ಚಿತ್ರದುರ್ಗದಲ್ಲಿ ಉತ್ತಮ ಮಳೆ: ಎರಡು ಚೆಕ್ ಡ್ಯಾಂಗಳು ಭರ್ತಿ

Published : Sep 27, 2019, 01:52 PM IST
ಚಿತ್ರದುರ್ಗದಲ್ಲಿ ಉತ್ತಮ ಮಳೆ: ಎರಡು ಚೆಕ್ ಡ್ಯಾಂಗಳು ಭರ್ತಿ

ಸಾರಾಂಶ

ಚಿತ್ರದುರ್ಗದ ಮೊಳಕಾಲ್ಮುರಿನಲ್ಲಿ ಕಳೆದೆರೆಡು ದಿನಗಳಿಂದ ಉತ್ತಮ ಮಳೆಯಾಗಿದ್ದು ಚೆಕ್ ಡ್ಯಾಂಗಳು ಭರ್ತಿಯಾಗಿವೆ. ದೇವಸಮುದ್ರ ಹೋಬಳಿಯ ಪಕ್ಕುರ್ತಿ ಕೆರೆಯಲ್ಲಿ 4 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ವಡೇರಹಳ್ಳಿ ಮತ್ತು ತಮ್ಮೇನಹಳ್ಳಿ ರಾಮಸಾಗರ ಹಳ್ಳ ತುಂಬಿ ಹರಿಯುತ್ತಿದ್ದು, ಜನರಿಗೆ ಸಂತೋಷ ಉಂಟು ಮಾಡಿದೆ.

ಚಿತ್ರದುರ್ಗ(ಸೆ.27): ಮೊಳಕಾಲ್ಮುರಿನಲ್ಲಿ ಕಳೆದೆರೆಡು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ಚೆಕ್‌ಡ್ಯಾಂಗಳು ಭರ್ತಿಯಾಗಿವೆ ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ದೇವಸಮುದ್ರ ಹೋಬಳಿಯ ಪಕ್ಕುರ್ತಿ ಕೆರೆಯಲ್ಲಿ 4 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ವಡೇರಹಳ್ಳಿ ಮತ್ತು ತಮ್ಮೇನಹಳ್ಳಿ ರಾಮಸಾಗರ ಹಳ್ಳ ತುಂಬಿ ಹರಿಯುತ್ತಿದ್ದು, ಜನರಿಗೆ ಸಂತೋಷ ಉಂಟು ಮಾಡಿದೆ.

ಸೆ. 30 ರೊಳಗೆ ಅನರ್ಹರು ಬಿಪಿಎಲ್‌ ಕಾರ್ಡ್ ಹಿಂದಿರುಗಿಸಿ: ಡಿಸಿ

ದೇವಸಮುದ್ರ ಹೋಬಳಿಯ ಎಲ್ಲ ಚೆಕ್‌ಡ್ಯಾಂ, ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹವಾಗಿ ಜೀವ ಕಳೆ ಬಂದಂತಾಗಿದೆ. ಕಸಬಾ ಹೋಬಳಿಯ ಮರ್ಲಹಳ್ಳಿ, ಗುಂಡ್ಲೂರು, ರಾಯಾಪುರ ಸಿದ್ದಯ್ಯನಕೋಟೆ ಪಿಕಪ್‌ಗಳಲ್ಲಿ ನೀರು ಭರ್ತಿಯಾಗಿದೆ. ಕೊಂಡ್ಲಹಳ್ಳಿ 1, ಗುಂಡ್ಲೂರು 1, ಪಟ್ಟಣದ ಕಟುಗರ ಬೀದಿಯಲ್ಲಿ 1 ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಪಟ್ಟಣ ಸಮೀಪದ ನೇರ್ಲೂಟೆ ಹಳ್ಳವು ಹರಿಯುತ್ತಿದೆ. ಮೊಳಕಾಲ್ಮುರು 51.2, ರಾಯಾಪುರ 27.4,ಬಿಜಿಕೆರೆ 10.2,ರಾಂಪುರ 34,ದೇವಸಮುದ್ರ 34 ಮಿಮೀ ಮಳೆಯಾಗಿದೆ.

ಅಂದು ರಾಜೀನಾಮೆ ನೀಡಿದ್ಯಾಕೆ: ಮುಕ್ತ ಕಂಠದಿಂದ ಕಾರಣ ಕೊಟ್ಟ ಅರ್ನಹ ಶಾಸಕ

PREV
click me!

Recommended Stories

'ಅನ್ನ ವಿಷ ಮಾಡಿದರೆ ಅವರ ವಂಶವೇ ಸರ್ವನಾಶ..' ಹೋಟೆಲ್ ಮಾಫಿಯಾ ವಿರುದ್ಧ ಸಿಡಿದೆದ್ದ ಜಗ್ಗೇಶ್‌
ನೀಟ್‌ ವಿದ್ಯಾರ್ಥಿನಿಯಾಗಿದ್ದ ತಂಗಿ ಸಾವು, ದುಬೈನಲ್ಲಿ ಇಂಜಿನಿಯರ್‌ ಆಗಿದ್ದ ಅಣ್ಣ ಮಂಗಳೂರಿಗೆ ಬಂದು ಜೀವ ಮುಗಿಸಿದ!