ಚಾಮರಾಜನಗರದ ಸೆಂಟ್ ಫ್ರಾನ್ಸಿಸ್ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ (8 ವರ್ಷ) ಹೃದಯಾಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಶಿಕ್ಷಕರಿಗೆ ನೋಟ್ಸ್ ತೋರಿಸಲು ಹೋಗುವಾಗ ಕುಸಿದು ಬಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಲಿಲ್ಲ.
ಚಾಮರಾಜನಗರ (ಜ.06): ಬೆಳಗ್ಗೆ ಎಂದಿನಂತೆ ಎಲ್ಲ ಮಕ್ಕಳೊಂದಿಗೆ ಶಾಲೆಗೆ ಹೋಗಿದ್ದ 3ನೇ ತರಗತಿ ಮಗಳು ಮಧ್ಯಾಹ್ನದ ವೇಳೆ ಅವಳ ಹೆಣ ಮನೆಗೆ ಬಂದಿದೆ ಎಂದು ಆ ಪುಟ್ಟ ಮಗುವಿನ ಅಮ್ಮ, ಅಪ್ಪ ಗೋಳಾಡುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಮಾತ್ರ ಈವರೆಗೆ ದೊಡ್ಡವರನ್ನು ಮಾತ್ರ ಕಾಡುತ್ತಿದ್ದ ಹಾರ್ಟ್ ಅಟ್ಯಾಕ್ ಎನ್ನುವ ಹೆಮ್ಮಾರಿ. ಶಾಲೆಯಲ್ಲಿ ಕುಳಿತಲ್ಲಿಯೇ ಕಾರ್ಇಡಯಾಕ್ ಅರೆಸ್ಟ್ ಆಗಿ ಬಿದ್ದ ಹುಡುಗಿ ಮೇಲೇಳಲೇ ಇಲ್ಲ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೆ ವೈದ್ಯರು ಇದು ಡೆಡ್ ಬಾಡಿ ಎಂದು ಹೇಳಿದ್ದಾರೆ.
ಹೌದು, ಇದನ್ನು ಕೇಳುವುದಕ್ಕೆ ಮನಸ್ಸಿಗೆ ಇಷ್ಟೊಂದು ಘಾಸಿ ಆಗುತ್ತಿದೆ ಎಂದರೆ ಆ ಪುಟ್ಟ ಮಗುವನ್ನು ಕಳೆದುಕೊಂಡ ಅಪ್ಪ-ಅಮ್ಮಂದಿರ ಗೋಳು ಕೇಳುವ ನರಕ ದೇವರಿಗೂ ಬೇಡ ಎನಿಸಬೇಕು. ಕಾರಣ ಬೆಳಗ್ಗೆ ಎಂದಿನಂತೆ ಎದ್ದು ಮಗಳನ್ನು ಮುದ್ದಿಸಿ, ಆಕೆಯಿಂದ ಕೈಬೀಸಿ ಸಂಜೆ ಮನೆಗೆ ಬರ್ತೇನೆ ಅಮ್ಮ ಎಂದು ಹೇಳಿ ಹೋದ ಮಗಳು ಇದೀಗ ಹೆಣವಾಗಿ ಮನೆಗೆ ಬಂದಿದ್ದಾಲೆ ಎಂಬುದು. ಪುಟ್ಟ ಮಗಳನ್ನು ಚಿಕ್ಕಂದಿನಿಂದ ಮುದ್ದಿಸಿ ಬೆಳೆಸಿ ಖಾಸಗಿ ಶಾಲೆಗೆ ಕಳುಹಿಸಿ ಚೆನ್ನಾಗಿ ಓದಿಸಿ ಉತ್ತಮ ಭವಿಷ್ಯ ಕಟ್ಟಿಕೊಡಬೇಕೆಂಬ ತಂದೆ ತಾಯಿಯ ಶ್ರಮ ಹಾಗೂ ಕನಸ್ಸು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಇದೀಗ ಭವಿಷ್ಯ ರೂಪಿಸಿಬೇಕೆಂದಿದ್ದ ಮಗಳೇ ಮಸಣಕ್ಕೆ ಸೇರಿದ್ದಾಳೆ.
ಹೌದು, 3ನೇ ತರಗತಿ ವಿದ್ಯಾರ್ಥಿನಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿರುವ ಘಟನೆ ನಡೆದಿರುವುದು ಚಾಮರಾಜನಗರದ ಸೆಂಟ್ ಫ್ರಾನ್ಸಿಸ್ ಶಾಲೆಯಲ್ಲಿ. ಬೆಳಗ್ಗೆ ಎಂದಿನಂತೆ ಶಾಲೆಗೆ ಹೋದ ಮಗುವಿಗೆ ಮ್ಯಾಸಿವ್ ಹಾರ್ಟ್ ಅಟ್ಯಾಕ್ ಆಗಿದೆ. ಹೃದಯಾಘಾತದಿಂದ ಚಿಕ್ಕ ಮಗು ತೇಜಸ್ವಿನಿ (8 ವರ್ಷ) ಸ್ಥಳದಲ್ಲಿಯೇ ಅಸುನೀಗಿದೆ. ಶಾಲೆಯಲ್ಲಿ ಶಿಕ್ಷಕರಿಗೆ ನೋಟ್ಸ್ ತೋರಿಸಲು ಹೋಗಲು ಬೆಂಚಿನಿಂದ ಮೇಲೆದ್ದು ಮುಂದಕ್ಕೆ ಹೋಗಬೇಕೆಂದು ಹೆಜ್ಜೆ ಇಡುತ್ತಿದ್ದಂತೆ ವಿದ್ಯಾರ್ಥಿನಿ ಕುಸಿದುಬಿದ್ದಿದ್ದಾರೆ. ಕುಸಿದು ಬಿದ್ದ ವಿದ್ಯಾರ್ಥಿನಿಯನ್ನು ಶಿಕ್ಷಕರು ತಕ್ಷಣ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ವಿದ್ಯಾರ್ಥಿನಿ ಕೊನೆಯುಸಿರು ಬಿಟ್ಟಾಗಿತ್ತು.
ಇದನ್ನೂ ಓದಿ: ಕೊಳ್ಳೇಗಾಲ: ಕೆರೆಗೆ ನುಗ್ಗಿದ ಕಾರು, ಮಾದಪ್ಪನ ಸನ್ನಿಧಿಗೆ ತೆರಳಬೇಕಾದ ಇಬ್ಬರು ಮಸಣಕ್ಕೆ!
ಇನ್ನು ಶಾಲೆಯಲ್ಲಿ ದಿಡೀರ್ ವಿಧ್ಯಾರ್ಥಿ ಕುಸಿದು ಬಿದ್ದು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸೇಂಟ್ ಫ್ರಾನ್ಸಿಸ್ ಶಾಲೆಯ ಪ್ರಾಂಶುಪಾಲರಾದ ಬ್ರದರ್ ಪ್ರಭಾಕರನ್ ಅವರು, ತೇಜಸ್ವಿನಿ 3ನೇ ತರಗತಿಯಲ್ಲಿ ಓದುತ್ತಿದ್ದಳು. ಬೆಳಗ್ಗೆ ಸುಮಾರು 11.30 ಸಮಯದಲ್ಲಿ ಶಿಕ್ಷಕರಿಗೆ ಬುಕ್ ತೋರಿಸಲು ಪಕ್ಕದ ತರಗತಿಗೆ ಹೋಗಿದ್ದಾಳೆ. ಈ ವೇಳೆ ಗೋಡೆ ಹಿಡಿದು ಕುಸಿದು ಬಿದ್ದಿದ್ದಾಳೆ. ಬಿದ್ದ ಕೂಡಲೇ ಪ್ರಜ್ಞೆ ಕಳೆದುಕೊಂಡಿದ್ದಳು. ತಕ್ಷಣ ಶಿಕ್ಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಬ್ರಾಡ್ ಡೆಡ್ ಅಂತಾ ಹೇಳಿದರು. ಮಗು ಶಾಲೆಗೆ ಬಂದಂತಹ ವೇಳೆ ಆರೋಗ್ಯವಾಗಿದ್ದಳು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಚಾಮರಾಜನಗರ: ಜ.9 ಇಲ್ಲವೇ 16ಕ್ಕೆ ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ