ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಯೂ ಸಹ ಅನೇಕ ಶಾಲಾ, ಕಾಲೇಜಿನವರೂ ಸಹ ತಮ್ಮ ಬ್ಯಾನರ್ ಗಳನ್ನು ಹಾಕಿದ್ದು, ಇವುಗಳಿಗೆ ಮಸಿ ಬಳಿಯಲಾಗಿದೆ.
ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ಮೇ.30): ಈಗ ಹೇಳಿ ಕೇಳಿ ಶಾಲಾ, ಕಾಲೇಜುಗಳ ಆರಂಭದ ಸಮಯ. ಹೀಗಾಗಿ ಪ್ರತಿಯೊಂದು ಶಾಲಾ, ಕಾಲೇಜಿನವರು ತಮ್ಮ ಶಾಲೆ, ಕಾಲೇಜುಗಳ ಬ್ಯಾನರ್ ಗಳನ್ನು ಹಾಕುವುದು ಸಾಮಾನ್ಯ. ಆದರೆ ಇಲ್ಲೊಂದು ಊರಲ್ಲಿ ಶಾಲಾ, ಕಾಲೇಜುಗಳ ಬ್ಯಾನರ್ ಗಳಿಗೆ ಮಸಿ ಬಳಿಯಲಾಗಿದೆ.
undefined
ಕೊಪ್ಪಳ (Koppala) ಜಿಲ್ಲೆ ಇದು ಶೈಕ್ಷಣಿಕವಾಗಿ (Education) ಹಾಗೂ ಸಾಮಾಜಿಕವಾಗಿ ಹಿಂದುಳಿದ ಜಿಲ್ಲೆ ಇಂತಹ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಲ್ಲೊಂದು, ಇಲ್ಲೊಂದು ದೊಡ್ಡ ದೊಡ್ಡ ಶಾಲಾ ಕಾಲೇಜುಗಳು ಆರಂಭವಾಗುತ್ತಿವೆ. ಈ ಹಿನ್ನಲೆಯಲ್ಲಿ ಆಯಾ ಶಾಲಾ, ಕಾಲೇಜಿನವರು ತಮ್ಮ ಶಾಲೆ ಮತ್ತು ಕಾಲೇಜಿನ ವೈಶಿಷ್ಟ್ಯಗಳನ್ನು ತಿಳಿಸುವ ದೃಷ್ಟಿಕೋನದಿಂದ ಬ್ಯಾನರ್ ಗಳನ್ನು ಜಿಲ್ಲೆಯ ವಿವಿದೆಡೆ ಹಾಕುತ್ತಿದ್ದಾರೆ.
UPSC ಸಿವಿಲ್ ಸರ್ವಿಸ್ ಫಲಿತಾಂಶ ಬಿಡುಗಡೆ, ಶ್ರುತಿ ಶರ್ಮಾ ದೇಶಕ್ಕೆ ಫಸ್ಟ್
ಅದೇ ರೀತಿಯಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಯೂ ಸಹ ಅನೇಕ ಶಾಲಾ, ಕಾಲೇಜಿನವರೂ ಸಹ ತಮ್ಮ ಬ್ಯಾನರ್ ಗಳನ್ನು ಹಾಕಿದ್ದು, ಇವುಗಳಿಗೆ ಮಸಿ ಬಳಿಯಲಾಗಿದೆ. ತಾವರಗೇರಾ ಪಟ್ಟಣ ಇದು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡ ಒಂದು ದೊಡ್ಡ ಹೋಬಳಿಯಾಗಿದೆ. ಇಂತಹ ಪ್ರದೇಶದಲ್ಲಿ ಶಾಲಾ ಕಾಲೇಜಿನವರು ಜನಸಾಮಾನ್ಯರಿಗೆ ತಿಳಿಯುವ ಕನ್ನಡ ಭಾಷೆಯಲ್ಲಿ ಬ್ಯಾನರ್ ಗಳನ್ನು ಹಾಕಬೇಕಿತ್ತು.
ಆದರೆ ಶಾಲಾ, ಕಾಲೇಜಿನವರು ಮಾಡಿದ್ದೇ ಬೇರೆ. ತಾವರಗೇರಾ ಪಟ್ಟಣದಲ್ಲಿ ಹಾಕಿರುವ ಶಾಲಾ,ಕಾಲೇಜಿನ ಬ್ಯಾನರ್ ಗಳು ಬಹುತೇಕ ಇಂಗ್ಲಿಷ್ ಮಯವಾಗಿವೆ. ಈ ಹಿನ್ನಲೆಯಲ್ಲಿ ಇದರಿಂದ ಆಕ್ರೋಶಗೊಂಡ ಕನ್ನಡ ಸೇನೆ ಸಂಘಟನೆಯ ಅಮರೇಶ್ ಕುಂಬಾರ್ ನೇತೃತ್ವದಲ್ಲಿ ಸಂಘಟನೆಯ ಇತರರು ಸೇರಿಕೊಂಡು ಶಾಲಾ,ಕಾಲೇಜಿನವರು ಹಾಕಿದ್ದ ಇಂಗ್ಲಿಷ್ ಭಾಷೆಯ 14 ಬ್ಯಾನರ್ ಗಳಿಗೆ ಮಸಿ ಬಳಿದಿದ್ದಾರೆ.
UDUPIಯ ಈ ಗ್ರಾಮಕ್ಕೆ ಬಂದರೆ ಮದ್ಯ -ತಂಬಾಕು ಸಿಗುವುದಿಲ್ಲ!
ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಲು ಒತ್ತಾಯ: ಇನ್ನು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ,ಇಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ಜೊತೆಗೆ ಶಾಲಾ,ಕಾಲೇಜಿನ ಆಡಳಿತ ಮಂಡಳಿಯವರು ತಾವರಗೇರಾದಂತಹ ಗ್ರಾಮೀಣ ಪ್ರದೇಶದಲ್ಲಿ ಬ್ಯಾನರ್ ಗಳನ್ನು ಹಾಕಬೇಕಾದರೆ ಕನ್ನಡದಲ್ಲಿ ಹಾಕಬೇಕು. ಅಂದಾಗ ಮಾತ್ರ ಪಾಲಕರಿಗೆ ಅವರ ಶಾಲೆ,ಕಾಲೇಜಿನ ಬಗ್ಗೆ ತಿಳಿಯುತ್ತದೆ.
ಹೀಗಾಗಿ ಮುಂದಿನ ದಿನಗಳಲ್ಲಿ ಶಾಲಾ,ಕಾಲೇಜಿನ ಬ್ಯಾನರ್ ಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಹಾಕಬೇಕು ಎನ್ನುವುದು ಕನ್ನಡ ಸೇನೆಯ ಮುಖಂಡರ ಹಾಗೂ ಕಾರ್ಯಕರ್ತರ ಒತ್ತಾಯವಾಗಿದೆ.
ಮೊಣಕೈ ನೋವಿಗೆ ಆಸ್ಪತ್ರೆಗೆ ದಾಖಲಾದವಳು ಸಾವು, ಖಾಸಗಿ ಆಸ್ಪತ್ರೆ ವಿರುದ್ಧ ಎಫ್ ಐಆರ್ ದಾಖಲು
ಒಟ್ಟಿನಲ್ಲಿ ಇಂಗ್ಲಿಷ್ ಭಾಷೆಯ ಬ್ಯಾನರ್ ಗಳನ್ನು ಹಾಕಿರುವುದನ್ನು ವಿರೋಧಿಸಿ ಇದೀಗ ತಾವರಗೇರಾ ಪಟ್ಟಣದಲ್ಲಿ ಮಸಿ ಬಳಿಯುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇನ್ನಾದರೂ ಶಾಲಾ,ಕಾಲೇಜಿನವರು ಎಚ್ಚೇತ್ತು ಜನಸಾಮಾನ್ಯರಿಗೆ ತಿಳಿಯುವ ಹಾಗೆ ಕನ್ನಡದಲ್ಲಿ ಬ್ಯಾನರ್ ಹಾಕಬೇಕಿದೆ ಅಂತಾರೆ ಕನ್ನಡ ಸೇನೆಯವರು.