ಪ್ರಸಾದ ಸೇವಿಸುವ ದೇವರ ಮೊಸಳೆ ದೇಗುಲದಲ್ಲೇ ಪ್ರತ್ಯಕ್ಷ : ಅಚ್ಚರಿಗೆ ಕಾರಣವಾದ ನಡೆ..!

Suvarna News   | Asianet News
Published : Oct 21, 2020, 03:31 PM IST
ಪ್ರಸಾದ ಸೇವಿಸುವ ದೇವರ ಮೊಸಳೆ ದೇಗುಲದಲ್ಲೇ ಪ್ರತ್ಯಕ್ಷ : ಅಚ್ಚರಿಗೆ ಕಾರಣವಾದ ನಡೆ..!

ಸಾರಾಂಶ

ನಿತ್ಯ ಕೆರೆಯಲ್ಲಿಯೇ ಬಂದು ದೇವರ ಪ್ರಸಾದ ಸ್ವೀಕಾರ ಮಾಡುತ್ತಿದ್ದ ಬಬಿಯಾ ಇದೀಗ ದೇವಾಲಯಕ್ಕೆ ಬಂದು ಅಚ್ಚರಿ ಮೂಡಿಸಿದೆ. 

ಮಂಗಳೂರು (ಅ.21): ದೇವಾಲಯದಲ್ಲಿ ಮೊಸಳೆಯೊಂದು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. 
 
ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರ ದೇವಸ್ಥಾನದಲ್ಲಿ ಮೊಸಳೆ ಕಾಣಿಸಿಕೊಂಡಿದೆ. 

ಈ ದೇಗುಲದ ಕೆರೆಯಲ್ಲಿನ  ದೇವರ ಮೊಸಳೆ ಎಂದೇ ಕರೆಸಿಕೊಳ್ಳುವ  'ಬಬಿಯಾ' ದೇವಾಲಯಕ್ಕೆ ಬಂದಿದೆ. ಮಂಗಳವಾರ ರಾತ್ರಿ ಗರ್ಭಗುಡಿ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. 

ಹಲವಾರು ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿ ಇರುವ 'ಬಬಿಯಾ'ಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಣೆ ಮಾಡಲಾಗುತ್ತದೆ. 

ಕರೆದರೆ ಸಾಕು ಪ್ರಸಾದ ತಿಂದು ಹೋಗೋ ಮೊಸಳೆ! ...

ಹೀಗೆ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯವಾಗಿದ್ದು, ಇದೀಗ ಕೆರೆಯಿಂದ ಹೊರಬಂದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡಿದ್ರಿಂದ ಅಚ್ಚರಿಗೆ ಕಾರಣವಾಗಿದೆ. 

ಅಲ್ಲಿಯ ಪೂಜಾರಿ ಬಬಿಯಾ ಎಂಬ ಹೆಸರಿನಿಂದ ಕರೆಯುತ್ತಾರೆ. ಆ ಮೊಸಳೆಗೆ ಪ್ರತಿದಿನ ಮಧ್ಯಾಹ್ನ ಮಹಾಪೂಜೆ ಆದ್ಮೇಲೆ ನೈವೇದ್ಯ ಕೊಡುವ ಸಮಯಕ್ಕೆ ಕರೆಯುತ್ತಾರೆ. 
 
ಬಬಿಯಾ.... ಎಂದು ಕರೆದಾಗ ಸುರಂಗದಿಂದ ಹೊರಗೆ ಬಂದು ನೈವೇದ್ಯ ಸ್ವೀಕರಿಸುತ್ತದೆ ಈ ಮೊಸಳೆ. ಆದರೆ ಇದೀಗ ದೇಗುಲಕ್ಕೆ ಬಂದಿದೆ.

PREV
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ