* ಅಭಿವೃದ್ಧಿ ಕಾರ್ಯಗಳಿಗೆ ಶಾಸಕರ ನಿರ್ಲಕ್ಷ್ಯ: ಗ್ರಾಮಸ್ಥರ ಆರೋಪ
* ಕೇವಲ ಮುಖ್ಯರಸ್ತೆಯೊಂದನ್ನೇ ಅಭಿವೃದ್ಧಿಪಡಿಸಿದರೆ, ಒಳರಸ್ತೆಗಳನ್ನು ಯಾವಾಗ ಅಭಿವೃದ್ಧಿಪಡಿಸುತ್ತೀರಿ?
* ಎಲ್ಲವನ್ನೂ ನಿವಾರಿಸಿ ಎಂದು ಕೇಳಿಕೊಂಡರೂ ಕೆಲಸ ಮಾಡಿಲ್ಲ ಯಾಕೆ?
ಕಾರಟಗಿ(ಏ.12): ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿದಂತೆ ತಾಲೂಕಿನ ಹುಳ್ಕಿಹಾಳ ಕ್ಯಾಂಪ್‌ನಲ್ಲಿ ಮರ್ಲಾನಹಳ್ಳಿ-ಹುಳ್ಕಿಹಾಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಂದರ್ಭದಲ್ಲಿ ಶಾಸಕ ಬಸವರಾಜ ದಢೇಸ್ಗೂರು(Basavaraj Dadesugur) ಅವರ ಜತೆ ಗ್ರಾಮಸ್ಥರು, ಪಕ್ಷದ ಕಾರ್ಯಕರ್ತರು(Activists) ಮಾತಿನ ಚಕಮಕಿ ಭಾನುವಾರ ಸಂಜೆ ನಡೆದಿದೆ. ಶಾಸಕರ ಮತ್ತು ಬಿಜೆಪಿ(BJP) ಕಾರ್ಯಕರ್ತರ ನಡುವೆ ವಾಗ್ವಾದದ ವಿಡಿಯೋ ಸೋಮವಾರ ಕ್ಷೇತ್ರದಾದ್ಯಂತ ಭಾರಿ ವೈರಲ್ ಆಗಿದೆ.
ಕೇವಲ ಮುಖ್ಯರಸ್ತೆಯೊಂದನ್ನೇ ಅಭಿವೃದ್ಧಿಪಡಿಸಿದರೆ, ಒಳರಸ್ತೆಗಳನ್ನು ಯಾವಾಗ ಅಭಿವೃದ್ಧಿಪಡಿಸುತ್ತೀರಿ? ನಾಲ್ಕು ವರ್ಷದಿಂದ ಕ್ಯಾಂಪ್‌ನಲ್ಲಿ ಯಾವ ಅಭಿವೃದ್ಧಿ ಕೆಲಸಗಳನ್ನೇ ಮಾಡಿಲ್ಲ. ಎಲ್ಲ ಕೆಲಸಗಳನ್ನು ಹಿಂಬಾಲಕ ಜಿ. ರಾಮಮೋಹನ್ ಅವರಿಗೆ ಏಕೆ ನೀಡುತ್ತಿದ್ದೀರಿ ಎಂದು ಕ್ಯಾಂಪ್‌ನ ಬಿಜೆಪಿ ಕಾರ್ಯಕರ್ತರು ಒಕ್ಕೊರಲಿನಿಂದ ಶಾಸಕರನ್ನು ಪ್ರಶ್ನಿಸಿದ್ದಾರೆ.
Town Panchayat Election: ಕಾಂಗ್ರೆಸ್ ಸೇರಿ ನೋವು ಪಡಬೇಡಿ: ಶಾಸಕ ದಢೇಸುಗೂರು
ಹಲವು ಬಾರಿ ಕಚೇರಿಗೆ ಭೇಟಿ ನೀಡಿ ಗ್ರಾಮಕ್ಕೆ ಮೂಲ ಸೌಕರ್ಯಗಳ ಕೊರತೆ ಇದ್ದು, ಎಲ್ಲವನ್ನೂ ನಿವಾರಿಸಿ ಎಂದು ಕೇಳಿಕೊಂಡರೂ ಕೆಲಸ ಮಾಡಿಲ್ಲ ಯಾಕೆ ಎಂದು ಗ್ರಾಮಸ್ಥರು(Villagers) ಶಾಸಕರ ಮೇಲೆ ಹರಿಹಾಯ್ದರು.
ಆಗ ಶಾಸಕ ದಢೇಸ್ಗೂರು, ಗುತ್ತಿಗೆದಾರರು ಟೆಂಡರ್‌ನಲ್ಲಿ ಪಾಲ್ಗೊಂಡು ಕೆಲಸಗಳನ್ನು ಪಡೆದಿದ್ದಾರೆ. ಒಳರಸ್ತೆಗಳನ್ನು ಗ್ರಾಪಂನ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಡಿಸಿಕೊಳ್ಳುವಂತೆ ಹೇಳಿದ್ದೇ ತಡ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿ ವಾಗ್ವಾದ ನಡೆಸಿದ್ದಾರೆ.
ಇದೇ ವೇಳೆ ಗ್ರಾಮಸ್ಥರೊಬ್ಬರು ಈ ಘಟನಾವಳಿಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿರುವುದನ್ನು ಕಂಡ ಶಾಸಕ ದಢೇಸ್ಗೂರು ಮತ್ತು ಅವರೊಂದಿಗೆ ತೆರಳಿದ್ದ ಅವರ ಹಿಂಬಾಲಕರು ಗ್ರಾಮಸ್ಥರ ವಿರುದ್ಧ ಮನಬಂದಂತೆ ಮಾತನಾಡುತ್ತ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಶಾಸಕರು ಹಾಗೂ ಕೆಲ ಹಿಂಬಾಲಕರು ಕುಪಿತಗೊಂಡು ಮನಬಂದಂತೆ ಮಾತನಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿವೆ.
ಮಹಿಳಾ ಅಧಿಕಾರಿ ಜತೆ ಬಿಜೆಪಿ ಶಾಸಕನ ಲವ್ವಿ-ಡವ್ವಿ: ವರದಿ ಕೇಳಿದ ಶಿಸ್ತು ಸಮಿತಿ
ಕೊಪ್ಪಳ: ಕನಕಗಿರಿ(Kanakagiri) ಶಾಸಕ ಬಸವರಾಜ ದಢೇಸುಗೂರು ಹಾಗೂ ಮಹಿಳಾ ಅಧಿಕಾರಿಯ ನಡುವಿನ ಸಂಭಾಷಣೆಯ ಆಡಿಯೋ ವೈರಲ್(Audio Viral) ಆಗಿರುವ ಬೆನ್ನಲ್ಲೇ ಬಿಜೆಪಿ(BJP) ಶಿಸ್ತು ಸಮಿತಿ ಕೊಪ್ಪಳ(Koppal) ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಅವರಿಂದ ವರದಿ ಕೇಳಿತ್ತು. ಶಾಸಕರ ಹಾಗೂ ಮಹಿಳಾ ಅಧಿಕಾರಿಯ(Lady Officer) ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಿಸ್ತು ಸಮಿತಿ ವರದಿ ಕೇಳಿದೆ. ಶಾಸಕರ ಹೇಳಿಕೆಯನ್ನೊಳಗೊಂಡು ಸತ್ಯಾಸತ್ಯತೆ ವರದಿಯನ್ನು(Report) ಶಿಸ್ತು ಸಮಿತಿಗೆ ಸಲ್ಲಿಸುವುದಾಗಿ ಜಿಲ್ಲಾಧ್ಯಕ್ಷರು ತಿಳಿಸಿದ್ದರು.
ಮಹಿಳಾ ಅಧಿಕಾರಿಯ ಸಹೋದರ ಶಾಸಕರನ್ನು ಅವಾಚ್ಯ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿರುವ 11.52 ನಿಮಿಷಗಳ ಆಡಿಯೋ ಸಹ ವೈರಲ್ ಆಗಿದ್ದು ಪ್ರಕರಣ ವಿವಿಧ ಮಜಲುಗಳನ್ನು ಪಡೆದುಕೊಂಡಿದೆ. ಇದಕ್ಕೂ ಮೊದಲು ಅಧಿಕಾರಿಯ ಸಹೋದರ ಎಂದು ಹೇಳಿಕೊಂಡಿರುವ ಸಂದೀಪ್ ಎನ್ನುವವರು ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು.
ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ: ದಢೇಸಗೂರ ಹೇಳಿದ್ದಿಷ್ಟು
ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ತಮ್ಮ ಸಹೋದರಿಯ ಕುರಿತು ಹೇಳಿಕೊಂಡಿದ್ದಾರೆ. ನಮ್ಮ ಸಹೋದರಿ ಪ್ರಾಥಮಿಕ ಶಿಕ್ಷಣವನ್ನು ಗಂಗಾವತಿ ಪಡೆದಿದ್ದು ಸ್ನಾತಕೋತ್ತರ ಪದವಿ ಸಹ ಪಡೆದಿದ್ದಾರೆ. ಎರಡ್ಮೂರು ಬಾರಿ ಐಎಎಸ್ ಪ್ರಾಥಮಿಕ ಪರೀಕ್ಷೆಯಲ್ಲೂ ತೇರ್ಗಡೆಯಾಗಿದ್ದಾರೆ. ಪರಿಶಿಷ್ಟ ಜಾತಿಗೆ(Scheduled Caste) ಸೇರಿದ್ದರೂ ಸಾಮಾನ್ಯ ವರ್ಗದಲ್ಲಿಯೇ ನೌಕರಿ(Job) ಸೇರಿದ್ದಾರೆ. ಹೀಗಿರುವಾಗ ಶಾಸಕರಾದ ಮೇಲೆ ನೀವೇ ಅವರನ್ನು ನನಗೆ ಸಹಾಯ ಮಾಡಲು ಎಂದು ಕರೆತಂದಿದ್ದಿರಿ. ಅವರು ಸಹ ಸಾಕಷ್ಟು ಸಹಾಯ ಮಾಡಿದ್ದಾರೆ. ಆದರೆ, ನೀವು ಕ್ರೂರ ವರ್ತನೆ ತೋರಿದ್ದು ಆಕೆಯ ಮದುವೆಗೂ ಅಡ್ಡಿ ಬಂದಿದ್ದೀರಿ. ಇದನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ವಿಡಿಯೋ ವೈರಲ್(Video Viral) ಆಗುತ್ತಿದ್ದಂತೆ ಸಂದೀಪ್ ಅವರಿಗೆ ಕರೆ ಮಾಡಿರುವ ಶಾಸಕ ಬಸವರಾಜ ದಢೇಸುಗೂರು, ಯಾಕೆ ಈ ರೀತಿ ಮಾಡುತ್ತಿದ್ದಿಯಾ ಎಂದು ಪ್ರಶ್ನಿಸಿದ್ದಾರೆ. ಏನಾದರೂ ಇದ್ದರೆ ಕುಳಿತುಕೊಂಡು ಮಾತನಾಡುವ ಬನ್ನಿ ಎಂದು ಕರೆದಿದ್ದಾರೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಂದೀಪ್ ಅವಾಚ್ಯ ಶಬ್ದಗಳನ್ನು ಬಳಸಿ ತರಾಟೆಗೆ ತೆಗೆದುಕೊಂಡಿದ್ದರು.
ಮೊದ ಮೊದಲು ತಮ್ಮ ಅಂತಿದ್ದೆ. ನಾನು ಅಣ್ಣಾ ಅಂತಿದ್ದೆ. ಆದರೆ, ಕುಡಿದಾಗ ಅಳಿಯಾ ಅಂದ್ಬಿಟ್ಟೆ. ನನಗೆ ಯಾರು ಹಿರಿಯ ಇಲ್ಲ. ನಾನೇ ಹಿರಿಯ. ನಿನಗೆ ಯಾರು ಹಿರಿಯ ಇದ್ದಾರೆ ಹೇಳು. ಇದಲ್ಲದೆ ನಿನ್ನನ್ನು ಸೋಲಿಸುತ್ತೇನೆ. ನಿನ್ನನ್ನು ಇಲ್ಲಿ ಇರಲು ಬಿಡುವುದಿಲ್ಲ. ಕನಕಗಿರಿ ಕ್ಷೇತ್ರ ಬಿಡುಸುತ್ತೇನೆ ಎಂದು ಅಬ್ಬರಿಸಿದ ಆಡಿಯೋದಲ್ಲಿ ಹರಿಹಾಯ್ದಿದ್ದರು.