ಅಡಕೆ-ವೀಳ್ಯೆದೆಲೆ ಸೇವನೆಯಿಂದ ಕ್ಯಾನ್ಸರ್ ಬರೋಲ್ಲ, ಗುಣವಾಗುತ್ತೆ: ತುಮ್‌ ಕೋಸ್ ಅಧ್ಯಕ್ಷರ ಅಚ್ಚರಿಯ ಹೇಳಿಕೆ! ಏನಿದು ಪೊಗಸಾರಂ?

Kannadaprabha News   | Kannada Prabha
Published : Nov 04, 2026, 10:12 AM IST
areca nut and betel leaf doesnt cause cancer

ಸಾರಾಂಶ

ಅಡಕೆ ಮತ್ತು ವೀಳ್ಯೆದೆಲೆ ಸೇವನೆಯಿಂದ ಕ್ಯಾನ್ಸರ್ ಗುಣಮುಖವಾಗುವ ಔಷಧೀಯ ಗುಣವಿದೆ ಎಂದು ಇತ್ತೀಚಿನ ಸಂಶೋಧನೆಯೊಂದು ದೃಢಪಡಿಸಿದೆ. ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ 'ಪೊಗಸಾರಂ' ಎಂಬ ಮಿಶ್ರಣವು ಕ್ಯಾನ್ಸರ್ ತಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಅಡಕೆಯು ಅಪಾಯಕಾರಿ ಬೆಳೆಯಲ್ಲ ಎಂಬುದು ಸಾಬೀತಾಗಿದೆ.

ಚನ್ನಗಿರಿ: ಎಲ್ಲಿಯೋ ಬೆಳೆಸುವಂತಹ ವೀಳ್ಯೆದೆಲೆ, ಅಡಕೆ ಈ ಎರಡರ ಮಧ್ಯೆ ಮತ್ತೆಲ್ಲಿಯೋ ಹುಟ್ಟಿದ ಸುಣ್ಣವು ಸೇರಿ ಆರೋಗ್ಯಕರವಾದ ತಾಂಬೂಲ ತಯಾರಾಗುತ್ತದೆ. ತಾಂಬೂಲದಲ್ಲಿ ಕ್ಯಾನ್ಸರ್‌ನಂತಹ ಕಾಯಿಲೆ ವಾಸಿಯಾಗಲು ರಾಮಬಾಣದಂತಹ ಔಷಧಿಯ ಗುಣವಿರುತ್ತದೆ. ಇಂತಹ ಔಷಧಿಯ ಗುಣವಿರುವಂತಹ ಅಡಕೆ ಅಪಾಯಕಾರಿ ಬೆಳೆಯಲ್ಲ ಎಂದು ತುಮ್‌ ಕೋಸ್ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ತಿಳಿಸಿದ್ದಾರೆ.

ಅಡಕೆ-ವಿಳ್ಯೆದೆಲೆ ಸೇವನೆಯಿಂದ ಕ್ಯಾನ್ಸರ್‌ ಗುಣವಾಗುತ್ತೆ, ಕಾರಣವಾಗಲ್ಲ!

ಅಡಕೆ ಮತ್ತು ವೀಳ್ಯೆದೆಲೆ ಸೇವನೆಯಿಂದ ಕ್ಯಾನ್ಸರ್ ಗುಣಮುಖವಾಗುವ ಔಷಧೀಯ ಗುಣ ಹೊಂದಿದೆ. ಈ ಬಗ್ಗೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆಯಲ್ಲಿರುವ ಜಡ್ಡು ಆರ್ಯುವೇದ ಸಂಶೋಧನಾ ಕೇಂದ್ರ ಹಾಗೂ ಮಂಗಳೂರಿನಲ್ಲಿರುವ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಗಳನ್ನು ಒಳಗೊಂಡ ವಿಜ್ಞಾನಿಗಳ ತಂಡ ಇಲಿಗಳ ಮೇಲೆ ಮಾಡಿದ ಪ್ರಯೋಗದಿಂದ ಈ ವಿಷಯ ದೃಢಪಟ್ಟಿದೆ ಎಂದು ವಿವರಿಸಿದ್ದಾರೆ.

ಅಡಕೆ-ವೀಳ್ಯೆದೆಲೆ ಕ್ಯಾನ್ಸರ್ ತಡೆಯುತ್ತದೆ

ಅಡಕೆ ಮತ್ತು ವೀಳ್ಯೆದೆಲೆಯನ್ನು ಪ್ರಧಾನವಾಗಿ ಬೆಳಸಿ ಮಾಡಿದ ಒಂದು ಸಮ್ಮಿಶ್ರಣವು ಕೂಡ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ ಎಂಬುದಾಗಿ ಸಂಶೋಧನೆಯಿಂದ ಖಚಿತವಾಗಿದೆ. ಈ ಸಂಶೋಧನೆಯ ಸಂಪೂರ್ಣ ವಿವರಗಳನ್ನು ಇಂಟರ್ ನ್ಯಾಷನಲ್ ಜನರಲ್ ಆಫ್ ಫಾರ್ಮಸಿ ರಿಸರ್ಚ್ ಅಂಡ್ ಟೆಕ್ನಾಲಜಿ ಎನ್ನುವ ವೈಜ್ಞಾನಿಕ ನಿಯತ ಕಾಲಿಕದಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೊಗಸಾರಂ ಎನ್ನುವ ಪಾಲಿ ಹರ್ಬಲ್ ಹೇಗೆ ತಯಾರಾಗುತ್ತೆ?

ಅಡಕೆ ಮತ್ತು ವೀಳ್ಯೆದೆಲೆ ಅನಾದಿ ಕಾಲದಿಂದಲೂ ಶುಭ ಸಮಾರಂಭಗಳಲ್ಲಿ ಇಂದಿಗೂ ಬಳಕೆ ಮಾಡುತ್ತಿದ್ದಾರೆ. ಊಟದ ನಂತರ ಎಲೆ ಮತ್ತು ಅಡಕೆ ಜೊತೆ ಸುಣ್ಣ ಸೇರಿಸಿ, ತಾಂಬೂಲವಾಗಿ ಸೇವಿಸುವ ಪದ್ಧತಿ ಇಂದಿಗೂ, ಎಂದಿಗೂ ಇದೆ. ಅಡಕೆ ಮತ್ತು ವೀಳ್ಯೆದೆಲೆಗಳನ್ನು ಬಳಸಿಕೊಂಡು ಇದಕ್ಕೆ ಬೇರೆ ಬಗೆಯ 7-8 ಗಿಡಲಿಕೆಗಳನ್ನು ಸೇರಿಸಿ, ತಯಾರಿಸಿದ ಪೊಗಸಾರಂ ಎನ್ನುವ ಒಂದು ಪಾಲಿ ಹರ್ಬಲ್ ಕ್ಯಾನ್ಸರ್ ವಿರೋಧಿ ಗುಣವನ್ನು ತಿಳಿಯುವ ಸಲುವಾಗಿ ಇಲಿಗಳ ಮೇಲೆ ಪ್ರಯೋಗಿಸಲಾಗಿತ್ತು ಎಂದು ಹೇಳಿದ್ದಾರೆ.

ಇಲಿಗಳ ಕೆಳತುಟಿಗಳಲ್ಲಿ ಡಿಎಂಬಿಎ ಎನ್ನುವ ಕ್ಯಾನ್ಸರ್‌ಕಾರಕ ರಾಸಾಯನಿಕವನ್ನು ಬಳಸಿ ಇಲಿಗಳಿಗೆ ಕ್ಯಾನ್ಸರ್ ಬರಿಸಲಾಗಿತ್ತು. ಅನಂತರ ಅವುಗಳ ಮೇಲೆ ಪ್ರತಿದಿನ 8 ವಾರಗಳ ತನಕ ಪೊಗಸಾರಂ ಎಂಬ ಲಸಿಕೆಯನ್ನು ನೀಡಲಾಗಿತ್ತು ಈ ಪೊಗಸಾರಂ ಇಲಿಗಳಿಗೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಸ್ಪ್ಲಟಿನ್ ಎನ್ನುವ ಔಷಧಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿತ್ತು ಎಂಬುದು ವಿಶೇಷ ಎಂದಿದ್ದಾರೆ.

ಮನುಷ್ಯನ ಹುಟ್ಟಿನಿಂದ ಹಿಡಿದು ಅಂತ್ಯದವರೆಗೂ ಎಲೆ, ಅಡಕೆಯ ಮಹತ್ವ ಪ್ರಮುಖವಾಗಿದೆ. ಇಂತಹ ಔಷಧಿ ಗುಣದ ಎಲೆ-ಅಡಕೆಯು ಧಾರ್ಮಿಕ ಕಾರ್ಯಕ್ರಮಗಳು, ಮಠ, ಮಂದಿರಗಳಲ್ಲಿನ ಪೂಜೆಗಳಿಗೂ ಬಳಕೆಯಾಗುತ್ತದೆ. ಅಡಕೆಯನ್ನು ಇನ್ನು ಹೆಚ್ಚಿನ ಸಂಶೋಧನೆಗಳಿಗೆ ಒಳಪಡಿಸಿ, ಅಡಕೆಯ ಮೌಲ್ಯವರ್ಧನೆಗೆ ಉತ್ತೇಜನ ನೀಡುವುದು ಅವಶ್ಯಕವಾಗಿದೆ. ಈ ಸಂಶೋಧನೆ ವಿವರಗಳನ್ನು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಗೆ ಒಪ್ಪಿಸಿ, ಅಡಕೆ ಹಾನಿಕಾರಕವಲ್ಲ ಎಂಬುದನ್ನು ದೃಢೀಕರಿಸಲು ಅಡಕೆ ಮಾರಾಟ ಸಹಕಾರ ಸಂಘಗಳು ಶ್ರಮಿಸಲಿವೆ. ಅಡಕೆ ಬೆಳೆಗಾರರಿಗೆ ಮುಂದಿನ ದಿನಗಳಲ್ಲಿ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

PREV
Read more Articles on
click me!

Recommended Stories

Hassan: ಹಾಸನಾಂಬೆ ದರ್ಶನಕ್ಕೆ 5 ದಿನವಷ್ಟೇ ಬಾಕಿ, ಟಿಕೆಟ್-ಲಾಡು ಮಾರಾಟದಿಂದ ಕೋಟಿ ಕೋಟಿ ಆದಾಯ
ಮಗು ಖಾಸಗಿ ಆಸ್ಪತ್ರೆಗೆ, ತಾಯಿ ಸರ್ಕಾರಿ ಆಸ್ಪತ್ರೆಲಿ..! 14 ತಿಂಗಳಿಂದ ಇಲ್ಲಿ ವೈದ್ಯರೇ ಇಲ್ಲ!