ಮಂಗಳೂರು: ಗ್ರಾಮ ಪಂಚಾಯತಿಯಲ್ಲಿ ನಗದು ರಹಿತ ವ್ಯವಹಾರ

By Kannadaprabha NewsFirst Published Sep 27, 2019, 2:06 PM IST
Highlights

ಪಡುಪಣಂಬೂರು ಪಂಚಾಯಿತಿಯಲ್ಲಿ ನಗದು ರಹಿತ ವ್ಯವಸ್ಥೆ ಆರಂಭಗೊಂಡಿದೆ. ಇದರಿಂದಾಗಿ ಈ ಪಂಚಾಯತು ವ್ಯಾಪ್ತಿಯಲ್ಲಿ ಲೈಸನ್ಸ್‌, ಬಾಡಿಗೆ, ಅನುಮತಿ ಶುಲ್ಕ ಮತ್ತಿತರ ಸಂಪನ್ಮೂಲದ ನಗದನ್ನು ಸ್ವೈಪ್ ಕಾರ್ಡ್‌ನ ಮೂಲಕ ವ್ಯವಹಾರ ನಡೆಸಬಹುದಾಗಿದೆ.

ಮಂಗಳೂರು(ಸೆ.27): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡುಪಣಂಬೂರು ಪಂಚಾಯಿತಿಯಲ್ಲಿ ನಗದು ರಹಿತ ವ್ಯವಸ್ಥೆ ಆರಂಭಗೊಂಡಿದ್ದು ಕಾರ್ಡ್‌ ಸ್ವೈಪ್‌ ಮಾಡುವ ಮೂಲಕ ಹಣದ ವ್ಯವಸ್ಥೆ ಅಳವಡಿಸಿಕೊಂಡಿರುವುದು ತಾಲೂಕಿಗೆ ಪ್ರಥಮವೆಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್‌ ಬೊಳ್ಳೂರು ಹೇಳಿದ್ದಾರೆ.

ಪಡುಪಣಂಬೂರು ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಗದು ರಹಿತ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು. ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್‌ ಅವರು ಪ್ರಥಮವಾಗಿ ಕಾರ್ಡ್‌ನ್ನು ಸ್ವೈಪ್‌ ಮಾಡಿದ್ದಾರೆ.

ಮಂಗಳೂರು: ಗ್ರಾಮ ಪಂಚಾಯತಿಯಲ್ಲಿ ನಗದು ರಹಿತ ವ್ಯವಹಾರ

ಪಿಡಿಒ ಅನಿತಾ ಕ್ಯಾಥರಿನ್‌ ಮಾಹಿತಿ ನೀಡಿ, ಮನೆ, ಕಟ್ಟಡ, ಅಂಗಡಿಯ ತೆರಿಗೆ, 9/11 ಲೈಸನ್ಸ್‌, ಬಾಡಿಗೆ, ಅನುಮತಿ ಶುಲ್ಕ ಮತ್ತಿತರ ಸಂಪನ್ಮೂಲದ ನಗದನ್ನು ಸ್ವೈಪ್ ಕಾರ್ಡ್‌ನ ಮೂಲಕ ವ್ಯವಹಾರ ನಡೆಸಬಹುದು. ಕುಡಿಯುವ ನೀರಿನ ಬಿಲ್ಲನ್ನು ಮಾತ್ರ ಕಟ್ಟಲು ಸಾಧ್ಯವಿಲ್ಲ. ಗ್ರಾಮಕ್ಕೊಂದರಂತೆ ಸಮಿತಿ ಇರುವುದರಿಂದ ಅದನ್ನು ಇದರಲ್ಲಿ ಜೋಡಿಸಲಾಗಿಲ್ಲ ಎಂದಿದ್ದಾರೆ.

ಮಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಳೆ ಅಬ್ಬರ ಇಳಿಕೆ

ಪಂಚಾಯಿತಿ ಉಪಾಧ್ಯಕ್ಷೆ ಸುರೇಖಾ ಕರುಣಾಕರ್‌ ಬೆಳ್ಳಾಯರು, ಸದಸ್ಯರಾದ ವಿನೋದ್‌ ಎಸ್‌. ಸಾಲ್ಯಾನ್‌ ಬೆಳ್ಳಾಯರು, ಪುಷ್ಪಾ ಯಾನೆ ಶ್ವೇತಾ, ಲೀಲಾ ಬಂಜನ್‌, ಪುಷ್ಪಾವತಿ, ವನಜಾ, ಕುಸುಮಾ, ಹೇಮನಾಥ್‌ ಅಮೀನ್‌, ಉಮೇಶ್‌ ಪೂಜಾರಿ ಪಡುಪಣಂಬೂರು, ಮಂಜುಳಾ, ಸಂತೋಷ್‌ಕುಮಾರ್‌, ಕಾರ್ಯದರ್ಶಿ ಲೋಕನಾಥ ಭಂಡಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಮಂಗಳೂರು: ಅರಳಿದ ಮಲ್ಲಿಗೆ ಕೇಳಿದ ಬಾಲಿವುಡ್ ತಾರೆ..!

click me!