ಚಾಮರಾಜನಗರ (ಜು.04): ಕೃಷ್ಣಮೃಗ ವನ್ಯಧಾಮ ಸುತ್ತಮುತ್ತ ಬೇಟೆ ಅವ್ಯಾಹತವಾಗಿ ನಡೆಯುತ್ತಿದೆ. ಹಾಡ ಹಗಲೇ ನಡೆಯುತ್ತಿರುವ ಕೃತ್ಯ ಬೆಚ್ಚಿ ಬೀಳಿಸುತ್ತಿದೆ.
ಚಾಮರಾಜನಗರ ತಾಲೂಕು ಕೆಲ್ಲಂಬಳ್ಳಿ ಗುಡ್ಡ, ಉಮ್ಮತ್ತೂರು ಗುಡ್ಡ, ಚಾಮರಾಜನಗರ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ ಗುಡ್ಡ ಮೊದಲಾದ ಪ್ರದೇಶಗಳಲ್ಲಿ ಅಳಿವಿನಂಚಿನಲ್ಲಿರುವ ಕೃಷ್ಣ ಮೃಗಗಳನ್ನು ಆವಾಸಸ್ಥಾನದಲ್ಲಿ ಎಗ್ಗಿಲ್ಲದೆ ಬೇಟೆಯಾಡಲಾಗುತ್ತಿದೆ.
70 ಹುಲಿಗಳ ಹಂತಕ ಕೊನೆಗೂ ಸೆರೆ! ...
ಬಂದೂಕಿನಿಂದ ಬೇಟೆಯಾಡಿ ವಾಹನಗಳಲ್ಲಿ ಸಾಗಾಣೆ ಮಾಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಾಕಷ್ಟು ಕಳ್ಳಬೇಟೆ ಶಿಬಿರಗಳಿದ್ದು, ಸಮರ್ಪಕ ಪೆಟ್ರೋಲಿಂಗ್ ನಡೆಯುತ್ತಿಲ್ಲ. ಈ ಪ್ರದೇಶಗಳ ಸುತ್ತ ಸೋಲಾರ್ ತಂತಿ ಬೇಲಿ ಇಲ್ಲದ ಕಾರಣ ಕಳ್ಳರಿಗೆ ಇನ್ನಷ್ಟು ಅನುಕೂಲವಾಗಿದೆ.
ಸಫಾರಿಗೆ ಹೋಗಿದ್ದವರಿಗೆ ಕಾಣ ಸಿಕ್ತು ಹುಲಿ ಬೇಟೆಯಾಡುವ ಅಪರೂಪದ ಈ ದೃಶ್ಯ.!
ಘೋಷಣೆಗಷ್ಟೆ ಕೃಷ್ಣಮೃಗ ವನ್ಯಧಾನ ಎಂದು ಸೀಮಿತವಾಗಿದ್ದು, ಕಳ್ಳಬೇಟೆ ಮಾತ್ರ ವ್ಯಾಪಕವಾಗಿಯೇ ನಡೆಯುತ್ತಿದೆ.
ಕೃಷ್ಣಮೃಗಗಳ ಸಂರಕ್ಷಣೆಗೆ 2016-17 ನೇ ಸಾಲಿನಲ್ಲಿ ವನ್ಯಧಾಮ ಘೋಷಣೆಯಾಗಿದ್ದು, ಈ ಪ್ರದೇಶಗಳಲ್ಲಿ ನೀರಿನ ಕೊರತೆಯೂ ಹೆಚ್ಚಾಗಿಯೇ ಇದೆ. ನೀರಿಗಾಗಿ ವನ್ಯಧಾಮ ಬಿಟ್ಟು ಹೊರಬರುವ ಕೃಷ್ಣ ಮೃಗಗಳಿಂದ ರೈತರ ಬೆಳೆಗಳು ಹಾಳಾಗುತ್ತಿದೆ.
ಅಲ್ಲದೇ ಹೀಗೆ ಹೊರಬರುವ ಎಷ್ಟೋ ಕೃಷ್ಣಮೃಗಗಳು ಬೇಟೆಗಾರರ ಬಂದೂಕಿಗೆ ಬಲಿಯಾಗುತ್ತಿವೆ. ವನ್ಯಜೀವಿ ಕಾಯ್ದೆ ಕಠಿಣವಾಗಿದ್ದರೂ ಇಲ್ಲಿ ಕೃಷ್ಣಮೃಗಗಳಿಗೆ ಮಾತ್ರ ಸೂಕ್ತ ರಕ್ಷಣೆ ಸಿಗುತ್ತಿಲ್ಲ.