ಮೈಲಾರಲಿಂಗ ಸ್ವಾಮಿ ಒಕ್ಕಲಿನ ವೇಷ ಧರಿಸಿ ಮನೆಗೆ ನುಗ್ಗುತ್ತಿರೋ ನಾಲ್ವರು: ಮಲೆನಾಡಿಗರಲ್ಲಿ ಆತಂಕ!

Published : Jan 06, 2025, 11:59 AM IST
ಮೈಲಾರಲಿಂಗ ಸ್ವಾಮಿ ಒಕ್ಕಲಿನ ವೇಷ ಧರಿಸಿ ಮನೆಗೆ ನುಗ್ಗುತ್ತಿರೋ ನಾಲ್ವರು: ಮಲೆನಾಡಿಗರಲ್ಲಿ ಆತಂಕ!

ಸಾರಾಂಶ

ಮೈಲಾರಲಿಂಗ ಸ್ವಾಮಿ ವೇಷಾಧರಿಸಿ ಮಲೆನಾಡಿನಲ್ಲಿ ಒಂಟಿ ಮನೆಗಳಿಗೆ  ತೆರಳಿ ಜನರಿಗೆ ಮೋಸ ಮಾಡುತ್ತಿರುವ ಪ್ರಕರಣ ನಡೆಯುತ್ತಿದೆ. ಒಂಟಿ ಮನೆಗಳು ಹಾಗೂ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಓಡಾಟ ನಡೆಸುವ ಈ ತಂಡ ಮನೆಯವರಿಗೆ ಇಲ್ಲಸಲ್ಲದ ಭಯ ಹುಟ್ಟಿಸಿ ಆ ಪೂಜೆ ಮಾಡಬೇಕು.

ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.06): ಮೈಲಾರಲಿಂಗ ಸ್ವಾಮಿ ವೇಷಾಧರಿಸಿ ಮಲೆನಾಡಿನಲ್ಲಿ ಒಂಟಿ ಮನೆಗಳಿಗೆ  ತೆರಳಿ ಜನರಿಗೆ ಮೋಸ ಮಾಡುತ್ತಿರುವ ಪ್ರಕರಣ ನಡೆಯುತ್ತಿದೆ. ಒಂಟಿ ಮನೆಗಳು ಹಾಗೂ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಓಡಾಟ ನಡೆಸುವ ಈ ತಂಡ ಮನೆಯವರಿಗೆ ಇಲ್ಲಸಲ್ಲದ ಭಯ ಹುಟ್ಟಿಸಿ ಆ ಪೂಜೆ ಮಾಡಬೇಕು, ಈ ಪೂಜೆ ಮಾಡಬೇಕು ಎಂದೆಲ್ಲ ಹಣವನ್ನು ಪೀಕುವ ಕೆಲಸ ಮಾಡುತ್ತಿದ್ದಾರೆ.

ನಾಲ್ವರ ತಂಡದಿಂದ ಕೃತ್ಯ: ಮೈಲಾರಲಿಂಗ ಒಕ್ಕಲಿನ ಬಟ್ಟೆ ಧರಿಸಿ ಮನೆಗಳಿಗೆ ನುಗ್ತಿರೋ ನಾಲ್ವರು, ಮನೆಯವರು ಬಾಗಿಲು ತೆಗೆಯೋವರೆಗೂ ಹೋಗಲ್ಲ... ಮನೆ ಹಿಂದೆ-ಮುಂದೆ ಎಲ್ಲಾ ಸುತ್ತಾಡುತ್ತಾರೆ, ಗೌಡ್ರೆ, ಅಮ್ಮ, ಅಮ್ಮಾವ್ರೆ, ಅವ್ವ, ಸರ್, ಮಾಲೀಕರೇ, ಅಪ್ಪಾಜಿ ಅಂತೆಲ್ಲಾ ಬರೋವರ್ಗೂ ಕೂಗ್ತಾರೆ. ಮೊನ್ನೆ ಜನವರಿ 3ರಂದು ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಸಮೀಪದ ಬಾಳೆಹಳ್ಳಿ ರಮೇಶ್ ಗೌಡ ಮತ್ತು ಬಿದರಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ನಾಗರಾಜು ಅವರ ಮನೆಗೆ ಬಂದಿದ್ದ ನಾಲ್ವರು ಮನೆಯಲ್ಲಿದ್ದ ಮಹಿಳೆಯರಿಗೆ ನಿಮ್ಮ ಯಜಮಾನನಿಗೆ ಕಂಟಕವಿದೆ. ಅಷ್ಟು ದಿನದಲ್ಲಿ ಹಾಗಾಗುತ್ತೆ, ಹೀಗಾಗುತ್ತೇ, ಕಂಟಕ ಪರಿಹಾರಕ್ಕೆ ಪೂಜೆ ಮಾಡಿಸಬೇಕು. 

ರಾಜ್ಯದ ನಕ್ಸಲ್ ಗ್ಯಾಂಗೇ ಶರಣಾಗತಿಗೆ ಸಜ್ಜು: ಮಾತುಕತೆ ಫಲಪ್ರದ

ಅದಕ್ಕೆ ಹತ್ತು ಸಾವಿರ, ಇಪ್ಪತ್ತು ಸಾವಿರ ಆಗುತ್ತೆ. ಅಷ್ಟು ಕೊಟ್ಟರೆ ದೋಷ ಪರಿಹಾರ ಮಾಡಿಕೊಡುತ್ತೇವೆ ಎಂದೆಲ್ಲಾ ಹೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಬಾಳೆಹಳ್ಳಿ ರಮೇಶ್ ಗೌಡ ಎಂಬುವವರ ಮನೆಯಲ್ಲಿ ಹೋಗಿ ಅಂಗಳದಲ್ಲಿದ್ದ ಕೆಲಸದವರ ಬಳಿ ಈ ಮನೆಯಲ್ಲಿ ಎಷ್ಟು ಜನ ಇದ್ದಾರೆ ಎಂದೆಲ್ಲಾ ವಿಚಾರಿಸಿದ್ದಾರೆ. ಬಿದರಹಳ್ಳಿಯ ಕೃಷಿಕರೊಬ್ಬರ ಮನೆಯಲ್ಲಿ ನೂರು ರೂಪಾಯಿ ಕೊಟ್ಟಾಗ ಅದನ್ನು ಅಲ್ಲಿಯೇ ಬಿಸಾಕಿ ಹೋಗಿದ್ದಾರೆ. ಬಾಳೆಹಳ್ಳಿ ನಾಗರಾಜು ಅವರ ಮನೆಯಲ್ಲಿ ನಾಗರಾಜು ಅವರ ಪತ್ನಿಗೆ ನಿಮ್ಮ ಯಜಮಾನರಿಗೆ ಹಾಗಾಗುತ್ತೆ ಹೀಗಾಗುತ್ತೆ ಕಂಟಕವಿದೆ ಎಂದು ಹೆದರಿಸಿ ದೋಷ ಪರಿಹಾರಕ್ಕೆ 11 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಮಯದಲ್ಲಿ ಅವರ ಮಗ ಬಂದು ಹೆದರಿಸಿದ ತಕ್ಷಣ ಮನೆಯಿಂದ ಕಾಲ್ಕಿತ್ತಿದ್ದಾರೆ.

ಸಿಸಿಟಿವಿಯಲ್ಲಿ ದ್ರಶ್ಯ ಸೆರೆ: ಮನೆಗಳಿಗೆ ಈ ಗುಂಪು ಬರುವುದು, ಹೋಗುವುದು,  ಬಾಗಿಲು ತೆಗೆದ ತಕ್ಷಣ ಏಕಾಏಕಿ ಮನೆಯೊಳಗೆ ನುಗ್ಗುವುದು ಈ ದೃಶ್ಯಗಳೆಲ್ಲ ಮನೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಜನ ಕಂಡ ಕೂಡಲೇ ತಲೆಗೆ ಗೌನ್ ಹಾಕಿ ನಿಮ್ಮ ಮನೆಗೆ ಮೈಲಾರಲಿಂಗ ಬಂದಾನಾ ಎಂದು ಮನೆಯವ್ರು ಬಾಗಿಲು ತೆಗೆದ ಕೂಡಲೇ ಸೀದಾ ಒಳಗೆ ಹೋಗ್ತಿರೋ ಇವರು ಮಹಿಳೆಯರಿಗೆ ದೇವರು, ದಿಂಡಿರು ಅಂತ ಹೆದರಿಸಿ ಹಣ ಪಡೆಯುತ್ತಿದ್ದಾರೆ.

Bengaluru: ಇಬ್ಬರ ಮಕ್ಕಳ ಕೊಂದು ಸಾವಿಗೆ ಶರಣಾದ ದಂಪತಿ

ಇಂತಹ ತಂಡ ಮಲೆನಾಡಿನ ಎಲ್ಲಾ ಕಡೆ ಓಡಾಡುತ್ತಿದ್ದು, ಇವರಿಂದ ಮುಂದೆ ಬಾರೀ ಮೋಸ, ಅನಾಹುತ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಮೈಲಾರಲಿಂಗನ ವೇಷದಲ್ಲಿ ಬಂದು ಮನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂದೆ ಬೇರೆ ರೀತಿಯ ಕೃತ್ಯಗಳಿಗೆ ಕಾರಣವಾಗಬಹುದು ಎಂದು ಸ್ಥಳೀಯರು ಇಂತಹವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇವರು ಎಲ್ಲೇ ಕಂಡರೂ ಕೂಡಲೇ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ್ದು, ಪೊಲೀಸರು ಇಂತಹ ವೇಷದಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ