ಕಲ್ಯಾಣ ಕರ್ನಾಟಕದ ವ್ಯಾಪ್ತಿಯ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಾಯಚೂರು, ಯಾದಗಿರಿ ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯ ಮಾಡುತ್ತಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಲಿಂಗಸುಗೂರು (ಜ.02): ಕಲ್ಯಾಣ ಕರ್ನಾಟಕದ ವ್ಯಾಪ್ತಿಯ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಾಯಚೂರು, ಯಾದಗಿರಿ ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯ ಮಾಡುತ್ತಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದ ಭಾರತ ಮಾಲಾ ಯೋಜನೆಯಡಿ 1250 ಕೋಟಿ ರು. ವೆಚ್ಚದಲ್ಲಿ 320 ಕಿ.ಮೀ., ಬೆಳಗಾವಿ-ರಾಯಚೂರು ರಸ್ತೆಯನ್ನು ಎಕ್ಸ್‌ಪ್ರೆಸ್ ಕಾರಿಡಾರ್ ನಿರ್ಮಿಸಲಾಗುತ್ತದೆ 2 ಪ್ಯಾಕೆಜ್‌ಗಳಲ್ಲಿ ಟೆಂಡರ್ ಕರೆಯಲಾಗುತ್ತದೆ.
ಜೇವರ್ಗಿ-ತೆಕ್ಕಲಕೋಟೆ ರಾಷ್ಟ್ರೀಯ ಹೆದ್ದಾರಿ 150(ಎ) ತಿಂಥಣಿ ಬ್ರಿಜ್‌ವರೆಗೆ ಸುರಪುರ, ಶಹಪುರ ನಗರಗಳಿಂದ ಬೈಪಾಸ್ ಕಲಬುರಗಿಗೆ ನೂತನ ಹೆದ್ದಾರಿ ನಿರ್ಮಿಸಲಾಗುತ್ತದೆ. ಇದರ ಜೊತೆಗೆ 150(ಎ) ರಾಷ್ಟ್ರೀಯ ಹೆದ್ದಾರಿ ಮಸ್ಕಿ ಬುದ್ದಿನ್ನಿಯಿಂದ ಲಿಂಗಸುಗೂರು ಬಳಿಯ ಹೊನ್ನಳ್ಳಿಯವರೆಗೆ 200 ಕೋಟಿ ರು. ವೆಚ್ಚದಲ್ಲಿ ಹೆದ್ದಾರಿ ಅಗಲೀಕರಣ, ಮರು ನಿರ್ಮಾಣ ಕಾಮಗಾರಿ ನಡೆದಿದೆ. ಗೋಲಪಲ್ಲಿ ಸೇತುವೆಯನ್ನು 40 ಲಕ್ಷದ ವೆಚ್ಚದಲ್ಲಿ ದುರಸ್ಥಿ ಮಾಡಲಾಗುತ್ತದೆ ಇದಕ್ಕಾಗಿ ತಜ್ಞರು ಪರಿಶೀಲಿಸಿ ಕಾಮಗಾರಿ ನಡೆಸಲಾಗುವುದೆಂದು ಮಾಹಿತಿ ನೀಡಿದರು.
Bidar Utsav: ಬಯಲು ಸೀಮೆಯ ಹಬ್ಬಕ್ಕೆ ಭರದ ಸಿದ್ಧತೆ
ಗದಗ-ವಾಡಿ ರೈಲ್ವೆ ಯೋಜನೆಯು ಲಿಂಗಸುಗೂರು-ಸುರಪುರದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇತ್ತು. ಈಗಾಗಲೆ 85ರಷ್ಟುಭೂ ಸ್ವಾಧೀನ ಪ್ರಕ್ರಿಯೇ ಪೂರ್ಣಗೊಂಡಿದೆ. ರೈಲ್ವೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ 400 ಕೋಟಿ ರು. ಪರಿಹಾರ ವಿತರಣೆ ಮಾಡಲಾಗಿದ್ದು, 2025ಕ್ಕೆ ರೈಲ್ವೆ ಮಾರ್ಗ ನಿರ್ಮಾಣ ಪೂರ್ಣಗೊಳ್ಳಲಿದೆ. ರಾಯಚೂರು ರೈಲ್ವೆ ನಿಲ್ದಾಣದ ಆಧುನೀಕರಣ ಮಾಡಲಾಗಿದೆ ಎಂದು ತಿಳಿಸಿದರು. ಕೇಂದ್ರದ ಅಮೃತ ಯೋಜನೆಯಡಿ ಲಿಂಗಸುಗೂರು ಪಟ್ಟಣಕ್ಕೆ ಜನಸಂಖ್ಯೆಗೆ ಅನುಗೂಣವಾಗಿ ಕುಡಿಯುವ ನೀರಿನ ಯೋಜನೆ ವಿಸ್ತರಣೆಗೆ 100 ಕೋಟಿ ರು. ವೆಚ್ಚದ ಯೋಜನೆ ಅನುಮೋದನೆಗೊಂಡಿದೆ.
ಇದರಡಿ 15 ಲಕ್ಷ ಲೀಟರ್ ಸಾಮಾರ್ಥ್ಯದ ಟ್ಯಾಂಕರ್ ನಿರ್ಮಾಣ ಮಾಡಲಾಗುತ್ತದೆ. ಹಟ್ಟಿಪಟ್ಟಣದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಗುತ್ತಿಗೆದಾರರು ಕಳಪೆಯಾಗಿ ನಿರ್ಮಿಸಿದ ಪರಿಣಾಮ ಹಟ್ಟಿಗೆ ಕುಡಿಯುವ ನೀರಿನ ತೊಂದರೆ ಆಗಿದೆ. ತಕ್ಷಣವೇ ಹೆಚ್ಚಿನ ಅನುದಾನದಲ್ಲಿ ಜ. 26ರೊಳಗೆ ಹಟ್ಟಿಗೆ ಕುಡಿಯುವ ನೀರು ಪೂರಕೆ ಮಾಡಲು ಗಡವು ನೀಡಲಾಗಿದೆ. ಜಲಧಾರೆ ಯೋಜನೆಯಡಿ ಈಗಾಗಲೆ ಕೃಷ್ಣಾನದಿಯಿಂದ ಜಿಲ್ಲೆಯ ಪ್ರಮುಖ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು 2300 ಕೋಟಿ ರು. ವೆಚ್ಚದ ಕಾಮಗಾರಿಯನ್ನು ಇಎಸ್ ಕಂಪನಿಗೆ ಟೆಂಡರ್ ನೀಡಲಾಗಿದೆ. ಮುಖ್ಯಮಂತ್ರಿಗಳು ಕಾಮಗಾರಿ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
Ramanagara: ಮಹಿಳಾ ಕಾರ್ಮಿಕರ ಮಕ್ಕಳಿಗೆ ಶಿಶು ಪಾಲನಾ ಕೇಂದ್ರ!
ಪರಿಶಿಷ್ಟ ಪಂಗಡ ಮಕ್ಕಳ ಶಿಕ್ಷಣಕ್ಕಾಗಿ ಗುಂತಗೋಳ ಹಾಗೂ ಹುಣಸಗಿಯಲ್ಲಿ ಏಕಲವ್ಯ ವಸತಿ ಶಾಲೆ ನಿರ್ಮಾಣ ಮಾಡಲಾಗುತ್ತದೆ. ಇದರ ಜೊತೆಗೆ ಯಾದಗಿರಿಯಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲಾಗಿದ್ದು, 150 ಮಕ್ಕಳಿಗೆ ಮೆಡಿಕಲ್ ಪ್ರವೇಶ ನೀಡಲಾಗಿದೆ. ಅಂಚೆ ಕಚೇರಿ, ಕೇಂದ್ರಿಯ ವಿದ್ಯಾಲಯ, ಎಎಸ್‌ಐ ಆಸ್ಪತ್ರೆಯನ್ನು ಯಾದಗಿರಿಯಲ್ಲಿ ನಿರ್ಮಿಸಲಾಗುತ್ತದೆ. ರಾಯಚೂರಲ್ಲಿ ಏಮ್ಸ್ ಹಾಗೂ ಮೈನಿಂಗ್ ಕಾಲೇಜುಗಳ ನಿರ್ಮಾಣಕ್ಕೂ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಮನವಿ ಮಾಡಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್, ಪುರಸಭೆ ಅಧ್ಯಕ್ಷೆ ಸುನೀತಾ ಪರಶುರಾಮ ಕೆಂಬಾವಿ, ಬಿಜೆಪಿ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಗಿರಿಮಲ್ಲನಗೌಡ, ಗಜೇಂದ್ರ ನಾಯಕ, ಗೋವಿಂದ ನಾಯಕ, ಟೆಲಿಕಾಂ ಸಲಹಾ ಸಮಿತಿ ಸದಸ್ಯ ಸಂಜೀವ ಕುಮಾರ ಕಂದಗಲ್ ಇದ್ದರು.