ಚಾಮರಾಜನಗರದಲ್ಲಿ ಅಚ್ಚರಿ ತೆಂಗಿನಮರ; ದೈವ ಶಕ್ತಿಯೋ? ಪ್ರಕೃತಿ ವಿಸ್ಮಯವೋ? ಕೌತುಕ!

Published : Nov 04, 2026, 10:28 AM IST
Coconut Tree

ಸಾರಾಂಶ

ಚಾಮರಾಜನಗರದ ತೆಂಗಿನಮರವೊಂದು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ. ಈ ತೆಂಗಿನ ಮರ ನೋಡಲು ಸುತ್ತಲಿನ ರೈತರೆಲ್ಲರೂ ಆಗಮಿಸುತ್ತಿದ್ದಾರೆ. ಸದ್ಯ ಈ ತೆಂಗಿನಮರದ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಚಾಮರಾಜನಗರ: ಒಂದೇ ತೆಂಗಿನ ಮರದಲ್ಲಿ ಐದು ಸುಳಿ ಕಂಡು ಕುಮಚಹಳ್ಳಿ ಗ್ರಾಮಸ್ಥರು ಆಶ್ಚರ್ಯ ಚಕಿತರಾಗಿದ್ದಾರೆ. ಒಂದೇ ಮರದಲ್ಲಿ 5 ಸುಳಿ ಕಂಡು ದೈವ ಶಕ್ತಿಯೋ? ಪ್ರಕೃತಿ ವಿಸ್ಮಯವೋ? ಎಂಬಂತೆ ನೋಡುತ್ತಿದ್ದಾರೆ.

ಚಾಮರಾಜನಗರ ತಾಲೂಕಿನ ಕುಮಚಹಳ್ಳಿಯಲ್ಲಿ ಅಪರೂಪದ ತೆಂಗಿನ ಮರದ ಕೌತುಕ. ಗ್ರಾಮದ ರವೀಶ್ ಎಂಬುವರಿಗೆ ಸೇರಿರುವ ಜಮೀನಲ್ಲಿರುವ ಅಪರೂಪ ತೆಂಗಿನ ಮರ ಇದಾಗಿದ್ದು, ವಿಶೇಷ ತೆಂಗಿನ ಮರ ನೋಡಲು ಅಕ್ಕ ಪಕ್ಕದ ಗ್ರಾಮಸ್ಥರು ಸ್ಥಳೀಯರು ಆಗಮಿಸುತ್ತಿದ್ದು, ಒಂದು ತೆಂಗಿನ ಮರದಲ್ಲಿ ಒಂದು ಸುಳಿ ಸಾಮಾನ್ಯ, ಎರಡು ಅಂದ್ರೆ ವಿಭಿನ್ನ, ಇದೀಗ ಐದು ಸುಳಿ ವಿಸ್ಮಯ, ಆಶ್ಚರ್ಯ ಎನ್ನುತ್ತಿರುವ ಗ್ರಾಮಸ್ಥರು.

ತೆಂಗಿನ ಮರಕ್ಕೆ ಗ್ರಾಮಸ್ಥರಿಂದ ವಿಶೇಷ ಪೂಜೆ

ಒಂದೇ ಸುಳಿ ಬರುವ ತೆಂಗಿನ ಮರದಲ್ಲಿ 5 ಸುಳಿ ಪತ್ತೆಯಾಗಿರುವುದರಿಂದ ದೇವರ ಪವಾಡವೆಂದೇ ಸ್ದಳೀಯರು ಭಾವಿಸುತ್ತಿದ್ದಾರೆ. ತೆಂಗಿನ ಮರಕ್ಕೆ ವಿಶೇಷ ಪೂಜೆ ಸಲ್ಲಿಸಲು ಗ್ರಾಮಸ್ಥರ ಚಿಂತನೆ ಮಾಡಿದ್ದು ಪ್ರಕೃತಿಯ ಅಪರೂಪದ ವಿಸ್ಮಯಕ್ಕೆ ಮೂಗಿನ ಮೇಲೆ ಬೆರಳಿಟ್ಟುಕೊಂಡ ಜನರು ನೋಡುತ್ತಿದ್ದಾರೆ.

ಇದನ್ನೂ ಓದಿ: ಈ ಕೆಫೆಯಲ್ಲಿ ಊಟ ಮಾಡಿದರೆ ಬಿಲ್ ಕಟ್ಟಬೇಕಿಲ್ಲ! ಆದರೆ ಮುಂದಿನ ಗ್ರಾಹಕನಿಗೆ ನೀವು ಮಾಡಬೇಕಾದ ಕೆಲಸವೇನು ಗೊತ್ತಾ?

ಇದನ್ನೂ ಓದಿ: 20 ದಿನಗಳಿಂದ ಕನಸಿನಲ್ಲಿ ಬಂದು ಕಾಡುತ್ತಿದ್ದ ಪ್ರಾಣಬಿಟ್ಟ ಗೆಳೆಯ; ಕೊನೆಗೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಹಂತಕ

PREV
Read more Articles on
click me!

Recommended Stories

ಮುರಸು ಚಂಡಮಾರುತ ಎಫೆಕ್ಟ್: ಕೊಡಗಿನಲ್ಲಿ ವರುಣನ ಅಬ್ಬರ; ಕೆರೆಯಂತಾದ ಮಡಿಕೇರಿ ಓಂಕಾರೇಶ್ವರ ದೇಗುಲ ರಸ್ತೆ
Hassan: ಹಾಸನಾಂಬೆ ದರ್ಶನಕ್ಕೆ 5 ದಿನವಷ್ಟೇ ಬಾಕಿ, ಟಿಕೆಟ್-ಲಾಡು ಮಾರಾಟದಿಂದ ಕೋಟಿ ಕೋಟಿ ಆದಾಯ