ಬೆಂಗಳೂರು: ಡಾಮಿನೋಸ್‌ ಪಿಜ್ಜಾ ತಟ್ಟೆ ಮೇಲೆ ಟಾಯ್ಲೆಟ್‌ ಬ್ರಷ್‌..!

Published : Aug 16, 2022, 07:48 AM IST
ಬೆಂಗಳೂರು: ಡಾಮಿನೋಸ್‌ ಪಿಜ್ಜಾ ತಟ್ಟೆ ಮೇಲೆ ಟಾಯ್ಲೆಟ್‌ ಬ್ರಷ್‌..!

ಸಾರಾಂಶ

ನಾವು ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯವನ್ನು ಖಚಿತಪಡಿಸಲು ವಿಶ್ವ ದರ್ಜೆಯ ಪ್ರೋಟೋಕಾಲ್‌ಗೆ ಬದ್ಧರಾಗಿದ್ದೇವೆ: ಡಾಮಿನೋಸ್‌ 

ಬೆಂಗಳೂರು(ಆ.16):  ಬೆಂಗಳೂರಿನ ಡೊಮಿನೋಸ್‌ ಪಿಜ್ಜಾ ಅಂಗಡಿಯೊಂದರಲ್ಲಿ ಜೋಡಿಸಿಡಲಾಗಿದ್ದ ಪಿಜ್ಜಾ ಡೋಗಳ ಮೇಲೆ ಮಾಪ್‌, ಟಾಯ್ಲೆಟ್‌ ಕ್ಲೀನಿಂಗ್‌ ಬ್ರಷ್‌ ನೇತುಬಿಟ್ಟಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಂಪನಿ, ಈ ಪ್ರಮಾದ ಎಸಗಿದ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಘೋಷಿಸಿದೆ. 

ಸಾಹಿಲ್‌ ಕರ್ನಾನಿ ಎಂಬ ಐಟಿ ಪದವೀಧರ ಈ ಫೋಟೊವನ್ನು ಟ್ವೀಟ್‌ ಮಾಡಿದ್ದು, ‘ಬೆಂಗಳೂರಿನ ಡೊಮಿನೋಸ್‌ ಪಿಜ್ಜಾ ಮಾರಾಟ ಮಳಿಗೆಯೊಂದರಲ್ಲಿ, ಮಾಪ್‌, ಟಾಯ್ಲೆಟ್‌ ಕ್ಲೀನಿಂಗ್‌ ಬ್ರಷ್‌, ಬಟ್ಟೆಗಳನ್ನು ಪಿಜ್ಜಾ ಡೋಗಳನ್ನು ಇಟ್ಟಿರುವ ತಟ್ಟೆಯ ಮೇಲೆ ನೇತುಹಾಕಲಾಗಿದೆ. ದಯವಿಟ್ಟು ಮನೆಯಲ್ಲಿ ತಯಾರಿಸಿದ ತಿನಿಸುಗಳಿಗೆ ಒತ್ತು ನೀಡಿ’ ಎಂದು ಬರೆದಿದ್ದಾರೆ. ಈ ಫೋಟೋ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಈ ಮಾರಾಟ ಮಳಿಗೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಂಪನಿಗೆ ಆಗ್ರಹಿಸಿದ್ದರು.

Dominos Pizza ಆರ್ಡರ್ ಮಾಡುವವರಿಗೆ ಶಾಕಿಂಗ್ ಸುದ್ದಿ!

ವಿಶ್ವದರ್ಜೆ ಸೇವೆಗೆ ಬದ್ಧ: 

ಇದಕ್ಕೆ ಪ್ರತಿಕ್ರಿಯಿಸಿರುವ ಡಾಮಿನೋಸ್‌, ‘ನಾವು ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯವನ್ನು ಖಚಿತಪಡಿಸಲು ವಿಶ್ವ ದರ್ಜೆಯ ಪ್ರೋಟೋಕಾಲ್‌ಗೆ ಬದ್ಧರಾಗಿದ್ದೇವೆ. ಈ ಸ್ವಚ್ಛತಾ ಮಾನದಂಡಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ನಾವು ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ. ಈ ಘಟನೆಯನ್ನು ಸಂಪೂರ್ಣವಾಗಿ ತನಿಖೆ ನಡೆಸಲಾಗುವುದು. ಗ್ರಾಹಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ಏನಾನ್ನಾದರೂ ಮಾಡಲು ನಾವು ಸಿದ್ಧರಾಗಿದ್ದೇವೆ’ ಎಂದು ಹೇಳಿದೆ.
 

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು