ಅನ್ನದಾತರು ಬೆಳೆದ ಬೆಳೆಗಳಿಗೆ ವಾಮಾಚಾರದ ಕಾಟ: ಹೊಲಗಳಿಗೆ ತೆರಳಲು ರೈತರಿಗೆ ಭಯ!

By Govindaraj S  |  First Published Oct 19, 2023, 10:19 AM IST

ಧಾರವಾಡ ಜಿಲ್ಲೆಯಲ್ಲಿ ಎಲ್ಲ ತಾಲೂಕಿಗಳು ಬರ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿರುವ ಬೆನ್ನಲ್ಲೆ  ಸದ್ಯ ಅಲ್ಪ ಸ್ವಲ್ಪ ಬೆಳೆದ ಬೆಳೆಗಳಿಗೆ ಕಳ್ಳರ ಕಾಟ ಅಲ್ಲ ವಾಮಾಚಾರದ ಕಾಟ ಹೆಚ್ಷಾಗುತ್ತಿದೆ ಎಂದು ಅನ್ನದಾತರು ಹೊಲಗಳಿಗೆ ತೆರಳಲು ಭಯ ಭೀತರಾಗಿರಾಗಿದ್ದಾರೆ.


ವರದಿ : ಪರಮೇಶ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

ಧಾರವಾಡ (ಅ.19): ಪ್ರಸಕ್ತ ವರ್ಷ ಈ ಭಾರಿ ಮುಂಗಾರು ಬೆಳೆ ಬರುತ್ತೆ, ಅನ್ನದಾತರ ಸಂಕಷ್ಟ ಕೈ ಬಿಡುತ್ತೆ ಎಂದು ರೈತರು ಕನಸು ಕಂಡಿದ್ದರು. ಆದರೆ ಈ ಭಾರಿ ಧಾರವಾಡ ಜಿಲ್ಲೆಯಲ್ಲಿ ಎಲ್ಲ ತಾಲೂಕಿಗಳು ಬರ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿರುವ ಬೆನ್ನಲ್ಲೆ  ಸದ್ಯ ಅಲ್ಪಸ್ವಲ್ಪ ಬೆಳೆದ ಬೆಳೆಗಳಿಗೆ ಕಳ್ಳರ ಕಾಟ ಅಲ್ಲ ವಾಮಾಚಾರದ ಕಾಟ ಹೆಚ್ಷಾಗುತ್ತಿದೆ ಎಂದು ಅನ್ನದಾತರು ಹೊಲಗಳಿಗೆ ತೆರಳಲು ಭಯ ಭೀತರಾಗಿರಾಗಿದ್ದಾರೆ. ಮತ್ತೊಂದಡೆ ಕೇಂದ್ರ‌ ಅಧ್ಯಯನ ತಂಡ ಬಂದು ಬೆಳೆ ವೀಕ್ಷಣೆ ಮಾಡಿ ಹೋಗಿದೆ ಅವರು ಕೊಡೋ ಪರಿಹಾರವು ನಮ್ಮ ಬೀಜೋಪಚಾರಕ್ಕೆ ಆಗೋದಿಲ್ಲ ಎಂದು ರೈತರು ಹೇಳುತ್ತಿದ್ದಾರೆ.‌

Latest Videos

undefined

ಹೀಗೆ ಒಣಗಿ ನಿಂತಿರೋ ಈರುಳ್ಳಿ ಗೋವಿನ ಜೋಳ್ದ ಬೆಳೆ ಮಳೆಯ ಕೊರತೆಯಿಂದ ಒಣಗುತ್ತಿರುವ ಗೋವಿನ ಜೋಳದ ಬೆಳೆ, , ಮತ್ತೋಂದರೆ  ಹೊಲದಲ್ಲಿ ಅಯ್ಯೋ ಇದೆನಾಯ್ತು ನಮ್ಮ ಪತಿಸ್ತಿರಿ ಎಂದು ಕಣ್ಣೀರು ಹಾಕುತ್ತಾ ಅಸಹಾಯಕರಂತೆ ನಿಂತಿರೋ ರೈತರು..ಇವೆಲ್ಲ ಮನಕಲುಕುವ ದೃಶ್ಯಗಳು ಕಂಡು ಬಂದಿದ್ದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲಾಳ್ ಗ್ರಾಮದಲ್ಲಿ. ಹೀಗೆ ಹೊಲಕ್ಕೆ ತೆರಳಲು ಭಯ ಬೀತರಾಗಿರುವ ಅನ್ನದಾತರು. ಇವರು ತಮ್ಮ ತಮ್ಮ ಹೊಲಗಳಿಗೆ ತೆರಳಲು ಭಯ ಬೀತರಾಗಿದ್ದಾರೆ..ಗೋವಿನ ಜೋಳದ ಹೊಲಕ್ಕೆ ವಾಮಾಚಾರವನ್ನ ಮಾಡುತ್ತಿದ್ದಾರೆ.

ಶಿವಮೊಗ್ಗ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್‌ಗೆ ನಿರ್ಬಂಧ: ಕಾರಣವೇನು?

ಹೊಲದ ಪಕ್ಕ, ಕರಿ ಬಣ್ಣದ ಗೊಂಬೆ, ಗೊಂಬೆಗೆ ಪಿನ್ ಹಾಕದ್ದಾರೆ, ತತ್ತಿ, ನಿಂಬೆ ಹಣ್ಣು, ದಾರದ ಉಂಡಿ ಸೇರಿದಂತೆ ವಾಮಾಚಾರಕ್ಕೆ ಎನೆಲ್ಲ ಸಾಮಗ್ರಿಗಳು ಬೇಕು ಅವುಗಳನ್ನೆಲ್ಲ ಇಟ್ಟು ವಾಮಾಚಾರ ಮಾಡಿದ್ದಾರೆ ನಾವು ನಮ್ಮ ಹೊಲಗಳಿಗೆ ಹೋಗಲು ಭಯ  ಎಂದು ರೈತರು ಅಳಲು ತೋಡಿಕ್ಕೊಂಡಿದ್ದಾರೆ. ಇನ್ನು ಗ್ರಾಮದಲ್ಲಿ ಸುಮಾರು 1500 ಎಕರೆ ಗೋವಿನ ಜೋಳ್ ಸದ್ಯ ಮಳೆಯಿಲ್ಲದೆ ಬೆಳೆ ಒಣಗಿ ಹೋಗುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ..ಅನ್ನದಾತನಿಗೆ ಈ ಬಾರಿ ಕೊಟ್ಡೆಯ ಮೆಲೆ‌ ಬರೆ ಎಳೆದಿದೆ ಮಳೆ..

ಇನ್ನು ಬ್ಯಾಲಾಳ ಗ್ರಾಮದ. ಸುತ್ತಮುತ್ತಲೂ ಸುಮಾರು ಐದಾರು ಕಡೆ ವಾಮಾಚಾರವನ್ನ ಮಾಡಿಸುತ್ತಿದ್ದಾರೆ. ಸದ್ಯ ಇಡಿ ಗ್ರಾಮದಲ್ಲಿ ಭಯದ ವಾತಾವರಣವಾಗಿದೆ..ಇನ್ನು ರೈತರು ತಮ್ಮ‌ತಮ್ಮ ಹೊಲಗಳಿಗೆ ಹೋಗಲು ಭಯ ಬೀತರಾಗಿದ್ದಾರೆ. ಇದಕ್ಕೆ‌ನಿದರ್ಶನ ಎಂಬಂತೆ ಓರ್ವ ಮಹಿಳೆ ವಾಮಾಚಾರದ ಸಾಮಗ್ರಿಗಳನ್ನ ಕೈ ಯಿಂದ ತೆಗೆದು ಹಾಕಿದ್ದಾಳೆ ಅವಳಿಗೆ ಸದ್ಯ ಊಟವಿಲ್ಲದ, ನೀರಿಲ್ಲದೆ ಹಾಸಿಗೆ ಹಿಡದಿದ್ದಾಳೆ ಎಂದು ಹೇಳಲಾಗುತ್ತಿದೆ. ನೀಜಕ್ಕೂ ವಾಮಾಚಾರದ ಪ್ರಭಾವ ಅಷ್ಡೊಂದು ಇದೆನಾ ಎಂದು ಸ್ಥಳಿಯ ರೈತರು ಭಯ ಬೀತರಾಗಿದ್ದಾರೆ.

Ghost ಫ್ಯಾನ್ಸ್ ಶೋ ವೇಳೆ ಶಿವಣ್ಣನ ಅಭಿಮಾನಿಗಳ ಆಕ್ರೋಶ: ಸಂತೋಷ್ ಥಿಯೇಟರ್ ಗಾಜು ಪುಡಿಪುಡಿ

ಇದರಿಂದ ಬೆಳೆದ ಬೆಳೆಗಳಿಗೆ ವಾಮಾಚಾರ ಮಾಡಿದರೆ ಮಾಡಿದ ಕಿರಾತಕರಿಗೆ ಎನೂ ಸಿಗುತ್ತೆ ಎಂದು ರೈತರು ಮಾತನಾಡುತ್ತಿದ್ದಾರೆ ಒಟ್ಟಿನಲ್ಲಿ ಜನ ಮರಳೋ ಜಾತ್ರೆ ಮರಳೋ. ಗ್ರಾಮೀಣ ಭಾಗದಲ್ಲಿ ಇನ್ನು ವಾಮಾಚಾರದ ವಾಸನೆ ಮಾತ್ರ ನಿಂತಿಲ್ಲ. ಇದರಿಂದ ಬೆಳೆದ ಬೆಳೆಗಳಿಗೆ ಸದ್ಯ ಒಂದು ಕಡೆ ಮಳೆಯಿಲ್ಲ..ಮತ್ತೊಂದಡೆ ಬೆಳೆದ ಬೆಳೆಗಳಿಗೆ ವಾಮಾಚಾರವನ್ನ ಮಾಡುತ್ತಿದ್ದಾರೆ ದುಶ್ಯಕರ್ಮಿಗಳು. ಆದರೆ ಒಂದಂತೂ ಸತ್ಯ ಅನ್ನದಾತನ ಬೆಳೆಗೆ ವಾಮಾಚಾರ ಮಾಡಿದ ದುರುಳರಿಗೆ ಆ ದೇವರೆ ಶಿಕ್ಷೆ ಕೊಡಬೇಕಿದೆ.

click me!