* ಹಾಸನ ಜಿಲ್ಲೆಯ ಬೇಲೂರಿನಲ್ಲಿ ಮುಂದುವರೆದ ಧರ್ಮ ಸಂಘರ್ಷ
* ವಿಶ್ವವಿಖ್ಯಾತ ಬೇಲೂರು ಚನ್ನಕೇಶವ ಜಾತ್ರಾಮಹೋತ್ಸವ
* ಜಾತ್ರೆ ವೇಳೆಯಲ್ಲಿ ವ್ಯಾಪಾರ ವಹಿವಾಟಿಗೆ ಅಲಿಖಿತ ನಿರ್ಬಂಧದ ಸಾಧ್ಯತೆ
ವರದಿ- ಕೆ.ಎಂ. ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್
ಹಾಸನ(ಏ.12): ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ(HD Kumaraswamy), ಮಾಜಿ ಸಚಿವ ಹೆಚ್.ಡಿ.ರೇವಣ್ಣ)HD Revanna) ತವರು ಜಿಲ್ಲೆ ಹಾಸನದಲ್ಲಿ ಧರ್ಮ ದಂಗಲ್ ಮತ್ತೆ ಶುರುವಾಗಿದೆ. ವಿಶ್ವವಿಖ್ಯಾತ ಬೇಲೂರು ಚನ್ನಕೇಶವ ಜಾತ್ರಾಮಹೋತ್ಸವದ ವ್ಯಾಪಾರದಲ್ಲಿ ಧರ್ಮ ಸಂಘರ್ಷ ನಡೆಯುತ್ತಿದೆ. ಜಾತ್ರೆ ವೇಳೆ ಮಸ್ಲಿಂರ ವ್ಯಾಪಾರ ವಹಿವಾಟು ಬಹಿಷ್ಕಾರದ ವಾತಾವರಣ ಕಂಡುಬರುತ್ತಿದೆ.
ಜಾತ್ರೆ ವೇಳೆಯಲ್ಲಿ ವ್ಯಾಪಾರ ವಹಿವಾಟಿಗೆ ಅಲಿಖಿತ ನಿರ್ಬಂಧದ ಸಾಧ್ಯತೆ ಹೆಚ್ಚಾಗಿದೆ. ಏಪ್ರಿಲ್ 13 ಮತ್ತು 14 ರಂದು ರಥೋತ್ಸವ, ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆ ಹಿನ್ನೆಲೆ ಮಳಿಗೆ ಜಾಗ ಹರಾಜು ಪ್ರಕ್ರಿಯೆ ಪೂರ್ಣ ಗೊಂಡಿದೆ. ಆದರೆ ಹರಾಜಿನ ನಂತರವೂ ಯಾವೊಬ್ಬ ಮುಸ್ಲಿಂ ವ್ಯಾಪಾರಿಗಳು(Muslim Traders) ಅಂಗಡಿ ಮಳಿಗೆ ವ್ಯಾಪಾರಕ್ಕೆ ಪಡೆದಿಲ್ಲ.
ಜಾತಿ ಆಧಾರಿತ ಸಮಾವೇಶಗಳು ನಿಂತಲ್ಲಿ ಮಾತ್ರ ಜಾತ್ಯಾತೀತ ರಾಷ್ಟ್ರ ನಿರ್ಮಾಣ ಸಾಧ್ಯ
1.25 ಲಕ್ಷಕ್ಕೆ ಗಿರೀಶ್ ಮತ್ತು ಸಿದ್ದೇಶ್ ಬಿಡ್ಡುದಾರರಿಗೆ ಮಳಿಗೆ ಜಾಗ ಸಿಕ್ಕಿದೆ. 12 ದಿನಗಳ ಕಾಲಕ್ಕೆ ಅಂಗಡಿ ಮಳಿಗೆ ಜಾಗ ಹರಾಜಿನಲ್ಲಿ ನೀಡಲಾಗಿದೆ. ಬಿಡ್ಡುದಾರರು ಮುಸ್ಲಿಂ ವ್ಯಾಪಾರಿಗಳಿಗೆ ಇದುವರೆಗೆ ಮಳಿಗೆ ನೀಡಿಲ್ಲ. ಬೇಲೂರು ಪುರಸಭೆ ವ್ಯಾಪ್ತಿಗೆ ಸೇರಿದ ವ್ಯಾಪಾರ ಮಳಿಗೆ ಜಾಗ ಇದಾಗಿದ್ದು, ಪುರಸಭೆಯಿಂದ ಹರಾಜು ನೀಡಲಾಗಿದೆ.
ಬೇಲೂರು ಚನ್ನಕೇಶವ ಜಾತ್ರೆ(Beluru Chennakeshava Fair) ವೇಳೆ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದೆಂದು ತಾಲ್ಲೂಕು ಆಡಳಿತಕ್ಕೆ ವಿಶ್ವ ಹಿಂದೂ ಪರಿಷತ್(Vishwa Hindu Parishad) ಮನವಿ ಮಾಡಿತ್ತು. ಮನವಿ ಹಿನ್ನೆಲೆ ಎಚ್ಚರಿಕೆ ಹೆಜ್ಜೆಯಿಡಲು ಬಿಡ್ ದಾರರು ನಿರ್ಧರಿಸಿದ್ದಾರೆ. ಈ ಬಾರಿ ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ಸಿಗುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ.
ಹಾಸನ(Hassan) ಜಿಲ್ಲಾಡಳಿತ ಮುಸ್ಲಿಂರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡಿತ್ತದೆಯಾ ಎಂಬುದನ್ನು ನೋಡಬೇಕಿದೆ. ಧರ್ಮ ದಂಗಲ್ ನಲ್ಲಿ ಬೇಲೂರಿನ ಮುಸ್ಲಿಂ ವ್ಯಾಪಾರಿಗಳು ಕಂಗಾಲಾದಂತೆ ಕಂಡುಬರುತ್ತಿದೆ. ಇದುವರೆಗೂ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರಕ್ಕೆ ಅಂಗಡಿ ಮಳಿಗೆಯನ್ನು ಪಡೆದಿಲ್ಲದಿರುವುದು, ಮುಸ್ಲಿಂ ವ್ಯಾಪಾರಿಗಳು ಆತಂಕಕ್ಕೊಳಗಾಗಿದ್ದಾರೆಯಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ.
ನುಗ್ಗಿಕೇರಿ ಘಟನೆಗೆ ಪರೋಕ್ಷವಾಗಿ ಮುಸ್ಲಿಂ ಸಮುದಾಯ ಕಾರಣ: ಶಾಸಕ ಬೆಲ್ಲದ
ಧಾರವಾಡ: ಮುಸ್ಲಿಂ(Muslim) ಸಮುದಾಯ ಹಿಜಾಬ್(Hijab) ವಿಷಯದಲ್ಲಿ ನ್ಯಾಯಾಲಯದ ಆದೇಶಕ್ಕೆ ಗೌರವ ನೀಡದಿರುವುದೇ ನುಗ್ಗಿಕೇರಿ ದೇವಸ್ಥಾನದ ಆವರಣದಲ್ಲಿ ಮುಸ್ಲಿಂ ಅಂಗಡಿ ಮೇಲಿನ ದಾಳಿಗೆ ಪರೋಕ್ಷ ಕಾರಣ. ಈ ಅಹಿತಕರ ಘಟನೆ, ಪರಿಸ್ಥಿತಿಗೆ ಮೂಲ ಕಾರಣ ಅವರೇ ಎಂದು ಶಾಸಕ ಅರವಿಂದ ಬೆಲ್ಲದ(Aravind Bellad) ಹೇಳಿದ್ದಾರೆ.
ಹಿಂದೂ-ಮುಸ್ಲಿಮರು ಸಹೋದರರಂತೆ ಬಾಳಬೇಕು ಎಂದ ಬಿಎಸ್‌ವೈ
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಕುರಿತು ಮುಸ್ಲಿಂ ಸಮುದಾಯ ಕಾನೂನಿಗೆ ಗೌರವ ನೀಡುವುದನ್ನು ಬಿಟ್ಟು ತಮ್ಮ ಧರ್ಮೀಯರಿಗೆ ಅಂಗಡಿ-ಮುಗ್ಗಟ್ಟು ಬಂದ್ ಮಾಡಿ ಪ್ರತಿಭಟಿಸಲು ಪ್ರಚೋದನೆ ನೀಡಿತು. ಇದು ಮತ್ತೊಂದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದು ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ನುಗ್ಗಿಕೇರಿ ದೇವಸ್ಥಾನದಲ್ಲಿ ನಡೆದ ಘಟನೆ ಸುಖಾಸುಮ್ಮನೆ ನಡೆದಿಲ್ಲ. ಕ್ರಿಯೆಗೆ ಪ್ರತಿಕ್ರಿಯೆ. ಈ ಕಾರಣದಿಂದ ಕ್ರಿಯೆ ಆಗದಂತೆ ಮುಸ್ಲಿಂ ಸಮುದಾಯ ನೋಡಿಕೊಳ್ಳಬೇಕು. ಆಗ ಪ್ರತಿಕ್ರಿಯೆ ಆಗದಂತೆ ಮತ್ತೊಂದು ಸಮುದಾಯ ನೋಡಿಕೊಳ್ಳಲಿದೆ. ಅಲ್ಲದೇ, ಘಟನೆ ಬಗ್ಗೆ ಸಿ.ಟಿ. ರವಿ(CT Ravi) ಅವರು, ‘ತಲೆ ಒಡೆದಾಗ ಇಲ್ಲದ ಕಾಳಜಿ ಕೆಲವರಿಗೆ ಕಲ್ಲಂಗಡಿ ಒಡೆದಾಗ ಏತಕ್ಕೆ’ ಎಂಬ ಹೇಳಿಕೆ ಸರಿಯಾಗಿದೆ ಎಂದು ಸಮರ್ಥನೆ ಮಾಡಿಕೊಂಡರು.
ಗಡ್ಡ-ಟೋಪಿ ಪ್ರಚೋದನೆ:
ಹಿಂದೂ ದೇವಸ್ಥಾನದಲ್ಲಿ(Hindu Temple) ಮುಸ್ಲಿಂ ವ್ಯಾಪಾರಸ್ಥರು(Muslim Traders) ವ್ಯಾಪಾರ ಮಾಡಲು ಅಡ್ಡಿ ಇಲ್ಲ. ಆದರೆ, ನಾನೊಬ್ಬ ಮುಸ್ಲಿಂ ಎಂದು ತೋರಿಸಿಕೊಳ್ಳುವ ರೀತಿಯಲ್ಲಿ ದೇವಸ್ಥಾನದ ಆವರಣದಲ್ಲಿ ಗಡ್ಡ ಬಿಟ್ಟುಕೊಂಡು, ಟೋಪಿ ಧರಿಸಿದರೆ ಕೆಲವೊಮ್ಮೆ ಭಕ್ತರಿಗೆ ಪ್ರಚೋದನೆ ಆಗುವ ಸಾಧ್ಯತೆಗಳು ಇವೆ. ಈ ಕಾರಣದಿಂದ ಮುಸ್ಲಿಂ ಸಮಾಜದ ಮುಖಂಡರು ಇಂತಹ ವಿಚಾರಗಳ ಬಗ್ಗೆ ಚಿಂತನೆ ಮಾಡಿದರೆ ಅಹಿತಕರ ಘಟನೆಗಳು ಆಗೋದಿಲ್ಲ ಎಂಬ ಅಭಿಪ್ರಾಯ ತಮ್ಮದು. ಹಾಗಂತ ನುಗ್ಗಿಕೇರಿ ದೇವಸ್ಥಾನ ಮುಸ್ಲಿಂ ಅಂಗಡಿ ಮೇಲಿನ ದಾಳಿ ಸಮರ್ಥನೆ ಮಾಡುತ್ತಿಲ್ಲ. ಈ ರೀತಿ ತಪ್ಪುಗಳಾಗದಂತೆ ಎರಡೂ ಸಮಾಜ ಎಚ್ಚರ ವಹಿಸಬೇಕು ಎಂದು ಬೆಲ್ಲದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಸಮಸ್ಯೆಯ ಮೂಲಕ್ಕೆ ಪರಿಹಾರ ಒದಗಿಸಬೇಕು. ಧಾರ್ಮಿಕ ಸಮಸ್ಯೆಗಳಿಗೆ ಸಮಾಜವೇ ಪರಿಹಾರ ಕಂಡುಕೊಳ್ಳಬೇಕೆ ಹೊರತು ಎಲ್ಲ ದೇವಸ್ಥಾನಗಳ ಎದುರು ಪೊಲೀಸ್ ಪಹರೆ ಹಾಕಲು ಸಾಧ್ಯವಿಲ್ಲ. ಇನ್ನಾದರೂ ಹಿಂದೂ -ಮುಸ್ಲಿಂ ನಾಯಕರು ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದರು ಬೆಲ್ಲದ.