Chamarajanagara ಉರುಕಾತೇಶ್ವರಿ ಜಾತ್ರೆಯಲ್ಲಿ ಮೈ ಮೇಲೆ ಕೆಂಡ ಸುರಿದುಕೊಳ್ಳುವ ಆಚರಣೆ 

Published : Mar 26, 2022, 04:38 PM ISTUpdated : Mar 26, 2022, 04:46 PM IST
Chamarajanagara ಉರುಕಾತೇಶ್ವರಿ ಜಾತ್ರೆಯಲ್ಲಿ ಮೈ ಮೇಲೆ ಕೆಂಡ ಸುರಿದುಕೊಳ್ಳುವ ಆಚರಣೆ 

ಸಾರಾಂಶ

ಮೈ ಮೇಲೆ ಕೆಂಡ ಸುರಿದುಕೊಳ್ಳುವ ಆಚರಣೆ  ಇಲ್ಲಿ ದೇವರಿಗೆ ಕೆಂಡವೇ ನೈವೇದ್ಯ  ಕೊಳಗದಲ್ಲಿ ಕೆಂಡ  ತುಂಬಿ ದೇವರಿಗೆ ನೈವೇದ್ಯ 

ವರದಿ - ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಾಮರಾಜನಗರ (ಮಾ.26): ಸಾಮಾನ್ಯವಾಗಿ ಜಾತ್ರೆಗಳಲ್ಲಿ ಕೊಂಡ ಹಾಯುವುದನ್ನು ನೋಡಿದ್ದೇವೆ.. ಆದರೆ ಚಾಮರಾಜನಗರ (Chamarajanagara) ಜಿಲ್ಲೆ ತೆಳ್ಳನೂರಿನಲ್ಲಿ ನಡೆಯುವ ಉರುಕಾತೇಶ್ವರಿ ಜಾತ್ರೆಯಲ್ಲಿ ದೇವರಿಗೆ ಕೆಂಡವನ್ನೇ ನೈವೇದ್ಯ ಮಾಡುವ ಹಾಗು ಮೈಮೇಲೆ ಕೆಂಡವನ್ನೆ  ಸುರಿದುಕೊಳ್ಳುವ    ವಿಶಿಷ್ಟ ಪದ್ಧತಿ ಆಚರಣೆಯಲ್ಲಿದೆ. ಹಾಗಾದರೆ ಕೆಂಡ ಸ್ನಾನ ಮಾಡುವ ವ್ಯಕ್ತಿಗೆ ಏನೂ ಆಗುವುದಿಲ್ಲವೇ ? ಈ ಸ್ಟೋರಿ ನೋಡಿ..

ಚಾಮರಾಜನಗರ ಜಿಲ್ಲೆಯಲ್ಲಿ ವಿಶಿಷ್ಟ ಆಚರಣೆಗಳಿಗೇನು ಕೊರತೆಯಿಲ್ಲ. ಹಾಗೆಯೇ ಜಿಲ್ಲೆಯ ತೆಳ್ಳನೂರು ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ಉರುಕಾತೇಶ್ವರ ಜಾತ್ರೆ (Sri Urukatheswary  festival) ತನ್ನ ವಿಶಿಷ್ಟತೆಯಿಂದಲೇ ಎಲ್ಲರ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ಜಾತ್ರೆಗಳಲ್ಲಿ, ಮಾರಿ ಹಬ್ಬಗಳಲ್ಲಿ ಹರಕೆ ಹೊತ್ತ ಭಕ್ತರು ಕೊಂಡ ಹಾಯುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಆವೇಶ ಬಂದ ಅರ್ಚಕ ಮೈಮೇಲೆ ಕೆಂಡವನ್ನು ಸುರಿದುಕೊಂಡು ಭಕ್ತಿ ಸಮರ್ಪಿಸುತ್ತಾರೆ.

ಮೊದಲಿಗೆ ಕಾಡಿನಿಂದ ಸೌದೆ ತಂದು ದೇವಸ್ಥಾನದ ಮುಂದೆ ರಾಶಿ ಹಾಕಿ ಬೆಂಕಿ ಹಾಕಲಾಗುತ್ತದೆ. ಬಳಿಕ ಕೆಂಡದ ರಾಶಿ ಸಿದ್ದಗೊಳಿಸಿ  ಕೆಂಡ ಸ್ನಾನಕ್ಕೆ ಅಣಿಗೊಳಿಸಲಾಗುತ್ತದೆ. ಕೆಂಡವನ್ನು ಮೈಮೇಲೆ ಸುರಿದುಕೊಳ್ಳುವ ಅರ್ಚಕ ಬೆಳಿಗ್ಗೆಯಿಂದ ಉಪವಾಸವಿದ್ದು ಸಂಜೆ ಮೆರವಣಿಗೆಯಲ್ಲಿ ಕೊಂಡ ಹಾಕುವ ಸ್ಥಳಕ್ಕೆ ಬಂದು ಮೊದಲಿಗೆ ಕೊಳಗದಲ್ಲಿ  ಕೆಂಡವನ್ನು ತುಂಬಿ ದೇವರಿಗೆ ನೈವೇದ್ಯ ಮಾಡಿ ಬಳಿಕ ಮತ್ತೊಂದು ಕೊಳಗದಲ್ಲಿ  ನಿಗಿ ನಿಗಿ ಕೆಂಡವನ್ನು ತುಂಬಿ ತಮ್ಮ ಮೈಮೇಲೆ ಸುರಿದುಕೊಳ್ಳುತ್ತಾರೆ. ಇದಾದ ಕೂಡಲೇ ಹರಕೆ ಹೊತ್ತ ಭಕ್ತರು ಕೊಂಡ ಹಾಯುತ್ತಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಕನ್ಸೆಂಟ್ ಶುಲ್ಕ ಹೆಚ್ಚಳ, ಖಾಸಗಿ ಆಸ್ಪತ್ರೆಗಳು ಗರಂ

ಕೆಂಡ ಸ್ನಾನ ಮಾಡುವ ಈ ಆಚರಣೆಯನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರಲ್ಲದೆ ದೂರದ ಊರುಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸುತ್ತಾರೆ. ನಿಗಿನಿಗಿ ಕೆಂಡ ಮೈಮೇಲ ಸುರಿದುಕೊಳ್ಳುವ ದೃಶ ಕಣ್ತುಂಬಿಕೊಳ್ಳಲು ಮುಗಿಬೀಳುತ್ತಾರೆ. ಹಾವು ಕಡಿದವರು ಇಲ್ಲಿಗೆ ಬಂದು ಪೂಜೆ ಮಾಡಿಸಿದರೆ ಬದುಕುಳಿಯುತ್ತಾರೆ ಎಂಬ ನಂಬಿಕೆ ಇದೆ. ಗ್ರಾಮದಲ್ಲಿ ಇದುವರೆಗೆ ಹಾವು ಕಡಿತಕ್ಕೆ ಒಳಗಾದವರು ಸತ್ತ ನಿದರ್ಶನಗಳಿಲ ಎನ್ನುತ್ತಾರೆ ಗ್ರಾಮಸ್ಥರು.

ಮದರಸಗಳಲ್ಲಿ ದೇಶದ್ರೋಹ ಪಾಠ ಮಾಡಲಾಗುತ್ತಿದೆ: ರೇಣುಕಾಚಾರ್ಯ

ಇತ್ತೀಚಿನ ದಿನಗಳಲ್ಲಿ ಕೊಂಡ ಹಾಯುವಾಗ ಕೆಂಡದ ಮೇಲೆ ಬಿದ್ದು ಹಲವಾರು ಮಂದಿಗೆ ಸುಟ್ಟ ಗಾಯಗಳಾಗಿರುವ ಘಟನೆಗಳು ನಡೆದಿವೆ. ಆದರೆ ಇಲ್ಲೆ ಮೈಮೇಲೆ ಕೆಂಡ ಸುರಿದುಕೊಂಡರು ಯಾವುದೇ ಗಾಯಗಳಾಗದಿರುವುದು ನಿಜಕ್ಕು ಅಚ್ಚರಿಯ ವಿಷಯವಾಗಿದೆ.

PREV
Read more Articles on
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್