ನಟ ಅಮೀರ್ ಖಾನ್ ನಾಗರಹಾವಿಗೆ ಹಾಲು ಹಾಕುವುದು ಅವಮಾನ ಎನ್ನುತ್ತಾನೆ. ಆದರೆ, ಬಕ್ರೀದ್ ದಿನ ಕುರಿ ಕೊಯ್ಯುವುದು ಮೂಢನಂಬಿಕೆ ಎಂದೇಕೆ ಹೇಳುವುದಿಲ್ಲ: ಯತ್ನಾಳ್
ವಿಜಯಪುರ(ಆ.16): ಬಾಲಿವುಡ್ ನಟರಾದ ಶಾರೂಕ್ ಖಾನ್, ಸಲ್ಮಾನ್ ಖಾನ್, ಸೈಫ ಅಲಿ ಖಾನ್, ಅಮೀರ್ ಖಾನ್ ಇವರೆಲ್ಲ ಪಾಕಿಸ್ತಾನದ ಎಜೆಂಟರಾಗಿ ಕೆಲಸ ಮಾಡುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು. ಲಾಲ್‌ಸಿಂಗ್ ಚಡ್ಡಾ ಚಿತ್ರದ ವಿವಾದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ನಟ ಅಮೀರ್ ಖಾನ್ ನಾಗರಹಾವಿಗೆ ಹಾಲು ಹಾಕುವುದು ಅವಮಾನ ಎನ್ನುತ್ತಾನೆ. ಆದರೆ, ಬಕ್ರೀದ್ ದಿನ ಕುರಿ ಕೊಯ್ಯುವುದು ಮೂಢನಂಬಿಕೆ ಎಂದೇಕೆ ಹೇಳುವುದಿಲ್ಲ ಎಂದು ಪ್ರಶ್ನಿಸಿದರು.
ನಟ ಅಮೀರಖಾನ್ ಚಿತ್ರಗಳು ಹಿಂದೂ ಧರ್ಮದ ವಿರುದ್ಧವಾಗಿದ್ದು, ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಿರುತ್ತವೆ. ಅಮೀರಖಾನ್ ಹಿಂದೂ ದೇವತೆಗಳನ್ನು ಅಸಹ್ಯಕರವಾಗಿ ಚಿತ್ರಿಸುತ್ತಾನೆ ಅದಕ್ಕೆ ತಕ್ಕ ಶಾಸ್ತಿ ಆಗಲೇಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಗ್ನಿಪಥ ವಿರೋಧಿಸುವವರು ದೇಶದ್ರೋಹಿಗಳು: ಯತ್ನಾಳ್
ಕಾಂಗ್ರೆಸ್‌ನವರು ಸಾಚಾ ಇದ್ದಾರಾ?:
ಪಾಪ ಖರ್ಗೆ ಹಾಗೆ ಮಾತನಾಡಬಾರದು. ಅವರೇನು ಸಾಚಾ ಇದ್ದಾರಾ? ಕಾಂಗ್ರೆಸ್‌ನವರು ಸಾಚಾ ಇದ್ದಾರಾ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶಾಸಕ ಪ್ರಿಯಾಂಕ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಪ್ರಿಯಾಂಕ ಖರ್ಗೆ ಅವರದ್ದು ಬಹಳ ಇವೆ. ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಇನ್ನು ಮುಂದೆ ಶಾಸಕ ಖರ್ಗೆ ಅವರಿಗೆ ಭವಿಷ್ಯ ಇದೆ. ಈ ರೀತಿ ಮಾತನಾಡಿದರೆ ಅವರದ್ದು ಹೊರಗೆ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಆಡಳಿತ ಕುಂಠಿತವಾಗುತ್ತಿದೆ ಎಂಬ ಸಚಿವ ಮಾಧಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಇನ್ನೂ ವೇಗವಾಗಿ ಆಡಳಿತ ನಡೆಯಬೇಕು ಎನ್ನುವ ಆಸೆ ಎಲ್ಲರಿಗೂ ಇದೆ. ಸರ್ಕಾರ ಇನ್ನೂ ಕ್ರಿಯಾಶೀಲವಾಗಬೇಕು. ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡಬೇಕು ಎಂದರು.
ಕರ್ನಾಟಕ ವಿಧಾನಸಭೆ ಚುನಾವಣೆ ಏಕಾಂಗಿಯಾಗಿ ಎದುರಿಸುವ ಶಕ್ತಿ ಯಾವುದೇ ನಾಯಕರಿಗಿಲ್ಲ: ಯತ್ನಾಳ
ಶಿವಮೊಗ್ಗದಲ್ಲಿ ಸಾವರ್ಕರ್ ಪೋಸ್ಟರ್ ಹರಿದಿದ್ದು, ಕೆಲವು ಜನರಿಗೆ ಇತಿಹಾಸ ಬಗ್ಗೆ ಮಾಹಿತಿ ಇರುವುದಿಲ್ಲ. ಎರಡು ಸಲ ಕಾಳಾ ಪಾನಿ ಶಿಕ್ಷೆ ಅನುಭವಿಸಿದವರು ವೀರ ಸಾವರ್ಕರ್. ಅಂಡೋಮಾನ್ ನಿಕೋಬಾರ್ ಜೈಲಿಗೆ ಹೋದರೆ ಸಾವರ್ಕರ್ ಬಗ್ಗೆ ತಿಳಿಯುತ್ತದೆ. ಕೆಲವರು ಅಪ್ರಬುದ್ಧರಿರುತ್ತಾರೆ. ಅವರಿಗೆ ಇದರ ಬಗ್ಗೆ ಗೊತ್ತಿರುವುದಿಲ್ಲ. ಇತಿಹಾಸ ನೆನಪಿಸಿಕೊಡಲು ಪ್ರಧಾನಮಂತ್ರಿ ಈ ಕಾರ್ಯ ಮಾಡುತ್ತಿರುವುದು. ಒಂದು ವೇಳೆ ರಾಹುಲ್ ಗಾಂಧಿ ಸಾವರ್ಕರ್ ಬಳಿ ಇದ್ದಿದ್ದರೆ ಒಂದೇ ತಾಸಿನಲ್ಲಿ ಶರಣಾಗಿ ಇಟಲಿಗೆ ಹೋಗುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ರಾಜ್ಯಾದ್ಯಂತ ಬೇಕಾದರೂ ಓಡಾಡಲಿ, ಮನೇಲಿ ಬೇಕಾದರೂ ಓಡಾಡಲಿ. ಯಾರು ಓಡಾಡಬೇಕು ಎನ್ನುವುದು ಪಕ್ಷ ನಿರ್ಧಾರ ಮಾಡುತ್ತದೆ ಎಂದರು.