ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಮೇ.30): ಚಿತ್ರದುರ್ಗ (chitradurga) ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲದಲ್ಲಿರುವ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಅವರ ಮಹದಾಸೆಯಂತೆ ಒಂದೇ ವೇದಿಕೆಯಲ್ಲಿ ಸುಮಾರು ಐದು ಮಂದಿ ಮಹನೀಯರ ಜಯಂತಿ ಆಚರಿಸಲು ಕೋಟೆನಾಡು ಸಕಲ ಸಿದ್ದಗೊಂಡಿದೆ. ನಗರದ ಮುರುಘಾ ಮಠದ ಅನುಭವ ಮಂಟಪದಲ್ಲಿ ನಾಳೆ ಬೆಳಗ್ಗೆ 10 ಗಂಟೆ ಶುರುವಾಗಲಿರುವ ಕಾರ್ಯಕ್ರಮ. ಮಹಾ ಶಿವಶರಣ ಹರಳಯ್ಯ, ಬಸವ ಜಯಂತಿ, ಬುದ್ದ ಪೂರ್ಣಿಮಾ, ಅಂಬೇಡ್ಕರ್ ಜಯಂತಿ, ಬಾಬು ಜಗಜೀವನ್ ರಾಮದ ಜಯಂತಿ ಹೀಗೆ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಈ ಐದು ಮಹಾನ್ ಜ್ಞಾನಿಗಳ ಜಯಂತಿ ಆಚರಿಸಬೇಕು ಎಂದು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದೇವೆ ಎಂದು ಬಸವ ಹರಳಯ್ಯ ಸ್ವಾಮೀಜಿ ತಿಳಿಸಿದರು.
ಇನ್ನೂ ಕಾರ್ಯಕ್ರಮದಲ್ಲಿ ವಿಶೇಷವಾಗಿ ಇದೇ ಮೊಟ್ಟ ಮೊದಲಬಾರಿಗೆ ಹರಳಯ್ಯ ಗುರುಪೀಠದಿಂದ ಶ್ರೀ ಶಿವಶರಣ ಹರಳಯ್ಯ ಪ್ರಶಸ್ತಿ ಪ್ರದಾನವನ್ನು ಮಾಡಲಾಗುವುದು. ಈ ಒಂದು ಪ್ರಶಸ್ತಿಯನ್ನು ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ನೀಡಲು ಮಠ ನಿರ್ಧಿಸಿದ್ದು, ನಾಳೆಯ ಕಾರ್ಯಕ್ರಮಕ್ಕೆ ಅತಿಥಿಗಳು ಬಂದು ಗೌರವವನ್ನು ಸ್ವೀಕರಿಸಲಿದ್ದಾರೆ.
undefined
ಸಭಾಪತಿ ಆಗಬಹುದೆಂಬ ಆಸೆಯಿಂದ Basavaraj Horatti ಕೋಮುವಾದಿಪಕ್ಷಕ್ಕೆ ಶಿಫ್ಟ್
ಇದರ ಜೊತೆ ಜೊತೆಗೆ ಮಹಾನಾಯಕ ಧಾರವಾಹಿ ಖ್ಯಾತಿಯ ಜೀ ಕನ್ನಡ (Zee Kannada) ವಾಹಿನಿಯ ಬ್ಯುಸಿನೆಸ್ ಹೆಡ್ ಅಗಿರುವ ರಾಘವೇಂದ್ರ ಹುಣಸೂರು ಅವರನ್ನು ಸಮಾರಂಭದಲ್ಲಿ ಗೌರವಿಸಲಾಗುವುದು. ಹಾಗೂ ನಟ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಶ್ರೀ ಮಹಾಶಿವಶರಣ ಶೀಲವಂತ ಯುವ ಪ್ರಶಸ್ತಿಯನ್ನು ಅವರ ಬೆಂಗಳೂರಿನ ನಿವಾಸಕ್ಕೆ ತೆರಳಿ ಪ್ರಶಸ್ತಿ ಪತ್ರದೊಂದಿಗೆ ಕುಟುಂಬಕ್ಕೆ ವಿತರಿಸಿ ಗೌರವಿಸಲಾಗುವುದು ಎಂದು ಶ್ರೀಗಳು ತಿಳಿಸಿದರು.
ಇನ್ನೂ ಈ ಒಂದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶಿವಶರಣ ಹರಳಯ್ಯ ಶ್ರೀಗಳು ವಹಿಸಲಿದ್ದಾರೆ. ಈ ಘನ ವೇದಿಕೆಯಲ್ಲಿ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ನಿಜಗುಣಾನಂದ ಸ್ವಾಮೀಜಿ, ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಇನ್ನೂ ಮತ್ತಿತರ ಮಠದ ಪೂಜ್ಯರು ಕೂಡ ಆಗಮಿಸಲಿದ್ದಾರೆ.
ರಾಜಕೀಯ ತಿರುವು ಪಡೆದ, Koppalaದ ದೇವಸ್ಥಾನ ಜಿರ್ಣೋದ್ಧಾರ ವಿವಾದ
ಇದಲ್ಲದೇ ಶ್ರೀ ಮಹಾ ಶಿವ ಶರಣ ಹರಳಯ್ಯ ಮೂವೀಸ್ ನಿಂದ ನಿರ್ಮಾಣವಾಗುತ್ತಿರುವ ಮಕ್ಕಳ ಪ್ರಧಾನ ಶ್ರೀ ಮಹಾಶಿವಶರಣ ಹರಳಯ್ಯ ಚಿತ್ರದ ಚಿತ್ರೀಕರಣಕ್ಕೆ ಸಮಾರಂಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕ್ಲಾಪ್ ಮಾಡುವರು. ಈ ಚಿತ್ರಕ್ಕೆ ಹರಳಯ್ಯ ಶ್ರೀಗಳೇ ಚಿತ್ರಕತೆ, ಸಂಭಾಷಣೆ ಬರೆದಿದ್ದು, ಸಾಯಿಪ್ರಕಾಶ್ ನಿರ್ದೇಶಿಸಲಿದ್ದಾರೆ.
ಇವರೆಲ್ಲರ ಜೊತೆಗೆ ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ರಾಜ್ಯ ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು, ಆನಂದ್ ಸಿಂಗ್, ಇನ್ನಿತರ ಮುಖ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಶ್ರೀ ಬಸವ ಹರಳಯ್ಯ ಸ್ವಾಮೀಜಿ ತಿಳಿಸಿದರು.