ಉಡುಪಿಯಲ್ಲಿ ಮಾತ್ರ ಊಹಿಸಲು ಅಸಾಧ್ಯವಾದ ವಿದ್ಯಮಾನ ನಡೆದಿದೆ. ಕೇವಲ ಓರ್ವ ವ್ಯಕ್ತಿಯಲ್ಲ ಇಡೀ ಊರಿಗೆ ಊರೇ ತಂಬಾಕು ಮುಕ್ತವಾಗಿದೆ.
ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಮೇ.30): ಸಮಾಜವನ್ನು ಅತಿಯಾಗಿ ಬಾಧಿಸುತ್ತಿರುವ ದುಶ್ಚಟಗಳಲ್ಲಿ ತಂಬಾಕು (Tobacco) ಸೇವನೆ ಕೂಡ ಒಂದು. ದುಶ್ಚಟಗಳಿಂದ ಹೊರಬರಲು ಸಾಧ್ಯವಿಲ್ಲ ಅಂತಾನೇ ಎಲ್ಲರೂ ಭಾವಿಸುತ್ತಾರೆ. ಆದರೆ ಉಡುಪಿಯಲ್ಲಿ (Udupi) ಮಾತ್ರ ಊಹಿಸಲು ಅಸಾಧ್ಯವಾದ ವಿದ್ಯಮಾನ ನಡೆದಿದೆ. ಕೇವಲ ಓರ್ವ ವ್ಯಕ್ತಿಯಲ್ಲ ಇಡೀ ಊರಿಗೆ ಊರೇ ತಂಬಾಕು ಮುಕ್ತವಾಗಿದೆ. ನಾಳೆ ಉಡುಪಿ ಜಿಲ್ಲಾಡಳಿತ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ.
ಉಡುಪಿ ಜಿಲ್ಲೆಯ ಕಡಲತಡಿಯಲ್ಲಿರುವ ಕೋಡಿ ಗ್ರಾಮದ ಪಡುತೋನ್ಸೆ ಭಾಗಕ್ಕೆ ತಾಗಿಕೊಂಡಿರುವ ಕೋಡಿಬೆಂಗ್ರೆಯನ್ನು ತಂಬಾಕು ಮುಕ್ತ ಪ್ರದೇಶ (Tobacco free area) ಎಂದು ಜಿಲ್ಲಾಡಳಿತ ಮೇ 31ರಂದು ಅಧಿಕೃತವಾಗಿ ಘೋಷಣೆ ಮಾಡಲಿದೆ.
ಗ್ರಾಮಸ್ಥರೇ ಕೈಗೊಂಡ ನಿರ್ಧಾರ: ಕರಾವಳಿ ತೀರದ ಜನರು ಶ್ರಮಜೀವಿಗಳು. ಮೀನುಗಾರಿಕೆ ಸಹಿತ ದೇಹಕ್ಕೆ ಹೆಚ್ಚು ಶ್ರಮ ನೀಡುವ ಕೆಲಸವನ್ನು ಮಾಡುತ್ತಾರೆ. ಶ್ರಮಭರಿತ ಕೆಲಸಗಳನ್ನು ಮಾಡಿದಾಗ ಸಹಜವಾಗಿಯೇ ದುಶ್ಚಟಗಳ ಮೊರೆ ಹೋಗುವ ಪರಿಪಾಠವನ್ನು ಕಾಣುತ್ತೇವೆ. ಕೋಡಿ ಬೇಂಗ್ರೆ ಗ್ರಾಮದಲ್ಲೂ ಹೀಗೆಯೇ ಆಗಿತ್ತು, ಆದರೆ ಗ್ರಾಮದ ಹಿರಿಯರು ಮಹತ್ವದ ಕೈಗೊಂಡರು. ದುಶ್ಚಟಗಳಿಗೆ ಗ್ರಾಮದೊಳಗೆ ನೋ ಎಂಟ್ರಿ ಹೇಳಿದರು.
PM CARES FOR CHILDREN ದಾವಣಗೆರೆಯ ಅನಾಥ ಮಕ್ಕಳಿಗೆ 10 ಲಕ್ಷ ಬಾಂಡ್
ಈ ಭಾಗದ ಜನರಿಗೆ ಯಾವುದೇ ಸರ್ಕಾರವಾಗಲಿ ಆರೋಗ್ಯ ಇಲಾಖೆಯಾಗಲಿ ಒತ್ತಡ ಹೇರಿರಲಿಲ್ಲ. ಮಧ್ಯಪಾನ ನಿಷೇಧ ತಂಬಾಕು ಮುಕ್ತ ಪ್ರದೇಶವನ್ನಾಗಿಸಬೇಕೆಂಬ ಯಾವುದೇ ಆದೇಶ ಇರಲಿಲ್ಲ. ಯಾವುದೇ ಕಾಯ್ದೆಗಳು ಜಾರಿಯಾಗಿರಲಿಲ್ಲ. ಆದರೂ ಗ್ರಾಮದ ಜನರೇ ಸೇರಿ ಸ್ವಯಂಪ್ರೇರಿತರಾಗಿ ನಿರ್ಧಾರ ಕೈಗೊಳ್ಳುತ್ತಾರೆ.
ಇದು ಒಂದೆರಡು ದಿನದ ಪ್ರಯತ್ನವಲ್ಲ. ಕಳೆದ ಸುಮಾರು ಮೂರು ದಶಕಗಳಿಂದ ಇಲ್ಲಿನ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಈ ನಿರ್ಧಾರವನ್ನು ಪಾಲಿಸುತ್ತಿದ್ದಾರೆ. ಮದುವೆಯ ಮುನ್ನಾ ದಿನ ನಡೆಯುವ ಮೆಹೆಂದಿ ಕಾರ್ಯಕ್ರಮದಲ್ಲಿ ಮಧು -ಮಾಂಸವನ್ನು ನಿಷೇಧಿಸಿರುವುದು ಮಾತ್ರವಲ್ಲ ಇಡೀ ಗ್ರಾಮವನ್ನು ತಂಬಾಕು ಮುಕ್ತ ಗೊಳಿಸಿದ್ದಾರೆ.
Chitradurga; ಒಂದೇ ವೇದಿಕೆಯಲ್ಲಿ ಐದು ಜನ ಮಹನೀಯರ ಜಯಂತಿ ಆಚರಣೆ
ಅಂಗಡಿಗಳಲ್ಲೂ ಸಿಗುವುದಿಲ್ಲ ತುಂಬಾಕು: ಕೋಡಿಬೆಂಗ್ರೆ ಗ್ರಾಮ ಒಂದು ಸುಂದರ ಪ್ರವಾಸಿ ತಾಣ. ಒಂದು ಬದಿ ಸಮುದ್ರವಿದ್ದರೆ ಮತ್ತೆರಡು ಬದಿಗಳಲ್ಲಿ ನದಿ ಹರಿಯುತ್ತದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಕೂಡ ಈ ಭಾಗಕ್ಕೆ ಭೇಟಿಕೊಡುತ್ತಾರೆ. ಇಲ್ಲಿ ಭೇಟಿಕೊಡುವ ಪ್ರವಾಸಿಗರಿಗೆ ಒಂದೇ ಕೊರಗು. ಯಾವುದೇ ಅಂಗಡಿಗೆ ಹೋದರೂ ತಂಬಾಕು ಆಧಾರಿತ ಯಾವುದೇ ವಸ್ತುಗಳು ಸಿಗುವುದಿಲ್ಲ. ಏಕೆಂದರೆ ಈ ಗ್ರಾಮದ ಜನರಿಗೆ ತಂಬಾಕು ತಿನ್ನುವ ಚಟವೇ ಇಲ್ಲ. ಹಾಗಾಗಿ ಗ್ರಾಮದ ಯಾವುದೇ ಅಂಗಡಿಗೆ ಹೋದರೂ ಗುಟ್ಕಾ ವಾಗಲಿ ತಂಬಾಕ್ ಆಗಲಿ ಸಿಗುವುದಿಲ್ಲ. ಮದ್ಯ ಮಾರಾಟವೂ ಇಲ್ಲ!
ಈ ಗ್ರಾಮದಲ್ಲಿ 290 ಮನೆಗಳಿವೆ. ಇಲ್ಲಿನ ಜನರಲ್ಲಿ ಶೇಕಡ 70ರಷ್ಟು ಮೊಗವೀರರು ಇದ್ದರೆ ಉಳಿದಂತೆ ವಿವಿಧ ಜನಾಂಗದ ಜನರು ವಾಸ ಮಾಡುತ್ತಾರೆ. 12 ಅಂಗಡಿಗಳು ಗ್ರಾಮದಲ್ಲಿದ್ದು ಯಾವ ಅಂಗಡಿಗಳಲ್ಲೂ ಕೂಡ ತಂಬಾಕು ಸಿಗುವುದಿಲ್ಲ ಎಲೆ ಅಡಿಕೆಯನ್ನು ಹೊರತುಪಡಿಸಿ ಮದ್ಯ ತಂಬಾಕು ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.
BAGALKOTEಯಲ್ಲಿ ವಿದ್ಯಾರ್ಥಿಗೆ ಥಳಿತ ಪ್ರಕರಣ, ಪ್ರಿನ್ಸಿಪಾಲ್ PSI ಸೇರಿ 7 ಮಂದಿ ವಿರುದ್ಧ FIR
ಕೋಡಿಬೆಂಗ್ರೆ ಗ್ರಾಮವನ್ನು ತಂಬಾಕು ಮುಕ್ತ ಹಳ್ಳಿ ಯನ್ನಾಗಿ ಮೇ 31ರಂದು ಜಿಲ್ಲಾಡಳಿತ ಅಧಿಕೃತವಾಗಿ ಘೋಷಣೆ ಮಾಡಲಿದೆ. ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ್, ರಾಷ್ಟ್ರೀಯ ತಂಬಾಕು ನಿಯಂತ್ರಣ ವಿಭಾಗ, ಜಿಲ್ಲಾ ಸರ್ವೇಕ್ಷಣಾ ಘಟಕ ,ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಕೋಡಿಬೆಂಗ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಳೀಯ ಕೋಡಿಬೆಂಗ್ರೆ ದುರ್ಗಾಪರಮೇಶ್ವರಿ ದೇಗುಲ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಅಧಿಕೃತ ಘೋಷಣೆ ಮಾಡಲಾಗುತ್ತಿದೆ.