ಶಿವಮೊಗ್ಗ (ಜು.04) : ಸೂಡಾದಿಂದ ಅನಧಿಕೃತ ಲೇ ಔಟ್ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಶಿವಮೊಗ್ಗ ನಗರದ ಹೊರವಲಯದ ಸೂಳಿಬೈಲ್‌ನಲ್ಲಿ ಅನುಮತಿ ಪಡೆಯದೆ ನಿರ್ಮಾಣ ಮಾಡಿದ್ದ ಲೇಔಟ್ಗಳನ್ನಿಂದು ಸೂಡಾ ( ಶಿವಮೊಗ್ಗ - ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ) ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ತೆರವು ಕಾರ್ಯ ನಡೆಸುತ್ತಿದ್ದಾರೆ.
ಸೂಳೆಬೈಲು ನಲ್ಲಿ ಸರ್ವೆ ನಂಬರ್ 95 ರಲ್ಲಿ ಕಂದಾಯ ಜಾಗದಲ್ಲಿ ಚನ್ನಗಿರಿ ಮೂಲದ ವ್ಯಕ್ತಿಯೊಬ್ಬರು ಸೂಡಾದಿಂದ ಅನುಮತಿ ಪಡೆಯದೆ ಲೇಔಟ್ ನಿರ್ಮಾಣ ಮಾಡಿದ್ದರು. ಬಾಕ್ಸ್ ಡೈನೇಜ್ ನಿರ್ಮಿಸಿ ಜನರಿಗೆ ನಿವೇಶನ ಮಾರಾಟಕ್ಕೆ ಮುಂದಾಗಿದ್ದರು.
ನಾಲ್ಕು ಎಕರೆ ಬೆಳೆ ನಾಶ ಮಾಡಿದ ಕಾಡಾನೆಗಳು : ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ...
ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿದಾಗ ಅಕ್ರಮವಾಗಿ ಲೇಔಟ್ ನಿರ್ಮಿಸಿರುವುದು ದೃಢಪಟ್ಟಿದ್ದರಿಂದ ಸೂಡಾ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು.
ಭೂ ಒತ್ತುವರಿದಾರರೇ ಎಚ್ಚರ; ಬಿಸಿ ಮುಟ್ಟಿಸಲು ಸಿದ್ಧವಾಗಿದೆ ಸರ್ಕಾರ
ಅನಧಿಕೃತವಾಗಿ ಲೇಔಟ್ ರಚನೆ ಮಾಡಿರುವ ವಿಷಯ ಪ್ರಾಧಿಕಾರದ ಗಮನಕ್ಕೆ ಬಂದಿದ್ದು, ಸಭೆಯಲ್ಲಿಯೂ ಚರ್ಚೆಯಾಗಿ ಅನುಮತಿ ಪಡೆಯದೆ ರಚಿಸಿದ್ದ ಲೇಔಟ್ ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ತೆರವುಗೊಳಿಸಲಾಗಿದೆ ಎಂದು ಸೂಡಾ ನಗರ ಯೋಜನಾ ನಿರ್ದೇಶಕ ಎಚ್.ಆರ್.ಶಂಕರ್ ಮಾಹಿತಿ ನೀಡಿದ್ದಾರೆ.