ಸೀರೆ ಕೇಳಿದ್ದಕ್ಕೆ ಮುರಿದು ಬಿದ್ದ ಮದುವೆ!

Aug 29, 2018, 7:24 PM IST

ತುಮಕೂರು(ಆ.29): ಸೀರೆ ವಿಚಾರಕ್ಕೆ ಮದುವೆಯೊಂದು  ಮುರಿದ ಬಿದ್ದ ಘಟನೆ ತುಮಕೂರಿನಲ್ಲಿ ನಡೆದಿದೆ. ಯುವತಿ ಕುಟಂಬದವರು  ಯುವಕನ ಕುಟುಂಬದವರಲ್ಲಿ ಸೀರೆ ಕೇಳಿದ್ದಕ್ಕೆ ಮದುವೆಯೇ ಬೇಡವೆಂದಿದ್ದಾರೆ.  ಹೀಗಾಗಿ ಇಂದು ತುಮಕೂರಿನ ಚಿಲುಮೆ ಕಲ್ಯಾಣ ಮಂಟಪದಲ್ಲಿ  ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ.  

ಈ ಅನ್ಯಾಯವನ್ನು  ಪಶ್ನಿಸಿ ಯುವತಿ ಕುಟುಂಬದಿಂದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ರು.  ದೂರಿನ ಮೇರೆಗೆ ಮದುವೆ ಮಂಟಪಕ್ಕೆ ಬಂದಿದ್ದ  ಮಹಿಳಾ ಪೊಲೀಸ್  ಮೇಲೆ ಯುವಕನ ಕುಟುಂಬಸ್ಥರು ಹಲ್ಲೆಗೆ ಯತ್ನ ನಡೆಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..