ಬಜೆಟ್ ಘೋಷಣೆ ಬಳಿಕ ವಿವಾದದಲ್ಲಿ Chikkamagaluru ನಗರಸಭೆ

By Suvarna News  |  First Published Mar 26, 2022, 11:41 AM IST
  • ಧ್ವನಿವರ್ಧಕಗಳ ವಿರುದ್ದ ಸಮರಸಾರಿದ   ನಗರಸಭೆ ಅಧ್ಯಕ್ಷರು
  • ಮಸೀದಿ,ಚರ್ಚ್, ಪ್ರಾರ್ಥನಾ ಮಂದರಿಗಳಲ್ಲಿ ಬಳಕೆ‌ಮಾಡುವ ಧ್ವನಿವರ್ಧಕಗಳ ಮೇಲೆ ಕ್ರಮದ ಹೆಜ್ಜೆ
  • ಚಿಕ್ಕಮಗಳೂರು ನಗರಸಭೆ ಬಜೆಟ್ ನಲ್ಲಿ ಘೋಷಣೆ

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮಾ.26): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೊಸ ವಿವಾದಗಳು ಸೃಷ್ಟಿಯಾಗುತ್ತಿದೆ. ಆ  ವಿವಾದಗಳು ಧಾರ್ಮಿಕ ಭಾವನೆಗಳು,  ಧಾರ್ಮಿಕ ಕೇಂದ್ರಗಳ ಸುತ್ತವೇ ಗಿರಕಿ ಹೊಡೆಯುತ್ತಿವೆ. ಆದರ ಸಾಲಿಗೆ ಚಿಕ್ಕಮಗಳೂರು ನಗರಸಭೆಯ ಘೋಷಣೆ ಮಾಡಿರುವ ಕ್ರಮದ ಹೆಜ್ಜೆ ಇದೀಗ ಸೇರ್ಪಡೆಗೊಂಡಿದೆ.

Tap to resize

Latest Videos

ಏನಿದು ವಿವಾದ?: ಚಿಕ್ಕಮಗಳೂರು ನಗರಸಭೆಯಲ್ಲಿ  37ನೇ ಬಜೆಟ್ ಮಂಡನೆ ಆಯ್ತು. ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಚಿಕ್ಕಮಗಳೂರು ನಗರಸಭೆಯ 37ನೇ ಬಜೆಟ್ ಮಂಡನೆ ಮಾಡಿದರು. ವರಸಿದ್ಧಿ ವೇಣುಗೋಪಾಲ್ ಮಂಡಿಸಿದಂತಹ  ತಮ್ಮ ಮೊದಲ ಬಜೆಟ್ ವಿವಾದದ ಸುಳಿಗೆ ಸಿಲುಕುವ ಲಕ್ಷಣಗಳು ಗೋಚರವಾಗುತ್ತಿದೆ.

ಬಜೆಟ್ ನಲ್ಲಿ ಘೋಷಣೆ ಮಾಡಿರುವ ಒಂದು ಅಂಶವನ್ನು ಜಾರಿಗೊಳಿಸಿದರೆ ಸಾಕಷ್ಟು ವಿವಾದ ಸೃಷ್ಟಿಯಾಗುವ ಲಕ್ಷಣಗಳು ಕಂಡು ಬಂದಿದೆ. ಆ ಘೋಷಣೆಯ ವಿರುದ್ಧ ಈಗಾಗಲೇ ಪ್ರತಿಪಕ್ಷವಾಗಿರುವ ಕಾಂಗ್ರೇಸ್  ಅಪಸ್ವರ ಎತ್ತಿದೆ. ನಗರದ ಜನರ ಆರೋಗ್ಯ ದೃಷ್ಟಿಯಿಂದ ಧಾರ್ಮಿಕ ಕೇಂದ್ರಗಳಲ್ಲಿ ಬಳಕೆ ಮಾಡುತ್ತಿರುವ ಅನಧಿಕೃತ ಧ್ವನಿವರ್ಧಕಗಳ ವಿರುದ್ಧ ಬಜೆಟ್ ನಲ್ಲಿ ಸಮರ ಸಾರಲಾಗಿದೆ. ಕೋರ್ಟ್ ಆದೇಶವನ್ನು ಧಿಕ್ಕರಿಸಿ ಮಸೀದಿ, ಚರ್ಚ್ , ದೇವಸ್ಥಾನಗಳಲ್ಲಿ ಬಳಕೆ ಮಾಡುತ್ತಿರುವ ಮೈಕ್ ಗಳ  ವಿರುದ್ಧ ಕ್ರಮ ತೆಗೆದುಕೊಳ್ಳುವ ಆಶ್ವಾಸನೆಯನ್ನು ಆಯವ್ಯಯದಲ್ಲಿ ನೀಡಲಾಗಿದೆ. 

Chikkamagaluru: ತಾನು ಓದಿದ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ ಐಎಎಸ್ ಅಧಿಕಾರಿ

ಧ್ವನಿವರ್ಧಕಗಳು ವಿರುದ್ದ ಕ್ರಮ, ಕಾಂಗ್ರೇಸ್ ನಗರಸಭಾ ಸದಸ್ಯರಿಂದ ಆಕ್ಷೇಪ
ನಗರದಲ್ಲಿ ಮಸೀದಿ,ಮ ಚರ್ಚ್ , ದೇವಸ್ಥಾನಗಳಲ್ಲಿ ನಿಯಮಬಾಹಿರವಾಗಿ ಅತೀ ಹೆಚ್ಚಿನ ಧ್ವನವರ್ಧಕಗಳನ್ನು ಬಳಕೆ ಮಾಡುತ್ತಿರುವುದರಿಂದ ಶಬ್ದ ಮಾಲಿನ್ಯ ಉಂಟಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಬಜೆಟ್ ನಲ್ಲಿ ಅಧ್ಯಕ್ಷರು ಪ್ರಸ್ತಾಪಿಸಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು, ಹಿರಿಯರು, ರೋಗಿಗಳಿಗೆ ತೊಂದರೆ ಆಗುತ್ತಿದೆ ಈ ನಿಟ್ಟಿನಲ್ಲಿ ನಗರಸಭೆ ಕೋರ್ಟ್ ಆದೇಶಕ್ಕೆ ವಿರುದ್ದವಾಗಿ ಬಳಸಿರುವ ಧ್ವನನಿರ್ಧಕಗಳನ್ನು ವಶಕ್ಕೆ ಪಡೆಯುವುದಾಗಿ ನಗರಸಭೆ ಅಧ್ಯಕ್ಷ ವರಸಿದ್ದ ವೇಣುಗೋಪಾಲ್ ಸ್ಪಷ್ಟಪಡಿಸಿದರು. ಇದಕ್ಕೆ ಕಾಂಗ್ರೇಸ್ ನ ಕೆಲ ನಗರಸಭಾ ಸದಸ್ಯರು ಆಕ್ಷೇಪ ವ್ಯಪ್ತಪಡಿಸಿ ನೋಟಿಸ್ ನೀಡಿ ತದನಂತ ಕ್ರಮ ತೆಗೆದುಕೊಳ್ಳುವ ನಿರ್ಧಾರಕ್ಕೆ ಬನ್ನಿ ಎಂದು ಒತ್ತಾಯಿಸಿದರು. 

Muslims Traders Boycott: ಮಲೆನಾಡಿನಲ್ಲೂ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಒತ್ತಾಯ

ಬಜೆಟ್ ಪ್ರಸ್ತಾಪಕ್ಕೆ ಕೆಲ ಸದಸ್ಯರಿಂದ ಆಕ್ಷೇಪ: ನಗರಸಭಾ ಅಧ್ಯಕ್ಷರು ಮೈಕ್ ಗಳು ವಿರುದ್ದ ಕ್ರಮದ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆ ಕೆಲ ಸದಸ್ಯರು ಆಕ್ಷೇಪಿಸಿದರು. ಸಾರ್ವಜನಿಕರು, ಹಿರಿಯರು ಈವರೆಗೂ ಕೂಡ ನಗರಸಭೆಗೆ ಯಾರು ಕೂಡ ಮನವಿ ಸಲ್ಲಿಸಿಲ್ಲ , ಆದರೂ ಕೂಡ ಬಜೆಟ್ ನಲ್ಲಿ  ಮಂಡಿಸುವ ಅವಶ್ಯಕತೆ ಏನಿತ್ತು,ಕ್ರಮದ ನಿರ್ಧಾರಕ್ಕೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಒಟ್ಟಾರೆ ಚಿಕ್ಕ ಮಂಗಳೂರು ನಗರದಲ್ಲಿ ಅನಧಿಕೃತವಾಗಿ ಇರುವ  ಧ್ವನಿವರ್ಧಕಗಳ ವಿರುದ್ದ ಕ್ರಮದ ಅಸ್ತ್ರ ಬಳಸಿದ್ರೆ ವಿವಾದ ಸೃಷ್ಠಿಯಾಗುವ ಲಕ್ಷಣಗಳು ಹೆಚ್ಚಾಗಿದೆ.

click me!