ರಾಜ್ಯದ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ವರ್ಷದಿಂದಾ ವರ್ಷಕ್ಕೆ ಹುಲಿಗಳ ಸಂತತಿಯಲ್ಲಿ ಹೆಚ್ಚಳ ಉಂಟಾಗುತ್ತಿದ್ದು, ಹುಲಿಗಳ ಸಂತತಿಯಲ್ಲಿ ಗಣನೀಯವಾಗಿ ಏರಿಕೆ ಉಂಟಾಗುತ್ತಿದೆ. ಈ ವರ್ಷ ಹುಲಿ ಗಣತಿ ಆರಂಭವಾಗಿದ್ದು, 716 ಕ್ಯಾಮರಾ ಬಳಕೆ ಮಾಡಲಾಗುತ್ತಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು(ಜ.2): ರಾಜ್ಯದ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ವರ್ಷದಿಂದಾ ವರ್ಷಕ್ಕೆ ಹುಲಿಗಳ ಸಂತತಿಯಲ್ಲಿ ಹೆಚ್ಚಳ ಉಂಟಾಗುತ್ತಿದ್ದು, ಹುಲಿಗಳ ಸಂತತಿಯಲ್ಲಿ ಗಣನೀಯವಾಗಿ ಏರಿಕೆ ಉಂಟಾಗುತ್ತಿದೆ. ಕಳೆದ 2018-19 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಭದ್ರಾವನ್ಯಜೀವಿ ವಿಭಾಗದಲ್ಲಿ ನಡೆದ ಹುಲಿಗಣತಿಯಲ್ಲಿ 33 ಹುಲಿಗಳು ಕಾಣಿಸಿಕೊಂಡಿದ್ದು, ಈ ವರ್ಷ ನಡೆಯಲಿರುವ ಗಣತಿಯಲ್ಲಿ ಅವುಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ.
undefined
ಹುಲಿ ಗಣತಿ ಆರಂಭ : 716 ಕ್ಯಾಮರಾ ಬಳಕೆ
ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ ಭದ್ರವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಿಭಾಗದ ನಿರ್ದೇಶಕ ಪ್ರಭಾಕರನ್ ಭದ್ರಾವನ್ಯಜೀವಿ ವಿಭಾಗ 500 ಚದರ ಕಿ.ಮೀನಷ್ಟಿದ್ದು, 100ಚದರ ಕಿ.ಮೀ.6ರಿಂದ 7 ಹುಲಿಗಳ ಆವಾಸಸ್ಥಾನವಾಗಿದೆ. ಈಗಾಗಲೇ ಮುತ್ತೋಡಿಯಲ್ಲಿ ಹುಲಿಗಳ ಗಣತಿ ಪೂರ್ಣಗೊಂಡಿದ್ದು, ಹೆಬ್ಬೆ ಮತ್ತು ಲಕ್ಕವಳ್ಳಿಯಲ್ಲಿ ಡಿಸೆಂಬರ್ 1 ರಿಂದ ಹುಲಿಗಣತಿ ಆರಂಭಗೊಂಡಿದೆ ಎಂದು ಹೇಳಿದರು. ನಾಲ್ಕು ವರ್ಷಕ್ಕೊಮ್ಮೆ ಹುಲಿಗಣತಿ ನಡೆಯುತ್ತಿದ್ದು, ಹೆಬ್ಬೆ ಮತ್ತು ಲಕ್ಕವಳ್ಳಿಯಲ್ಲಿ 2 ಹಂತದಲ್ಲಿ ಹುಲಿಗಣತಿ ನಡೆಯಲಿದೆ. ಒಟ್ಟು 258 ಗ್ರಿಡ್ಗಳಿದ್ದು, 2 ಚದರ ಕಿ.ಮೀ.ಗೆ ಒಂದು ಗ್ರಿಡ್ಬರುತ್ತಿದ್ದು, ಪ್ರತಿಗ್ರಿಡ್ಗೆ ಎರಡು ಕ್ಯಾಮrAಗಳಂತೆ 716 ಕ್ಯಾಮರಗಳನ್ನು ಬಳಸಲಾಗುತ್ತದೆ.
ಹುಲಿಗಣತಿ ನಡೆದ ಬಳಿಕ ಅವುಗಳನ್ನು ಬೆಂಗಳೂರಿನ ಟೈಗರ್ಸೆಲ್ಗೆಕಳುಹಿಸುತ್ತಿದ್ದು, ಅಲ್ಲಿ ಹುಲಿಗಳ ಸಂಖ್ಯೆ ನಿಖರವಾಗಿ ತಿಳಿಯಲಿದೆ ಎಂದರು. ಭದ್ರಾವನ್ಯಜೀವಿ ವಿಭಾಗದಲ್ಲಿ ಗಾರ್ಡ್ಸ್ ಮತ್ತು ವಾಚರ್ಗಳು ಕಾಡಿನ ಫ್ರೆಂಟ್ಲೈನ್ ವರ್ಕರ್ಸ್ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಭದ್ರಾವನ್ಯಜೀವಿ ವಿಭಾಗದ ರಕ್ಷಣೆಗೆ ಒತ್ತುಕೊಟ್ಟು ಕಾರ್ಯನಿರ್ವಹಿಸಲಾಗುತ್ತಿದ್ದು, ಹೆಬ್ಬೆ, ತಣಿಗೆಬೈಲು ಲಕ್ಕವಳ್ಳಿಯಲ್ಲಿ ಹುಲಿಅಭಿವೃದ್ಧಿ ಉತ್ತಮವಾಗಿದೆ. ಬಲಿಪ್ರಾಣಿಗಳಾದ ಕಡವೆ, ಸಾಂಬರು, ಕಾಡೆಮ್ಮೆ ಸಂಖ್ಯೆಯೂ ಅಧಿಕವಾಗಿರುವುದರಿಂದ ಹುಲಿಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಸಿಬ್ಬಂದಿ ಕೊರತೆ: ಫಾರೆಸ್ಟ್ಗಾರ್ಡ್ ಮತ್ತು ವಾಚರ್ಗಳ 147 ಮಂಜೂರಾತಿ ಹುದ್ದೆಗಳಲ್ಲಿ 51 ಭರ್ತಿಯಾಗಿದ್ದು, 96 ಹುದ್ದೆಗಳು ಖಾಲಿ ಇವೆ. ಈಗಾಗಲೇ ಆಯ್ಕೆಯಾಗಿರುವ ತಂಡ ತರಬೇತಿ ಮುಗಿಸುತ್ತಿದ್ದು, ಸದ್ಯದಲ್ಲೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಆಗ ಕೊರತೆ ನೀಗಲಿದೆ ಎಂದು ನುಡಿದರು.ಭದ್ರಾವನ್ಯಜೀವಿ ವಿಭಾಗದಲ್ಲಿ 150ಕ್ಕೂ ಹೆಚ್ಚು ಆನೆಗಳಿವೆ. ವಿಭಾಗದಲ್ಲಿ ಎಲಿಫೆಂಟ್ ಟ್ರಂಚ್ ನಿರ್ಮಿಸಲಾಗಿದೆ. 2004ರಲ್ಲಿ ಕಾಡಿಗೆ ಬೆಂಕಿಬಿದ್ದಿದ್ದು, ಈಗ ಬಿದಿರು ಉತ್ತಮವಾಗಿ ಬೆಳೆದಿದೆ. ಹಲಸು ಸೇರಿದಂತೆ ಹಣ್ಣಿನ ಮರಗಳನ್ನು ಬೆಳೆಸಿದ್ದು, ಆನೆಗಳಿಗೆ ಉತ್ತಮ ಆಹಾರ ದೊರೆಯುತ್ತಿದೆ.ಬೀಜೋತ್ಸವ ಮೂಲಕ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಬೆಳೆಯಲಾಗುತ್ತಿದೆ ಎಂದು ಹೇಳಿದರು.
ಕಾಡುಕೋಣಕ್ಕೆ ರೋಗ: ಕಾಫಿತೋಟದಲ್ಲಿ ಕಾಣಿಸಿಕೊಂಡಿರುವ ಕಾಡುಕೋಣದಲ್ಲಿ ಎಂಸಿಎಫ್ ವೈರಸ್ಕಾಣಿಸಿಕೊಂಡಿದ್ದು, ಇದು ಒಂದರಿಂದ ಮತ್ತೊಂದಕ್ಕೆ ಹರಡುವ ರೋಗಾಣುವಾಗಿರುವುದರಿಂದ ಕಾಡಿನಲ್ಲಿರುವ ಕಾಡುಕೋಣಗಳಿಗೆ ಈ ರೋಗ ಬಂದಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸಂಶೋಧನೆ ನಡೆಸುವಂತೆ ಪತ್ರಬರೆಯಲಾಗಿದೆ. ಈಗಾಗಲೇ ಸಂಶೋಧನೆಗೆ ಎರಡು ಸಂಸ್ಥೆಗಳು ಒಪ್ಪಿಗೆ ನೀಡಿವೆ ಎಂದು ನುಡಿದರು.
ಮೈಸೂರು ಮೃಗಾಲಯದಲ್ಲಿ 3 ಹುಲಿ ಮರಿಗಳ ದರ್ಶನಕ್ಕೆ ಚಾಲನೆ
ಕಳ್ಳಬೇಟೆ ಶಿಬಿರ: ಭದ್ರಾವನ್ಯಜೀವಿ ವಿಭಾಗದಲ್ಲಿ 40 ಕಳ್ಳಬೇಟೆ ಶಿಬಿರಗಳಿವೆ. ಪ್ರತಿಕ್ಯಾಂಪಿನಲ್ಲಿ ಮೂವರು ದಿನಗೂಲಿ ನೌಕರರು, ಬೀಟ್ಗಾರ್ಡ್ ವಾಚರ್ಕಾರ್ಯನಿರ್ವಹಿಸುತ್ತಿದ್ದಾರೆ. ನರಸಿಂಹರಾಜಪುರ ಕಡೆಯಿಂದ ಮೀನುಶಿಕಾರಿಗೆ ಬರುವ ಸಾಧ್ಯತೆಗಳಿರುವುದರಿಂದ ಹಿನ್ನೀರಿನಲ್ಲಿ ಬೋಟ್ಕ್ಯಾಂಪ್ ಕಾರ್ಯನಿರ್ವಹಿಸುತ್ತಿದೆ. ಅವುಗಳಿಗೆಲ್ಲ ಅವಕಾಶನೀಡದೆ ಕಾಡನ್ನುಹದ್ದಿನ ಕಣ್ಣಿಟ್ಟು ಕಾಯಲಾಗುತ್ತಿದೆ ಎಂದು ಹೇಳಿದರು.
ಸ್ನೇಹಿತರ ಜೊತೆ ಕುಡಿಯುತ್ತ ಕುಳಿತಿದ್ದ ಕುಡುಕನ ಹೊತ್ತೊಯ್ದ ಹುಲಿ
ಥರ್ಮಲ್ಡ್ರೋನ್ ಬಳಕೆ: ಕಾಡಿನ ರಕ್ಷಣೆ ಮತ್ತು ಹೆಚ್ಚು ಉಷ್ಣಾಂಶವಿರುವ ಪ್ರದೇಶದ ಪತ್ತೆಗಾಗಿ 2 ಥರ್ಮಲ್ಡ್ರೋನ್ಗಳನ್ನು ಬಳಸಲಾಗುತ್ತಿದ್ದು, ಇಡೀ ಭದ್ರಾವನ್ಯಜೀವಿ ವಿಭಾಗದ ಚಲನ,ವಲನವನ್ನು ಈ ಡ್ರೋನ್ ಮೂಲಕ ತಿಳಿದುಕೊಳ್ಳಲಾಗುತ್ತಿದ್ದು, ಹೆಚ್ಚು ಉಷ್ಣಾಂಶವಿರುವ ಪ್ರದೇಶದಲ್ಲಿ ಇಲಾಖೆ ಸಿಬ್ಬಂದಿಗಳು ಹೆಚ್ಚಿನ ನಿಗಾಇಡಲಿದ್ದಾರೆಂದರು.