ಮೂರು ಬಾರಿ ಪಲ್ಟಿಯಾದ ಕಾರು : ಅಚ್ಚರಿ ರೀತಿಯಲ್ಲಿ ಚಾಲಕ ಪಾರು

Kannadaprabha News   | Asianet News
Published : Oct 21, 2020, 03:44 PM ISTUpdated : Oct 21, 2020, 03:45 PM IST
ಮೂರು ಬಾರಿ ಪಲ್ಟಿಯಾದ ಕಾರು : ಅಚ್ಚರಿ ರೀತಿಯಲ್ಲಿ ಚಾಲಕ ಪಾರು

ಸಾರಾಂಶ

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮೂರು ಬಾರಿ ಪಲ್ಟಿಯಾಗಿದೆ. ಚಾಲಕ ಪಾರಾಗಿದ್ದಾನೆ

ಮೂಲ್ಕಿ (ಅ.21): ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೂಲ್ಕಿ ಸಮೀಪದ ಪಡುಪಣಂಬೂರು ಶ್ರೀ ಶನೀಶ್ವರ ದೇವಸ್ಥಾನದ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮೂರು ಬಾರಿ ಪಲ್ಟಿಯಾಗಿದೆ.

 ಚಾಲಕ ಪವಾಡಸದೃಶವಾಗಿ ಪಾರಾಗಿದ್ದಾರೆ. ಸುರತ್ಕಲ್‌ ಎಂಆರ್‌ಪಿಎಲ್‌ನ ವ್ಯಕ್ತಿಯೊಬ್ಬರು ಕಾರಿನಲ್ಲಿ ಉಡುಪಿ ಕಡೆಗೆ ಸಂಚರಿಸುತ್ತಿದ್ದಾಗ ಪಡುಪಣಂಬೂರು ಬಸ್‌ ನಿಲ್ದಾಣ ಸಮೀಪಿಸುತ್ತಿದ್ದಂತೆ ಕಾರು ಚಾಲಕನ ನಿಯಂತ್ರಣ ತಪ್ಪಿ ಕಬ್ಬಿಣದ ತಡೆಬೇಲಿಗೆ ಡಿಕ್ಕಿ ಹೊಡೆದು ಮೂರು ಬಾರಿ ಪಲ್ಟಿಯಾಗಿದೆ. 

ವೃದ್ಧರಿಂದ ಎಟಿಎಂ ಕಾರ್ಡ್‌ ಎಗರಿಸುತ್ತಿದ್ದವನ ಬಂಧನ ...

ಕೂಡಲೇ ಸ್ಥಳೀಯರು ಧಾವಿಸಿ ಕಾರಿನೊಳಗೆ ಸಿಲುಕಿಕೊಂಡಿದ್ದ ಚಾಲಕನನ್ನು ಹೊರಗೆ ತೆಗೆದಿದ್ದಾರೆ. ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. 

 

PREV
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ