ಎ.ಸಿ.ಬಿ ಬಲೆಗೆ ಬಿದ್ದ ಹಾವೇರಿ ನಗರ ಸಭೆ ಮಿಕಗಳು

By Ravi Nayak  |  First Published Jul 20, 2022, 9:53 AM IST

ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ‌ನ್ಯೂಸ್

ಹಾವೇರಿ (ಜು.20) : ದಿನ ಬೆಳಗಾದ್ರೆ ಅಧಿಕಾರಿಗಳ ಮೇಲೆ ಎಸಿಬಿ ರೈಡ್ ಸುದ್ದಿ ಈಗ ಸಾಮಾನ್ಯವಾಗಿ ಬಿಟ್ಟಿದೆ. ಸರ್ಕಾರಿ ಸಂಬಳ ತಗೊಂಡು , ಸೌಲಭ್ಯ ತಗೊಂಡು ಸೊಂಪಾಗಿರೋ ಕೆಲ ಅಧಿಕಾರಿಗಳು ಲಂಚ  ತಗೋಳೋದು ಮಾತ್ರ ನಿಲ್ಲಿಸಲ್ಲ .ಇದಕ್ಕೆ ಜ್ವಲಂತ ಉದಾಹರಣೆ ಹಾವೇರಿ ನಗರ ಸಭೆ ಅಧಿಕಾರಿಗಳು.ಇಲ್ಲಿನ ನಗರಸಭೆ ಕಚೇರಿಯಲ್ಲಿ ಇಂದು  15 ಸಾವಿರ ಲಂಚ ಪಡೆಯುವಾಗ ಪೌರಾಯುಕ್ತ ವಿ.ಎಂ.ಪೂಜಾರ ಮತ್ತು ಕಿರಿಯ ಆರೋಗ್ಯ ನಿರೀಕ್ಷಕ ಸೋಮಶೇಖರ ಮಲ್ಲಾಡದ ಈ ಇಬ್ಬರು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. 

ನಗರದ ಆಯ್ದ 15 ಸ್ಥಳಗಳಲ್ಲಿ ‘ಸ್ವಚ್ಛ ಭಾರತ ಯೋಜನೆ’(Swachha bharat yojane)ಯ ಜಾಗೃತಿ ಫಲಕಗಳನ್ನು ಅಳವಡಿಸಲು ದಾವಣಗೆರೆ(Davanagere)ಯ ಗ್ಲೋಬಲ್‌ ವಿಂಗ್‌ ಸೊಸೈಟಿ(Global wing socity)ಗೆ ಟೆಂಡರ್‌(Tender) ನೀಡಲಾಗಿತ್ತು. ಕಾಮಗಾರಿ ಪೂರ್ಣಗೊಂಡ ನಂತರ, ಗುತ್ತಿಗೆದಾರರಿಗೆ 3 ಲಕ್ಷ ರೂಪಾಯಿ  ಟೆಂಡರ್‌ ಮೊತ್ತ ನೀಡಲು 15 ಸಾವಿರ ಲಂಚದ ಬೇಡಿಕೆ ಇಡಲಾಗಿತ್ತು. 

ಸಿಡಿಲು ಬಡಿದ ತಂಬಿಗೆ ಹೆಸರಿನಲ್ಲಿ ವಂಚನೆಗೆ ಯತ್ನ: ಐವರು ಆರೋಪಿಗಳ ಬಂಧನ

ಈ ಬಗ್ಗೆ ಗ್ಲೋಬಲ್‌ ವಿಂಗ್‌ ಸೊಸೈಟಿ ಮಾಲೀಕ ಅಣ್ಣಪ್ಪ ನಾಯ್ಕ(Annappa naik) ಹಾವೇರಿ(Haveri)ಯ ಭ್ರಷ್ಟಾಚಾರ ನಿಗ್ರಹ ದಳದ (ACB) ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಎಸಿಬಿ ಡಿವೈಎಸ್ಪಿ ಗೋಪಿ ಬಿ.ಆರ್‌. ನೇತೃತ್ವದ ತಂಡ ಮಂಗಳವಾರ ಸಂಜೆ 4.30ರ ವೇಳೆಗೆ ಯಶಸ್ವಿ ಕಾರ್ಯಾಚರಣೆ ನಡೆಸಿತು. 

BIG 3: ಸೋರುತಿಹುದು ಗಂಗಾಯಿಕೊಪ್ಪ ಶಾಲೆ, ಹೊಸ ಕಟ್ಟಡಕ್ಕಾಗಿ 9 ವರ್ಷಗಳಿಂದ

ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗುವುದು ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..


ಭ್ರಷ್ಟಾಚಾರಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ ದಿನ ಬೆಳಗಾದರೆ ಎಸಿಬಿ ದಾಳಿ ನಡೆಯುತ್ತಿದೆ ಭ್ರಷ್ಟ ಅಧಿಕಾರಿಗಳು ಹಣದೊಂದಿಗೆ ಸಿಕ್ಕಿಬೀಳುತ್ತಲೇ ಇದ್ದಾರೆ. ಇದೀಗ ಹಾವೇರಿ ಇಬ್ಬರು ಲಂಚಬಾಕ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ

click me!