌(Sadasiva Ullala), ಡಿಸಿಸಿ ಸದಸ್ಯ ಸುರೇಶ್‌ ಭಟ್ನಗರ, ಕೊಣಾಜೆ ಗ್ರಾಮ ಪಂಚಾಯಿತಿ ಸದಸ್ಯ ದೇವಣ್ಣ ಶೆಟ್ಟಿ, ಮುಖಂಡರಾದ ಬಾಝಿಲ್‌ ಡಿಸೋಜ, ಆಲ್ವಿನ್‌ ಡಿಸೋಜ, ಸುರೇಖ ಚಂದ್ರಹಾಸ, ರಝಾಕ್‌ ಕುಕ್ಕಾಜೆ, ನಝರ್‌ ಷಾ, ದೀಪಕ್‌ ಪಿಲಾರ್‌, ಅಚ್ಯುತ ಗಟ್ಟಿ, ದೇವಕಿ ಉಳ್ಳಾಲ್‌, ಚಂದ್ರಿಕಾ ರೈ, ಹಮೀದ್‌ ಹಸನ್‌ ಮಾಡೂರು, ಸಲಾಂ ಉಚ್ಚಿಲ್‌ ಇನ್ನಿತರರು ಉಪಸ್ಥಿತರಿದ್ದರು.

ಕರಾವಳಿ ಭಾಗದಲ್ಲಿ ನೆರೆ, ಕಡಲ್ಕೊರೆತ ಹೊಸತಲ್ಲ, ಕಾಂಗ್ರೆಸ್‌ ಸರ್ಕಾರವಿದ್ದಾಗ ಕಡಲ್ಕೊರೆತ ತಡೆಗೆ ಪ್ರತಿವರ್ಷ ನಿರ್ವಹಣೆ ಮಾಡುತ್ತಿದ್ದರೆ ಈ ಸರ್ಕಾರ ಕ್ರಮ ಕೈಗೊಂಡಿಲ್ಲ. ಎಡಿಬಿ ಕಾಮಗಾರಿಯನ್ನು ಗಮನಿಸುವಾಗ ಭ್ರಷ್ಟಾಚಾರ ಕಂಡು ಬರುತ್ತಿದ್ದು ಈ ಬಗ್ಗೆ ಸಮಗ್ರ ತನಿಖೆಯಾಗಬೇಕು

ಬಿ.ಕೆ.ಹರಿಪ್ರಸಾದ್‌, ವಿಧಾನಪರಿಷತ್‌ ಸದಸ್ಯ 

ಮಂಗಳೂರು ಪಾಲಿಕೆ: ಗೃಹ ಬಳಕೆ ನೀರಿನ ದರ ಇಳಿಕೆ ಆದೇಶ

ಮಳೆ ಮತ್ತಷ್ಟು ಇಳಿಮುಖ: ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯಾದ್ಯಂತ ಮಂಗಳವಾರ ಮಳೆ ಮತ್ತೆ ಇಳಿಮುಖವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಮಳೆ ಕಡಿಮೆಯಾಗಿದ್ದು, ಮಂಗಳವಾರ ಹೆಚ್ಚುಕಡಿಮೆ ಬಿಸಿಲಿನ ವಾತಾವರಣ ಇತ್ತು. ಮೀಣ ಭಾಗದ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಮಂಗಳೂರಲ್ಲಿ ಮಧ್ಯಾಹ್ನ ವರೆಗೆ ಮಳೆ ದೂರ, ಸಂಜೆ ಬಿಸಿಲು, ಮೋಡ, ತುಂತುರು ಹನಿ ಅಷ್ಟೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಜು.20ರಂದು ಕರಾವಳಿಯಲ್ಲಿ ಯೆಲ್ಲೋ ಅಲರ್ಚ್‌ ಇರಲಿದ್ದು ಹಗುರ ಮಳೆ ನಿರೀಕ್ಷಿಸಲಾಗಿದೆ.ಮಂಗಳವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಕಡಬದಲ್ಲಿ ಗರಿಷ್ಠ 27 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ದಿನದ ಸರಾಸರಿ ಮಳೆ 15 ಮಿ.ಮೀ. ಆಗಿದೆ.

ಜಿಎಸ್‌ಟಿ ಎಂದರೆ ‘ಗಬ್ಬರ್‌ ಸಿಂಗ್‌ ಟ್ಯಾಕ್ಸ್‌’:

ಬಿಜೆಪಿ ಸರ್ಕಾರವು ಇದೀಗ ತಿನ್ನುವ ಅಕ್ಕಿ, ಮಕ್ಕಳ ಪೆನ್ಸಿಲ್‌, ಮೊಸರು, ಬೆಲ್ಲ, ಗೋಧಿ ಮೇಲೂ ಜಿಎಸ್‌ಟಿ ಹಾಕಿ ಬಡವರ ತೆರಿಗೆ ಹಣದಲ್ಲಿ ಸರ್ಕಾರ ನಡೆಸಲು ಮುಂದಾಗಿದೆ. ಜಿಎಸ್‌ಟಿ ಎಂದರೆ ‘ಗಬ್ಬರ್‌ ಸಿಂಗ್‌ ಟ್ಯಾಕ್ಸ್‌’ ಅನ್ನೋದು ಈಗ ಸಾಬೀತಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್‌ ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದೊಂದು ದಿನ ಶವ ಹೊತ್ತುಕೊಂಡು ಹೋಗಲೂ ತೆರಿಗೆ ಹಾಕದಿದ್ದರೆ ಸಾಕು ಎಂದರು.

ದಿನಬಳಕೆಯ ಅಗತ್ಯ ವಸ್ತುಗಳಿಗೆ ಕೂಡ ತೆರಿಗೆ ಹಾಕುವ ಮೂಲಕ ಜನರನ್ನು ಲೂಟಿ ಮಾಡಿ ತನ್ನ ಜೇಬು ಭರ್ತಿ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ. ರಾಹುಲ್‌ ಗಾಂಧಿ ಅಂದು ಹೇಳಿದ್ದು ಇಂದು ಅಕ್ಷರಶಃ ನಿಜವಾಗಿದೆ ಎಂದರು. ಅಕ್ಕಿಗೆ ತೆರಿಗೆ ಹಾಕಿ, ಅದರಿಂದಲೇ ತಯಾರಿಸಿದ ಮಂಡಕ್ಕಿಗೂ ತೆರಿಗೆ ಹಾಕುತ್ತಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.

 

 

click me!